ನೆರೆ ಸಂತ್ರಸ್ಥರ ಪರಿಹಾರ ಸಂಗ್ರಹಣಾ ಕೇಂದ್ರ ಪ್ರಾರಂಭ 

ವರುಣನ ಆರ್ಭಟಕ್ಕೆ  ಬಾಗಲಕೋಟೆ, ಬೆಳಗಾವಿ,ರಾಯಚೂರು, ಯಾದಗಿರಿ ಸೇರಿದಂತೆ ನಾನಾ ಜಿಲ್ಲೆಗಳು  ಮಹಾಮಳೆಯಿಂದ ತತ್ತರಿಸಿವೆ. ಅನೇಕ ಗ್ರಾಮಗಳು ಜಲಾವೃತವಾಗಿವೆ.  ಸಾವಿರಾರು ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಜಾನುವಾರುಗಳು ನೀರುಪಾಲಾಗುತ್ತಿವೆ.  ಸಂತ್ರಸ್ಥರನ್ನು ಸ್ಥಳಾಂತರ ಮಾಡಿದ್ದಾರೆ. ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳು ಕಾಣಿಸುತ್ತೇವೆ.

ಸದರಿ ಜಿಲ್ಲೆಯ ಸಂತ್ರಸ್ಥರಿಗೆ ನೆರವಿಗೆ ಬರಬೇಕಾಗಿದೆ. ಅವರಿಗೆ ಜೀವನೋಪಾಯ ವಸ್ತುಗಳ, ಔಷಧಿಗಳ  ಅಗತ್ಯವಿದೆ. ಈ ಮಹತ್ತರ ಕಾರ್ಯದಲ್ಲಿ  ಸಂಘಸಂಸ್ಥೆಗಳು, ಮಹಾಜನತೆ, ಸಾರ್ವಜನಿಕರು  ಭಾಗವಹಿಸುವುದು ತೀರಾ ಅಗತ್ಯವಿದೆ. ಈ ಮೂಲಕ ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಲು  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ  ಕೊಪ್ಪಳ ನಗರದ ಜವಹಾರ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಮೇಲ್ಗಡೆ ಇರುವ ಕಲ್ಯಾಣಮಂಟಪದಲ್ಲಿ  ಪರಿಹಾರ ಸಾಮಗ್ರಿಗಳನ್ನು ಸಂಗ್ರಹ ಕೇಂದ್ರವನ್ನು  ಆ. ೯ ರಂದು ಬೆಳಗ್ಗೆ  ೧೦ ಗಂಟೆ ಪ್ರಾರಂಭಿಸಾಲುಗತ್ತದೆ. ಐದು ದಿನಗಳ ಕಾಲ ಸಂಗ್ರಹಕಾರ್ಯ  ಬೆಳಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೂ ನಡೆಯುತ್ತದೆ. ದಾನಿಗಳು ತಮ್ಮ  ಸಹಾಯಸ್ತವನ್ನು ಚಾಚಿ, ಸ್ವಯಂ ಪ್ರೇರಣೆಯಿಂದ ತಂದು ಪರಿಹಾರ ಸಾಮಗ್ರಿಗಳನ್ನು ನೀಡಲು ವಿನಂತಿ.
ಕೊಡಗು ಸಂತ್ರಸ್ಥರಿಗೆ ಸಹಾಯ ಮಾಡುವ ಕಾರ್ಯದಲ್ಲಿ ಕೈಜೋಡಿಸಿದ್ದು, ಇಲ್ಲಿ ಸ್ಮರಿಸಬಹುದು. ಈಗ ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿದ್ದರಿಂದ ಈಗಲೂ ನೆರವು ನೀಡುವುದಕ್ಕೆ ಮತ್ತೊಮ್ಮೆ ಕೈಜೋಡಿಸಿ.

ಏನೇನು ಕೊಡಬಹುದು ?
೧) ಹೊಸಬಟ್ಟೆಗಳು, ಹೊದಿಕೆ, ಕಂಬಳಿ, ಚಾಪೆಗಳು,
೨) ಅಕ್ಕಿ ಬೆಳೆ, ದವಸಧಾನ್ಯಗಳು
೩) ಬಿಸ್ಕೇತ್ ಹಾಗೂ ಇತರ ಸಂರಕ್ಷಿತ ಒಣಆಹಾರ
೪) ಚಪ್ಪಲಿಗಳು
೫) ರೇನ್ ಕೋಟ್ , ಸ್ವೇಟರ್ ,
೬ ) ಜನರಲ್ ಮೆಡಿಸಿನ್ 
೭) ಟೂಥ್ ಬ್ರೆಸ್, ಪೇಸ್ಟ್ , ಸೋಪು, 
೮) ಟೆಟ್ರಾಪ್ಯಾಕ್ ಹಾಲು , ಜ್ಯೂಸ್ 
೯) ತಾಡಪತ್ರೆಗಳು, ವಾಟರ್ ಬಾಟಲ್ ಸೇರಿದಂತೆ ಮೊದಲಾದವು.

ಡಾ. ಶ್ರೀನಿವಾಸ ಹ್ಯಾಟಿ 
ಪ್ರಧಾನಕಾರ್ಯದರ್ಶಿ 
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ 


ಸಂಪರ್ಕಕ್ಕಾಗಿ – ೯೪೮೩೨೮೫೦೮೮,೯೦೦೮೯೯೬೬೪೬,೯೪೪೮೮೧೪೧೫೬
—————————

Please follow and like us:
error