ನ. 29 ರಂದು ಮುನಿರಾಬಾದನಲ್ಲಿ ನಿರ್ಗಮನ ಪಥಸಂಚಲನ

ಕೊಪ್ಪಳ ನ. 27 : ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ “ನಿರ್ಗಮನ ಪಥಸಂಚಲನ” ಕಾರ್ಯಕ್ರಮವನ್ನು ನ. 29 ರಂದು ಬೆಳಿಗ್ಗೆ 8 ಗಂಟೆಗೆ ಕೊಪ್ಪಳ ತಾಲೂಕಿನ ಮುನಿರಾಬಾದಿನ ಕೆ.ಎಸ್.ಆರ್.ಪಿ ತರಬೇತಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾದ ಆಶಿತ್ ಮೋಹನ್ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕಾರ್ಯಕ್ರಮ ವಿವರ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದ ವಿವರ ಇಂತಿದೆ. ಮುಖ್ಯ ಅತಿಥಿಗಳ ಆಗಮನ, ಶಸ್ತ್ರವಂದನೆ ಸ್ವೀಕಾರ, ಕವಾಯತು ಪರಿವೀಕ್ಷಣೆ, ಪಥ ಸಂಚಲನ, ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಗಳ ನಿರ್ಗಮನ, ಸ್ವಾಗತ, ವರದಿ ವಾಚನ, ಬಹುಮಾನ ವಿತರಣೆ, ಮುಖ್ಯ ಅತಿಥಿಗಳ ಭಾಷಣ, ವಿದಳನ ಪಥಸಂಚಲನ, ಅಶ್ವಾರೋಹಿ ದಳದವರಿಂದ ಟೆಂಟ್ ಪೆಗ್ಗಿಂಗ್ ಪ್ರದರ್ಶನ, ಛಾಯಾಗ್ರಹಣ ಮತ್ತು ಉಪಹಾರ ಕಾರ್ಯಕ್ರಮ ಜರುಗಲಿದೆ .

Please follow and like us:
error