ಪಠ್ಯಾಧಾರಿತ ಅಶೋಕನ ಶಿಲಾಶಾಸನ ವೀಕ್ಷಣೆ


ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಅಂತಿಮ ಐಚ್ಚಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ವಿಭಾಗದ ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ ಬಿ ಇವರ ನೇತೃತ್ವದಲ್ಲಿ ಪಠ್ಯಾಧಾರಿತ ವಿಷಯಕ್ಕೆ ಅನುಗುಣವಾಗಿ ಶ್ರೀಗವಿಮಠದ ಬೆಟ್ಟದ ಮೇಲಿರುವ ಅಶೋಕನ ಶಿಲಾಶಾಸನವನ್ನು ತೋರಿಸುವಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ವಿದ್ಯಾರ್ಥಿಗಳನ್ನು ಕುರಿತು ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ರಾಜು ಹೊಸಮನಿ ಇವರು ಮಾತನಾಡಿ ಬೌದ್ಧ ಧರ್ಮದ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡುವ ನಿಟ್ಟಿನಲ್ಲಿ ಆಶೋಕ ಮಹಾರಾಜನು ಈ ನಾಡಿನ ಕೆಲವಡೆ ಶಿಲಾಶಾಸನಗಳನ್ನು ನಿರ್ಮಿಸಿದನು. ಅದರಲ್ಲಿ ಕೊಪ್ಪಳದ ಗವಿಮಠದ ಬೆಟ್ಟದ ಮೇಲೆ ಹಾಗೂ ಮಳೆಮಲ್ಲೇಶ್ವರ ದೇವಸ್ಥಾನದ ಇಂದ್ರಕೀಲ ಬೆಟ್ಟದ ಮೇಲಿರುವ ಶಾಸನಗಳು ಸೇರಿವೆ. ಪ್ರಾಕೃತ ಮತ್ತು ಪಾಳಿ ಭಾಷೆಗಳಲ್ಲಿರುವ ಇವೆರಡು ಶಾಸನಗಳ ಅರಿವು ಅಧ್ಯಯನಕಾರರಿಗೆ ಅವಶ್ಯಕವಾಗಿದೆ. ಕೊಪ್ಪಳದ ಕೀರ್ತಿಯನ್ನು ಮತ್ತು ಹಿರಿಮೆಯನ್ನು ಚಾರಿತ್ರಿಕವಾಗಿ ಹೆಚ್ಚಿಸಿವೆ ಎಂದು ಮಾತನಾಡಿದರು.
ಕನ್ನಡ ಪ್ರಾಧ್ಯಾಪಕ ಯಮನೂರಪ್ಪ ನಾಯಕ್, ಸುಮಿತ್ರಾ ಪೂಜಾರ ಹಾಗೂ ಐಚ್ಚಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಇದ್ದರು.

Please follow and like us:
error