ಪಂಚಕಳಸದ ಗುದ್ನೇಶ್ವರನ ತೇರು

ಗುದ್ನೆಶ್ವರನ ಜಾತ್ರೆ ಕುಕನೂರು

ಇದೇ ಡಿಸೆಂಬರ ೨೨ರಂದು ಸಾಯಂಕಾಲ ೬-೦೦ ಗಂಟೆಗೆ ಐತಿಹಾಸಿಕ ಭವ್ಯ ಪರಂಪರೆಯ ಗುದ್ನೇಶ್ವರನ ಪಂಚಕಳಸ ತೇರು ಜರುಗುವುದು. ಕುಕನೂರಿನ ನೆರೆಯ ಹಾಗೂ ಪೂರ್ವಕ್ಕೆ ಇರುವ ಗುದ್ನೇಶ್ವರನ ತೇರು ನಾಡಿನಲ್ಲಿಯೇ ಬಹು ವಿಶಿಷ್ಟವಾದುದಾಗಿದೆ. ನಾಡಿನ ಬಹತೇಕ ಎಲ್ಲ ದೇವಾಲಯಗಳ ಜಾತ್ರೆಗಿಂತಲೂ ಪೂರ್ವದಲ್ಲಿಯೇ ಜಾತ್ರೆ ನೆವೇರುವುದರ ಜೊತೆಗೆ ಪಂಚಕಲಶ ಹೊಂದಿರುವಂತಹ ವೈಶಿಷ್ಟ್ಯತೆಯನ್ನು ಸಹ ಪಡೆದಿದೆ. ಸಾಮಾನ್ಯವಾಗಿ ಎಲ್ಲ ರಥಗಳಿಗೆ ಒಂದೇ ಕಳಸ ಇರುವುದು ವಾಡಿಕೆ ಆದರೆ ಈ ಗುದ್ನೇಶ್ವರನ ತೇರಿಗೆ ಐದು ಕಳಸಗಳಿರುವುದೊಂದು ವಿಶೇಷ ಗುದ್ನೇಶ್ವರ ಮಠದ ಅದಿದೈವ ರುದ್ರಮುನೀಶ್ವರ ಜನವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿಯಾಗಿದ್ದಾನೆ. ರುದ್ರಮುನಿಶ್ವರ ಜನವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿಯಾಗಿದ್ದಾನೆ, ರುದ್ರಮುನೀಶ್ವರರು ತಮ್ಮ ಲಿಂಗಲೀಲಾವಿಲಾಸದಿಂದಲೇ ಜನ-ಮನದ ಕ್ಷೆಟಿಗಳನ್ನು ದೂರಿಕರಿಸಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ರೇವಣಸಿದ್ಧ ಹಾಗೂ ಸುಂದರ ನಾಚಿಯರೇ ರುದ್ರಮನೀಶ್ವರರ ತಂದೆ-ತಾಯಿಗಳವರು ಕಾಂಚಿಪುರದಿಂದ ಸಂಚಾರ ಗೈಯುತ್ತ ಮಂಗಳವಾಡೆಗೆ ಆಗಮಿಸಿದ ದಂಪತಿಗಳು ಆ ನಾಡಿನ ಜನರ ಸುಖ-ದುಃಖಗಳಿಗೆ ಸ್ಪಂದಿಸಿ ಸಹಕಾರ ಸಹಾಯವನ್ನು ನೀಡುತ್ತಾರೆ.
ಇತ್ತ ಮೂರು ತಿಂಗಳು ಗರ್ಭಿಣಿಯಾದ ಸಂದರ ನಾಚಿ ತವರು ಮನೆಗೆ ಹೋಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ರೇವಣಸಿದ್ಧರು ತಮ್ಮ ಶಿವಯೋಗ ಶಕ್ತಿಯಿಂದ ಗರ್ಭಸ್ತಪಿಂಡವನ್ನು ಹೊರತೆಗೆದು ಭೂಮಿ(ಭೂ-ಮಾತೆ)ಯಲ್ಲಿ ಹೂಳಿಸುತ್ತಾರೆ ಒಂಬತ್ತು ತಿಂಗಳುತರುವಾಯದಲ್ಲಿ ಭೂಮಿಯಿಂದ ಹೊರತೆಗೆಸಿದ ರುದ್ರಮನಿಶ್ವರರು ಇಂದಿನ ಯುಗದಲ್ಲಿ ಅಕ್ಷರಶಃ ಇದೊಂದು ಸವಾಲಿನ ಪ್ರಶ್ನೆಯೆಂದು ತೋರಿದರೂ ಸಹ ಪ್ರನಾಳ ಶಿಸುವಿನ ಪ್ರಯೋಗವನ್ನು ಕಂಡಾಗ ಅಲ್ಲಗಳೆಯಲಾಗದು ರೇವಣಸಿದ್ಧರ ಆರೈಕೆಯೊಂದಿಗೆ ರಂಭಾಪೂರಿಯಲ್ಲಿ ಬೆಳೆದ ರುದ್ರಮುನೀಶ್ವರ ಅಕ್ಷರಾಭ್ಯಾಸದಲ್ಲಿ ಪಾರಂಗತರಾದನಾಗಿ ಪಿತಾಶ್ರೀಗಳ ಅಪ್ಪಣೆ ಪಡೆದು ದೇಶ ಸಂಚಾರ ಗೈಯುತ್ತ ಕಲ್ಯಾಣಕ್ಕೆ ಆಗಮಿಸಿದನು ಶರಣ ಸಂದೋಹದಲ್ಲಿ ಸಮ್ಮೀಳತಗೊಂಡ ರುದ್ರಮನಿಸ್ವಾಮಿ ಮಹಿಮಾಪುರುಷನಾದನು.
ಕಲ್ಯಾಣಕ್ರಾಂತೀಯ ನಂತರ ಶರಣರ ಅಮೂಲ್ಯ ಕೊಡುಗೆಗಳಾದ ವಚನ ಸಾಹಿತ್ಯದ ಕಟ್ಟುಗಳೊಂದಿಗೆ ಚನ್ನಬಸವಣ್ಣನವರ ಸಮೇತ ಉಳುವಿಗೆ ಬಂದು ಕೆಲವು ದಿನಗಳ ನಂತರ ಪುನಃ ದೇಶ ಸಂಚಾರ ಗೈಯ್ಯುತ್ತ ಶಿವಾನುಭವ ಭೋಧನೆ ಮಾಡುತ್ತಾಯರಂಬರೆಯ (ಯಲಬುರ್ಗಾ) ನಾಡಿಗೆ ಬಂದರು ಚಿಕ್ಕಮ್ಯಾಗೇರಿ ಕಲ್ಲೂರು ಸಿದ್ನೇಕೊಪ್ಪ ಅಂಕಲಗಿ ಹಾಗೂ ಕುಕನೂರಿಗೆ ಆಗಮಿಸಿ ಇಲ್ಲಿಯೇ ನೆಲೆ ನಿಂತರು. ಇಲ್ಲಿಯ ಭಕ್ತಾಧಿಗಳಿಗೆ ಜ್ಞಾನಾಮೃತವನ್ನು ಕರುಣಿಸುತ್ತಾ ಲಿಂಗಪೂಜೆಯಲ್ಲಿಯೇ ನಿರತರಾದರು. ಕುಕನೂರಿನ ಆಸ್ಥಾನಿಕರು ಕೊಡಮಾಡಿದ ಜಮೀನಲ್ಲಿ ಸ್ವಲ್ಪ ಸಮಯದಲ್ಲಿಯೇ ಸಮಾರು ೫೦೦ ಎಕರೆ ಭೂಮಿಯಲ್ಲಿ ಸದಾಕಾಲ ಫಸಲನ್ನು ಕೊಡುವಂತಹ ಹುಣಸೆ ಬೀಜವನ್ನು ಬಿತ್ತಿದರು ಬಯಲು ನಾಡಿನಲ್ಲಿಯೂ ಸಮೃದ್ಧಿ ಬೆಳೆ ಕೊಡುವಂತಹ ಕೃಷಿ ಸಾಹಿತ್ಯವನ್ನು ನೀಡಿದದವರು

ರುದ್ರಮುನೀಶ್ವರರು ಆಸ್ಥಾನಿಕರ ಕರೆಯ ಮೇರೆಗೆ ಬಿತ್ತುವ ಕಾರ್ಯವನ್ನು ನಿಲ್ಲಿಸಿ ತಮ್ಮ ಕಾಯಕಕ್ಕೆ ಚ್ಯುತಿ ಬಂದುದಕ್ಕಾಗಿ ಲಿಂಗಪೂಜೆ ಗೈಯ್ಯುತ್ತಾ ಆ ಲಿಂಗದ ಬೆಳಕಿನಲ್ಲಿಯೇ ಬೆಳಗಾದರು(ತಾವು ಲಿಂಗ ಪೂಜೆಗೆ ಜನ ರುದ್ರಮುನಿ ಶಿವಯೋಗಿಗಳ ಗುದ್ದಿನಲ್ಲಿಯೇ ಲಿಂಗೈಕ್ಯರಾಗಿದ್ದರಿಂದ ಗುದ್ನೇಶ್ವರನೆಂದು ಕರೆಯಲಾರಂಭಿಸಿದರು ಈಗಲೇ ಇದೇ ಹೆಚ್ಚು ಜನ ಜರಿತವಾಗಿದೆ. ಪೂಜ್ಯರು ಬಿತ್ತನೆಗಾಗಿ ಬಳಸಿದ ಎತ್ತುಗಳು ಶೆಡ್ಡಿ, ಬಣವೆ ಎಲ್ಲವೂ ಶಿಲೆಯ ರೂಪ ಹೊಂದಿದವೆಂಬುದು ಆ ಖ್ಯಾತಯಿಕೆ ಇದೆ ಆ ಹಿನ್ನಲೇಯಲ್ಲಿ ಈಗಲೂ ಜೋಡು ಬಸವಣ್ಣನ ಗುಡಿ ಕಲ್ಲಿನ ಬಣವೆಯನ್ನು ಈಗಲೂ ನೋಡಬಹುದಾಗಿದೆ. ಶ್ರದ್ಧೆಯಿಂದ ನಡೆದುಕೊಂಡ ಭಕ್ತರ ಇಷ್ಟಾರ್ಥಗಳೂ ಪೂರೈಸುತ್ತಲಿವೆ ಈ ಜಾತ್ರೆಯ ವೈಶಿಷ್ಟ್ಯವೇನೆಂದರೆ ಪ್ರತಿಯೊಬ್ಬರು ಮಂಡಾಳು ಭಜಿ ತಿನ್ನುವುದು ಹಾಗೂ ಮೇಲೆ ಕಬ್ಬಿನಗಳ ಮನೆಗೆ ಒಯ್ಯುವುದು ಇಲ್ಲಿಯ ಸಮಪ್ರದಾಯವಾಗಿದೆ. ಮನೆಯಲ್ಲಿ ಪ್ರತಿಯೊಬ್ಬರು ಮಾದಲಿ, ಸಜ್ಜಿರೊಡ್ಡಿ, ಗುರೆಳ್ಳುಚಟ್ನಿ, ಶೆಂಗಾಚಟ್ನಿ ಮಾಡಿ ನೈವೇದ್ಯ ಮಾಡುತ್ತಾರೆ.
ಕುಕನೂರಿನಿಂದ ಕೂಗಳತೆಲ್ಲಿರುವ ಗುದ್ನೇಶ್ವರ ಜಾತ್ರೆ ಸಡಗರ ಸಂಭ್ರಮ ಪೂಜೆ ಕೈಂಕರ್ಯಗಳೆಲ್ಲ ಗುದ್ನೇಪ್ಪನಮಠದಲ್ಲಿ ನಡೆದರೂ ಸಹಿತ ೨-೩ ಕಂಪನಿ ನಾಟಕಗಳ ಭರಾಟೆ ಸಿನಿಮಾ ಥೇಟರಗಳು ಪೂರ್ತಿ ಇಡೀ ರಾತ್ರಿ ಜಾಗರಣೆ ಹೊಂದುವುದು ಕುಕನೂರಿನಲ್ಲಿ ಮಾತ್ರ ಹೀಗಾಗಿ ಈ ಜಾತ್ರೆಗೊಂದಿಷ್ಟು ವಿಶೇಷತೆ.
ಕಣ್ಣಿದ್ದವರು ಕನಕಗಿರಿ ನೋಡಬೇಕು
ಕಾಲಿದ್ದವರು ಹಂಪಿ ನೋಡಬೇಕು
ಹೊಸದಾಗಿ ಮದುವೆಯಾದವರು
ಕುಕನೂರ ಜಾತ್ರೆ ನೋಡಬೇಕು

ಲೇಖಕರು/-
ಶ್ರೀ ಎಸ್. ಎಂ. ಕಂಬಾಳಿಮಠ ನಿವೃತ್ತ ಶಿಕ್ಷಕರು
ಕಲ್ಯಾಣ ನಗರ, ೩ನೇ ಕ್ರಾಸ್ ಕಿನ್ನಾಳ ರೋಡ,
ಕೊಪ್ಪಳ, ತಾಜಿ: ಕೊಪ್ಪಳ ಮೋ. ೯೪೮೧೮೬೩೬೫೮

Please follow and like us:
error