ಪಂ. ದಿ. ಶ್ರೀ ಮಲ್ಲಿಕಾರ್ಜುನ ಕೋಟಗುಂಡಿ ಸ್ಮರಣಾರ್ಥ ಗಾನ-ನಿನಾದ ವಿಶೇಷ ಸಂಗೀತ ಕಾರ್ಯಕ್ರಮ

ಭಾಗ್ಯನಗರ : ಡಾ|| ಪಂಡಿತ ಪುಟ್ಟರಾಜ ಸಂಗೀತ ಶಿಕ್ಷಣ ಸಂಸ್ಥೆ,(ರಿ) ಇವರ ಆಶ್ರಯದಲ್ಲಿ ಪಂ. ದಿ. ಶ್ರೀ ಮಲ್ಲಿಕಾರ್ಜುನ ಕೋಟಗುಂಡಿ ಇವರ ಸ್ಮರಣಾರ್ಥ ಗಾನ-ನಿನಾದ ವಿಶೇಷ ಸಂಗೀತ ಕಾರ್ಯಕ್ರಮವನ್ನು ಭಾಗ್ಯನಗರದಲ್ಲಿ ದಿನಾಂಕ ೧೬-೦೧-೨೦೧೯ ಬುಧವಾರ ಸಂಜೆ ೦೬-೧೫ಕ್ಕೆ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ ಕೋಟಗುಂಡಿ ವಹಿಸಲಿದ್ದು ಉದ್ಘಾಟಕರಾಗಿ ವಯಸ್ಕರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ, ಮುಖ್ಯ ಅಥಿತಿಗಳಾಗಿ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ವರದಿಗಾರರಾದ ಸೋಮರೆಡ್ಡಿ ಅಳವಂಡಿ, ದಾನಪ್ಪ ಕವಲೂರ, ನೀಲಕಂಠಪ್ಪ ಮೈಲಿ ಹಾಗೂ ವೀರಪ್ಪ ಶ್ಯಾವಿ ರವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಸಂಗೀತ ಶಿಕ್ಷಕರಾದ ಅಂಬಣ್ಣ ಕೊಪ್ಪರದ ಹಾಗೂ ೨೦೧೮-೧೯ನೇ ಸಾಲೀನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಪಾಟೀಲ್‌ರವರಿಗೆ ವಿಶೇಷ ಸನ್ಮಾನವನ್ನು ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ, ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಗೀತೆ, ಗೋವಿಂದರಾಜ ಬೊಮ್ಮಲಾಪುರ ಬಾನ್ಸುರಿ ವಾದನ, ಸದಾಶಿವ ಪಾಟೀಲ್‌ರಿಂದ ಸುಗಮ ಸಂಗೀತ, ಪ್ರಭಾಕರ ಪಟವಾರಿ ಹಿಂ. ಶಾಸ್ತೀಯ ಸಂಗೀತ, ಮಾರುತಿ ದೊಡ್ಡಮನಿ ವಚನ ಸಂಗೀತ, ಪಂಚಾಕ್ಷರಕುಮಾರ ಬೊಮ್ಮಲಾಪೂರ ಕನ್ನಡ ಗಜಲ್, ಶ್ರೀಶೈಲ್ ಬಡಿಗೇರ ಭಕ್ತಿ ಸಂಗೀತ, ಕು. ಶಕುಂತಲಾ ಬೆನ್ನಾಳ ತತ್ವಪದಗಳು, ಕು. ವಿಜಯಲಕ್ಷ್ಮೀ ಹಂಚಿನಾಳ ಭಾವಗೀತೆಗಳು, ಬಿ.ಪಿ ಮರೇಗೌಡರ್ ಜಾನಪದಗೀತೆಗಳು, ಯಲ್ಲಪ್ಪ ಕೊಟಗುಂಡಿ ದಾಸವಾಣಿ, ಕು. ವಾಣಿಶ್ರೀ ಹನುಮಸಾಗರ ವಯೋಲಿನ್ ಹಾಗೂ ಕು. ಶಶಾಂಕ ಅವರಾದಿ ತಬಲಾಸೋಲೋ ಕಾರ್ಯಕ್ರಮಗಳು ಜರುಗಲಿವೆ.
ವಾದ್ಯ ಸಹಕಾರದಲ್ಲಿ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ತಬಲಾದಲ್ಲಿ ರಾಘವೇಂದ್ರ ಗಂಗಾವತಿ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ರಿದಂ ಪ್ಯಾಡ್‌ನಲ್ಲಿ ಶ್ರೀ ವೇಂಕಟೇಶ ಹೊಸಮನಿ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯಶಿಕ್ಷಕರು ಕನಕಗಿರಿ ಕು. ಮಂಜುಳಾ ಶ್ಯಾವಿರವರು ನಡೆಸಿಕೊಡಲಿದ್ದಾರೆಂದು ಸಂಗೀತಗಾರರಾದ ಯಲ್ಲಪ್ಪ ಕೊಟಗುಂಡಿರವರು ತಿಳಿಸಿದ್ದಾರೆ.

Please follow and like us:
error