ನೋವು ನಲಿವು ದಿನನಿತ್ಯದ ಹಗಲು ರಾತ್ರಿ ಇದ್ದಂತೆ-ಡಾ.ಶಂಭು ಬಳಿಗಾರ್

ಉಳಿಪೆಟ್ಟು ತಿಂದಕಲ್ಲು ಶಿಲೆಯಾಗಿ ನಿಲ್ಲುತ್ತದೆ ಉಳಿಪೆಟ್ಟು ತಿನ್ನದ ಕಲ್ಲುಕಲ್ಲಾಗಿಯೇ ಇರುತ್ತದೆ. ಶಿಲೆಗೆ ಉಳಿಯ ಪೆಟ್ಟಿನ ಸಂಸ್ಕಾರ ನೀಡಿದಾಗಅದು ಶಿಲೆಯಾಗುತ್ತದೆ, ಕಲೆಯಾಗುತ್ತದೆ ಪೂಜಿಸುವ ಮೂರ್ತಿಯಾಗಿ ಬೆಳಗುತ್ತದೆ. ಹಾಗೆಯೇ ಮನು? ಸಹ ಕಲ್ಲಿನ ಹಾಗೆ ಇರುತ್ತಾನೆ ಮೌಲ್ಯಗಳು ಅನ್ನುವ ಸಂಸ್ಕಾರ ನೀಡಿದಾಗ ಸಮಾಜ ಮೆಚ್ಚುವ ವೆಕ್ತಿಯಾಗಿ, ಶಕ್ತಿಯಾಗಿ ಬೆಳೆಯುತ್ತಾನೆ ಅಂತಹ ಸಂಸ್ಕಾರ ಪಡೆದ ವ್ಯೆಕ್ತಿಗಳು ನಾವಾದಾಗತಮ್ಮ ಬದುಕು ಸಾರ್ಥವಾಗುವದು. ಬದುಕುಅನ್ನೋದು ಬಹಳ ಸುಂದರಅದರಲ್ಲಿ ನೋವು ನಲಿವು ಇದ್ದೆಇರುತ್ತದೆ. ನೋವು ನಲಿವು ದಿನನಿತ್ಯದ ಹಗಲು ರಾತ್ರಿಇದ್ದಂತೆಕತ್ತಲಾದಮೇಲೆ ಬೆಳಕು ಮೂಡಲೇಬೇಕು ಇವುಗಳನ್ನು ಸಮವಾಗಿ ಸ್ವೀಕರಿಸಿ ಸಾಗುವದೇ ನಿಜವಾದ ಬದುಕುಎಂದು ನಿವೃತ್ತ ಪ್ರಾಚಾರ್ಯರುಖ್ಯಾತಜಾನಪದ ವಿದ್ವಾಂಸರಾದ ಡಾ.ಶಂಭು ಬಳಿಗಾರ್ ಅಭಿಪ್ರಾಯಪಟ್ಟರು .

ನಗರದ ಸಂಸ್ಥಾನ ಶ್ರೀ ಗವಿಮಠದಲ್ಲಿ ಶ್ರೀ.ಮ. ನಿ.ಜ. ಪರಮ ಪೂಜ್ಯ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿಜರಗುವ ಬೆಳಕಿನಡೆಗೆ ೧೨೫ನೇ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದಅವರುಇವತ್ತಿನಆಧುನಿಕಯುಗದಲ್ಲಿಕೌಟುಂಬಿಕ, ಸಾಮಾಜಿಕ ಸಂಬಂಧಗಳ ಬೆಸುಗೆ ಕಡಿಮೆಯಾಗುತ್ತಿದೆಎಂದು ಕಳವಳ ವ್ಯೆಕ್ತಪಡಿಸುತ್ತಎಲ್ಲಕಿಂತದೊಡ್ಡ ಸಂಪತ್ತುಗಳು ಅಂದರೆನಮ್ಮಕೌಟುಂಬಿಕ, ಸಾಮಾಜಿಕ ಸಂಬಂಧಗಳು ಅಣ್ಣಾತಂಗಿ, ಅಪ್ಪಅಮ್ಮಎಲ್ಲರೂಅನೋನ್ಯವಾಗಿ ನೋವು ನಲಿವುಗಳಲ್ಲಿ ಭಾಗಿಯಾಗಿ ಸಾಗಿಸುವದೇ ನಿಜವಾದಜೀವನಅಂತಹಜೀವನ ಸದಾಆನಂದಮಯವಾಗುತ್ತದೆ ನಾವೆಲ್ಲರೂ ಸಂಬಂಧಗಳನ್ನು ಬಹಳ? ಪ್ರೀತಿಸಬೇಕು, ಗೌರವಿಸಬೇಕು. ನಮ್ಮ ಶ್ರೀಮಂತಿಕೆ ಯಾವುದರಲ್ಲಿ ಅಳೆಯಬೇಕೆಂದರೆ ನಾವು ನಮ್ಮತಂದೆತಾಯಿ, ಅಣ್ಣ, ತಂಗಿ, ತಮ್ಮಇತರ ಭಾಂದವ್ಯಗಳ ಜೊತೆಎ?ಅನೋನ್ಯವಾಗಿಇದ್ದೇವೆಅನ್ನುವವದು ನಮ್ಮ ಸಂಪತ್ತಿನ ಮಾನದಂಡವಾಗಬೇಕು.ಈ ಅನೋನ್ಯಯಾದ ಪ್ರೀತಿ ಬಂಧನ ನಿಜವಾದ ನಮ್ಮ ಸಂಪತ್ತು.ಈ ಜಗಮೆಚ್ಚುವ ಸಂಪತ್ತಿನ ಶ್ರೀಮಂತಿಕೆ ನಮ್ಮದಾಗಬೇಕು.ನಮ್ಮ ಬದುಕಿನಲ್ಲಿ ಸಂಸ್ಕಾರ ಸಂಸ್ಕೃತಿ ಬಹಳ ದೊಡ್ಡದು ನಮ್ಮ ಬದುಕಿನ ಶೈಲಿಯಲ್ಲಿಯೂ ಸಹ ಸಂಸ್ಕೃತಿಎದ್ದುಕಾಣುವಂತಿರಬೇಕು.ನಾವು ಧರಿಸುವಉಡುಗೆ ತೊಡುಗೆಗಳಲ್ಲಿ ನಮ್ಮ ಪರಂಪರೆ ಬೆಳಗಬೇಕು ಸಂಸ್ಕೃತಿಯ ಸಂಕೇತವಾಗಿರಬೇಕು. ಕೇವಲ ಬದುಕು ಸಾಗಿಸುವದೇಜೀವನವಲ್ಲ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ, ಪೋಷಿಸಿ, ಬೆಳೆಸಿಕೊಂಡು ಹೋಗುವದು ಶ್ರೇ? ಜೀವನವಾಗಿದೆ. ಮಕ್ಕಳು ತಂದೆತಾಯಿಯರತ್ಯಾಗವನ್ನು, ಪ್ರೀತಿಯನ್ನುಅರಿತುಅವರ ಸೇವೆ ಮಾಡಬೇಕು. ಹೆತ್ತವರಸೇವೆಗಿಂತದೊಡ್ಡ ಭಾಗ್ಯ ಮತ್ತೊಂದಿಲ್ಲ.ಅವರಿಗೆಕೀರ್ತಿತರುವ ಮಕ್ಕಳಾಗಿ ಬೆಳೆಯಬೇಕು. ನೀವು ಮತ್ತು ನಿಮ್ಮ ಪೋ?ಕರಜೀವನ ಸಾರ್ಥಗೊಳಿಸುವ ನಿಟ್ಟಿನತ್ತತಾವೆಲ್ಲರೂ ಹೆಜ್ಜೆ ಹಾಕಬೇಕುಎಂದುಭಾಗವಹಿಸಿದ ಮಕ್ಕಳಿಗೆ ಕಿವಿಮಾತು ಹೇಳಿದರು..
ಪರಮ ಪೂಜ್ಯಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.ಆರಂಭದಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಸಂಗೀತ ಪಾಠಶಾಲೆ ಶಿಕ್ಷಕರು ಹಾಗೂ ಸಂಗೀತಕಲಾವಿದರಾದ ಡಿ ಹನುಮಂತಕುಮಾರ್ ಲಿಂಗನಬಂಡಿಅವರಿಂದ ಸಂಗೀತಕಛೇರಿಜರುಗಿತು. ಶ್ರೀ ಗವಿಸಿದ್ದೇಶ್ವರ ಪದವಿಕಾಲೇಜಿನ ವಿದ್ಯಾರ್ಥಿಕಲಾವಿದ ಮುದುಕಪ್ಪತಬಲಾ ಸಾಥ್ ನೀಡಿದರು ಶ್ರೀ ಮಠದ ಸಾವಿರಾರು ಭಕ್ತರು ಹಾಜರಿದ್ದರು.

Please follow and like us:
error