ನ್ಯಾಯಾಲಯಗಳ ಸಂಕೀರ್ಣ ಭೂಮಿ ಸ್ವಾಧೀನಕ್ಕೆ ಪರಿಹಾರ ಹಣ ಬಿಡುಗಡೆ ಸಂಸದರಿಗೆ ಸನ್ಮಾನ

Kannadanet NEWS :  ಕೊಪ್ಪಳ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ, ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ ಪರಿಹಾರ ಹಣ 1 ಕೋಟಿ  85 ಲಕ್ಷ ಹಣವನ್ನು ಬಿಡುಗಡೆ ಮಾಡಲು ಅತ್ಯಂತ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ವಕೀಲರ ಹೋರಾಟಕ್ಕೆ ಜಯವನ್ನು ತಂದುಕೊಟ್ಟಿರುವ ಕೊಪ್ಪಳದ ಜನಪ್ರಿಯ ಸಂಸದ  ಸಂಗಣ್ಣ ಕರಡಿ ರವರನ್ನು ಸನ್ಮಾನ  ಮಾಡಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದರು ಶೀಘ್ರವಾಗಿ ಸದರಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಜನರ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ   ಹೆಚ್. ಹೇಚ್. ಮುರುಡಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ್ ಉಪಾಧ್ಯಕ್ಷ, ಜಿ.ಸಿ  ಹಮ್ಮಗಿ ಹಿರಿಯ ವಕೀಲರಾದ ಎ. ವಿ. ಕಣವಿ ಆರ್. ಬಿ. ಅಳವಂಡಿ, ವಿ. ಡಿ. ಬಾಳಗೋಂಡರ್  ಪಿ. ಯು. ಪರುತಗೌಡ್ರ, ಎಮ್. ಎ. ಹನುಮಂತರಾವ್, ಗಾಳೆಪ್ಪ ಶಿವಪುರ, ನಾಗರಾಜ ದೇಸಾಯಿ, ಗಿರೀಶ ಜಾದವ್, ಹನಮೇಶ,ಅಮರೇಶ ಕುರಿ, ಹನುಮಂತ ಕುಟುಗನಹಳ್ಳಿ ವಕೀಲರು ಹಾಗೂ ಸಂಘದ ಸದಸ್ಯರು ಹಾಜರಿದ್ದರು

Please follow and like us:
error