ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕೊಪ್ಪಳ ತಂಡಕ್ಕೆ ದ್ವಿತೀಯ ಬಹುಮಾನ

ಕೊಪ್ಪಳ ,ಮಾರ್ಚ್ ೦೧: ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ನಾಟಕ ವಿಭಾಗ ಪ್ರತಿನಿಧಿಸಿದ್ದ ಶಿಕ್ಷಕರ ಕಲಾಸಂಘ ಅಭಿನಯಿಸಿದ ” ರಾವಿ ನದಿಯ ದಂಡೆಯಲ್ಲಿ ” ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ.
ಅಸಗರ್ ವಜಾಹತ್ ರಚಿತ ಡಾ.ತಿಪ್ಪೇಸ್ವಾಮಿ ಅನುವಾದಿಸಿರುವ ಈ ನಾಟಕವನ್ನು ಕೊಪ್ಪಳ ನೌಕರರು ಮನೋಜ್ಞವಾಗಿ ಅಭಿನಯಿಸಿದರು.ಲಕ್ಷ್ಮಣ ಪೀರಗಾರ ನಿರ್ದೇಶಿಸಿರುವ ನಾಟಕದಲ್ಲಿ ಪ್ರಾಣೇಶ ಪೂಜಾರ, ರಾಮಣ್ಣ ಶ್ಯಾವಿ, ನಾಗರಾಜನಾಯಕ ಡಿ.ಡೊಳ್ಳಿನ, ದಯಾನಂದ, ಯೋಗನರಸಿಂಹ, ಮಂಜುನಾಥ ಪೂಜಾರ, ಮುಕುಂದ ಅಮೀನಗಡ, ರಮೇಶ ಪೂಜಾರ, ಸುಮತಿ, ಭೂಮಿಕಾ ಶ್ಯಾವಿ, ಯಮನೂರಪ್ಪ, ಯೋಗಪ್ಪ, ಮತ್ತಿತರರು ಮನೋಜ್ಞ ಪ್ರದರ್ಶನ ನೀಡಿದರು. ಹಿನ್ನೆಲೆ ಸಂಗೀತ ಫಕೀರಪ್ಪ ಗುಳದಳ್ಳಿ ನೀಡಿದರು.
ಧಾರವಾಡ ಆರ್ .ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬಹುಮಾನ ವಿತರಿಸಿದರು.ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.?ಡಾಕ್ಷರಿ ಮತ್ತಿತರರು ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳ ೨೫ ಕ್ಕೂ ಹೆಚ್ಚು ನಾಟಕಗಳು ಸ್ಪರ್ಧೆಯಲ್ಲಿ ಇದ್ದವು. ಮಲ್ಲಪ್ಪ ಹೊಂಗಲ್, ಸನ್ಮತಿ ಅಂಗಡಿ, ವಿಜಯಕುಮಾರ್ ದೊಡ್ಡಮನಿ ಸ್ಪರ್ಧೆಯ ತೀರ್ಪುಗಾರರರಾಗಿದ್ದರು.ಹಾಸನ ತಂಡ ಪ್ರಥಮ , ಧಾರವಾಡ ತಂಡ ತೃತೀಯ ಬಹುಮಾನ ಗಳಿಸಿದವು
ಕೊಪ್ಪಳ ನೌಕರರ ತಂಡದ ಈ ಸಾಧನೆಗೆ ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡಿ.ಡೊಳ್ಳಿನ ಕೊಪ್ಪಳ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಾದ ಉಮೇಶ ಪೂಜಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ದೊಡ್ಡಬಸಪ್ಪ ನಿರಲಕೇರಿ, ಗ್ರಂಥಾಲಯ ಇಲಾಖೆಯ ಶಂಕರಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ. ಶೇಕ್ ಉಪ ನಿರ್ದೇಶಕರಾದ ಸಿದ್ಧೇಶ್ವರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದ್ದಕ್ಕೆ ತಂಡದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error