ನೇತ್ರದಾನ ಮಾಡಿದ ಕುಟುಂಬದ ೫ ಸದಸ್ಯರು

ಕೊಪ್ಪಳ- ಬದುಕಿದಾಗ ನಾವು ಮತ್ತೊಬ್ಬರಿಗೆ ಎನೂ ಮಾಡಲು ಸಾಧ್ಯವಿಲ್ಲದಿದ್ದಾಗ ಸತ್ತ ಮೇಲಾದರೂ ಇತರರಿಗೆ ಸಹಾಯವಾಗಲು ನೇತ್ರದಾನ ಮಹತ್ತರ ಕಾರ್ಯವಾಗಿದೆ. ಕೊಪ್ಪಳದ ಗೌರಿಅಂಗಳದ ನಿವಾಸಿಯಾದ ದಿವಂಗತ ತಿಮ್ಮಪ್ಪ ಹಡಪದ ಇವರ ಕುಟುಂಬದ ಸದಸ್ಯರಾದ ನಾಗರತ್ನ (ಮಡದಿ ೫೫ ವರ್ಷ), ಪ್ರಕಾಶ (ಹಿರಿಯ ಮU, ೩೧ ವರ್ಷ), ವೀರೇಶ (ಎರಡನೇ ಮಗ, ೨೮ ವರ್ಷ), ವಿಜಯ (ಮೂರನೇಯ ಮಗ, ೨೪ ವರ್ಷ) ಯಮನೂರಪ್ಪ (ವಿರೇಶ ಇವರ ದೊಡ್ಡಮ್ಮನ ಮಗ) ತಮ್ಮ ೫ ಜನರ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೂಲತ: ಹೊಸಪೇಟೆಯ ತಾಲೂಕಿನ ಕಮಲಾಪುರ ಗ್ರಾಮದವರಾದ ಇವರು ೨೦ ವರ್ಷಗಳ ಹಿಂದೆ ಕೊಪ್ಪಳಕ್ಕೆ ಉದ್ಯೋಗ ಹರಿಸಿ ಬಂದು ನೆಲೆಸಿದ್ದೂ, ಗಡಿಯಾರ ಕಂಬದ ಹತ್ತಿರ ಕಟಿಂಗ್ ಸೆಲೂನ್ ನಡೆಸುತಿದ್ದಾರೆ.

ತಿಮ್ಮಪ್ಪ ಹಡಪದ ಅವರು ಅಕಾಲಿಕ ಅನಾರೋಗ್ಯದಿಂದ ತಿರಿಕೊಂಡು ನಾಳೆಗೆ ೧ ವರ್ಷ ಆಗುತ್ತಲಿದೆ. ಅವರು ಬದುಕಿದ್ದಾಗ ಅವರೊಂದಿಗೆ ನೇತ್ರದಾನ ಮಾಡುವ ಕುರಿತು ನಿರ್ಧರಿಸಿದ್ದೆವು. ಅವರ ಪ್ರಥಮ ಪುಣ್ಯಸ್ಮರಣೆಯ ದಿನದ ಸವಿನೆನಪಿಗಾಗಿ ನಮ್ಮ ಕುಟುಂಬದ ಎಲ್ಲಾ ಸದಸ್ಯರು ನೇತ್ರದಾನ ಮಾಡಿದ್ದೆವೆ ಎಂದು ಅವರ ಹಿರಿಯ ಮಗನಾದ ಇಂಜಿನಿಯರ ಪದವಿಧರ ಸಧ್ಯ ಸ್ವಂತ ಅಂಗಡಿ ನಡೆಸುತ್ತಿರುವ ಪ್ರಕಾಶ ಹೇಳುತ್ತಾರೆ. ಇಂದು ಶ್ರೀ ಗವಿಮಠಕ್ಕೆ ಆಗಮಿಸಿ ಪೂಜ್ಯ ಶ್ರೀಗಳ ಆಶಿರ್ವಾದವನ್ನು ಪಡೆದು ಧನ್ಯತೆಯನ್ನು ಮೆರೆದರು. ಪೂಜ್ಯ ಶ್ರೀಗಳು ಇವರ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಗವಿಮಠವು ಪ್ರತಿವರ್ಷ ಜಾತ್ರೆಯಲ್ಲಿ ವಿಶೇಷ ಜಾಥಾ ಹಮ್ಮಿಕೊಂಡಿದ್ದು ಕಳೆದ ವರ್ಷ ಕೃಪಾದೃಷ್ಟಿ ಜಾಥಾ ಹಮ್ಮಿಕೊಂಡು ನೇತ್ರದಾನದ ಮಹತ್ವದ ಕುರಿತು ಜನರಲ್ಲಿ ಚಿಂತನೆಯನ್ನು ಬೆಳೆಸಲಾಗಿತ್ತು.

Please follow and like us:
error