ನೆರೆ ಸಂತ್ರಸ್ತರಿಗೆ ಸ್ವಾಮಿ ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ನೆರವು

ಕೊಪ್ಪಳ, ೯: ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಲಯನ್ಸ್ ಕ್ಲಬ್ ಕೊಪ್ಪಳ ಇವರ ಸಹಯೋಗದೊಂದಿಗೆ ಉತ್ತರ-ಕರ್ನಾಟಕ ಭಾಗದ ನೆರೆ ಪೀಡಿತ ಸಂತ್ರಸ್ತರಿಗೆ ಆಹಾರ ಮತ್ತು ಇನ್ನೀತರ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿ ಗದಗದ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಗಂಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ಸುಮಾರು ೧೦ ಸಾವಿರ ರೊಟ್ಟಿಗಳು, ೨೫ ಕೆಜಿ ಅಕ್ಕಿಯ ೬೦ ಚೀಲಗಳು, ೨೬ ಬಾಕ್ಸ್ ಬೀಸ್ಕೇಟ್, ೨೧ ಚೀಲದ ಬಟ್ಟೆಗಳು, ೪ ಚೀಲದ ಹಾಸಿಗೆ ಮತ್ತು ಹೊದಿಕೆಗಳು, ೫ ಚೀಲ ನೀರಿನ ಪ್ಯಾಕೇಟ್‌ಗಳು, ೫ ಬಾಕ್ಸ್ ಸಿಹಿ ತಿನಿಸುಗಳು, ೨ ಬಾಕ್ಸ್ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಇನ್ನೀತರ ಅಗತ್ಯ ಸಾಮಾನುಗಳನ್ನು ಒಂದು ಮಿನಿ ಲೋಡ ವಾಹನದಲ್ಲಿ ನೆರೆ ಪೀಡಿತ ಪ್ರದೇಶ ಹೊಳೆ ಆಲೂರಿಗೆ ಸಾಗಿಸಲಾಗಿದೆ ಎಂದು ಶಾಲಾ ಪ್ರಾಚಾರ್ಯರು   ರುದ್ರಸ್ವಾಮಿಯವರು ತಿಳಿಸಿದರು.

ಆಹಾರ ವಸ್ತುಗಳನ್ನು ಸಂಗ್ರಹಿಸಲು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೨ ಕೊಠಡಿಗಳನ್ನು ಬಳಸಿಕೊಳ್ಳಲಾಗಿರುತ್ತದೆ. ಸಂತ್ರಸ್ತರು ಮಳೆಯ ಪ್ರವಾಹದಿಂದ ತಮ್ಮ-ತಮ್ಮ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುತ್ತಾರೆ. ಇವರಿಗೆ ಸಹಾಯ ಹಸ್ತ ನೀಡಲು ನಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಶಾಲಾ ಸಿಬ್ಬಂದಿಯವರು ಮತ್ತು ಕೊಪ್ಪಳ ಲಯನ್ಸ್ ಕ್ಲಬ್‌ನ ಸದಸ್ಯರುಗಳು ಮನಃ ಪೂರ್ವಕವಾಗಿ ಸ್ವ-ಇಚ್ಚೆಯಿಂದ ಸಹಾಯವನ್ನು ನೀಡಿರುತ್ತಾರೆ ಇವರೆಲ್ಲರಿಗೂ ಧನ್ಯವಾದಗಳು ಎಂದು ಶಾಲಾ ಆಢಳಿತ ಮಂಡಳಿಯ ಕಾರ್ಯದರ್ಶಿಗಳು ಲಯನ್ ಬಸವರಾಜ ಬಳ್ಳೊಳ್ಳಿಯವರು ಮಾತನಾಡಿ ತಿಳಿಸಿದರು.

Please follow and like us:
error