ನುಡಿದಂತೆ ನಡೆದ ಸರ್ಕಾರ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೩೧, ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗುಡಗೇರಿ ಹಾಗೂ ಕವಲೂರ ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಕಾಂಗ್ರೆಸ್ ಸರ್ಕಾರದ ೫ ವರ್ಷಗಳ ಸಾಧನೆಗಳು ಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಜಯಭೇರಿಯಾಗಲಿದೆ. ಅನ್ನಭಾಗ್ಯ, ಮೈತ್ರಿ, ಮನಶ್ವಿನಿ, ಅಲ್ಪಸಂಖ್ಯಾತರ ಕಲ್ಯಾಣ, ಉನ್ನತ ಶಿಕ್ಷಣ, ವಿದ್ಯಾಸಿರಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸರ್ವಾಂಗಿಣ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆಗಳು ದೇಶದಲ್ಲಿಯೇ ಮನೆಮಾತಾಗಿ ಕರ್ನಾಟಕ ರಾಜ್ಯವನ್ನು ದೇಶದ ಅರ್ಥವ್ಯವಸ್ಥೆಯಲ್ಲಿ ನಂ:೧ ರಾಜ್ಯವನ್ನಾಗಿ ಮಾಡಿದ ಹೆಗ್ಗಳಿಗೆ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಕೊಪ್ಪಳ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ವಿಶೇಷವಾಗಿ ನೀರಾವರಿ ಯೋಜನೆಗಳು, ಶೈಕ್ಷಣಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರದ ಎಲ್ಲಾ ಗ್ರಾಮಗಳು ಮತ್ತು ನಗರವನ್ನು ಅಭಿವೃದ್ದಿಯಾಗಿದ್ದು ಈ ೫ ವರ್ಷದ ಅವಧಿಯಲ್ಲಿ. ಕ್ಷೇತ್ರದ ಜನತೆ ಅಭಿವೃದ್ಧಿಗೆ ಕೈ ಜೋಡಿಸಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿಯಾದ ನನ್ನನ್ನು ಜಯಭೇರಿಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ತಾ.ಪಂ.ಸದಸ್ಯ ಸಿದ್ದಲಿಂಗಸ್ವಾಮಿ ಇನಾಮದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಕುರುಗೋಡ ರವಿ, ಮುಖಂಡರುಗಳಾದ ಪ್ರಸನ್ನ ಗಡಾದ, ಭರಮಪ್ಪ ನಗರ, ಬಸವರಾಜ ಹಾರೋಗೇರಿ, ಕುಮಾರ ಮಜ್ಜಿಗಿ, ನಜೀರ ಅಳವಂಡಿ, ಕೌಶಲ್ ಚೋಪ್ರಾ, ತೋಟಪ್ಪ ಸಿಂಟ್ರ, ಹೊನ್ನಪ್ಪಗೌಡ, ನೀಲಪ್ಪ ಜಾಣಗಾರ, ಯಂಕನಗೌರ ಮುರಕನಾಳ, ಹಾಲಪ್ಪ ಗುಡಗೇರಿ, ಮೈನುಸಾಬ ಮುಲ್ಲಾ, ಸಂಗರಡ್ಡಿ ಹಾಗೂ ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error