ನೂತನ ಕೊಪ್ಪಳ ಬಿ ಜೆಪಿ ಮಂಡಲ ಅಧ್ಯಕ್ಷರ ಆಯ್ಕೆ


ಕೊಪ್ಪಳ, ನ.೧೩: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಚುನಾವಣಾ ಪ್ರಭಾರಿಗಳಾದ ಮಾ. ನಾಗರಾಜ್ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಮಂಡಲಗಳ ಹಾಗೂ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂತನವಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚಂದ್ರಶೇಖರ ಮುಸಾಲಿ, ಕನಕಗಿರಿಯಲ್ಲಿ ಇನ್ನೊಂದು ಮಂಡಲದ ರಚನೆಯ ಸಲುವಾಗಿ ರಾಜ್ಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ರಾಜ್ಯ ಕಚೇರಿಯಿಂದ ಘೋಷಣೆಯಾಗುವ ನಿರೀಕ್ಷೆ ಇದೆ. ಕೊಪ್ಪಳ ನಗರ ಮಂಡಲದ ಅಧ್ಯಕ್ಷರಾಗಿ ಸುನೀಲ ಹೆಸರೂರು, ಕೊಪ್ಪಳ ಗ್ರಾಮೀಣ ಮಂಡಲದ ಅಧ್ಯಕ್ಷರಾಗಿ ಪ್ರದೀಪ ಹಿಟ್ನಾಳ, ಯಲಬುರ್ಗಾ ಮಂಡಲದ ಅಧ್ಯಕ್ಷರಾಗಿ ವಿಶ್ವನಾಥ ಮರಿಬಸಪ್ಪನವರ್ ಹಾಗೂ ಕುಷ್ಟಗಿ ಮಂಡಲದ ಅಧ್ಯಕ್ಷರಾಗಿ ಬಸವರಾಜ ಹಳ್ಳೂರು ಇವರು ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ವಿಭಾಗ ಪ್ರಭಾರಿ ನೇಮಿರಾಜ ನಾಯಕ್, ಜಿಲ್ಲಾ ಚುನಾವಣಾ ಸಹ ಪ್ರಭಾರಿ ಆರ್.ಬಿ ಪಾನಗಂಟಿ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಕೆ ಶರಣಪ್ಪ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಚಂದ್ರಶೇಖರ ಕವಲೂರು, ನರಸಿಂಗರಾವ್ ಕುಲ್ಕರ್ಣಿ, ಶಶಿಧರ ಕವಲಿ, ಮಂಡಲ ಚುನಾವಣಾ ಅಧಿಕಾರಿಗಳಾದ ತಿಪ್ಪೇರುದ್ರಸ್ವಾಮಿ, ಅಪ್ಪಣ್ಣ ಪದಕಿ, ಹೇಮಲತಾ ನಾಯಕ್, ಜಿಲ್ಲಾ ಮುಖಂಡರಾದ ರಾಜು ಬಾಕಳೆ, ಅಮರೇಶ ಕರಡಿ, ಸಿ.ವಿ ಚಂದ್ರಶೇಖರ, ಸಿ.ಹೆಚ್ ಪಾಟೀಲ, ಕೆ ಮಹೇಶ, ಹಾಲೇಶ್ ಕಂದಾರಿ, ಶೋಭಾ ನಗರಿ, ವಾಣಿಶ್ರೀ ಮಠದ, ವೀಣಾ ಬನ್ನಿಗೋಳ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error