ನೀರು ನೈರ್ಮಲ್ಯ ಸ್ವಚ್ಛತೆ ಹಾಗೂ ಋತುಚಕ್ರದ ನಿರ್ವಹಣೆ

ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಕ್ರಮ ಯಶಸ್ವಿ
ಕೊಪ್ಪಳ ಸೆ. Koppal News : ಕೊಪ್ಪಳ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್ (ಗ್ರಾ) ವತಿಯಿಂದ ನೀರು ನೈರ್ಮಲ್ಯ ಸ್ವಚ್ಛತೆ ಹಾಗೂ ಋತುಚಕ್ರದ ನಿರ್ವಹಣೆ ಕುರಿತು ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಾಗೂ ಯೂನಿಸೆಫ್ ಸಹಯೋಗದೊಂದಿಗೆ “ವಾಶ್” ಯೋಜನೆಯಡಿ ನೀರು, ನೈರ್ಮಲ್ಯ, ಸ್ವಚ್ಛತೆ ಹಾಗೂ ಋತುಚಕ್ರ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಾಗೂ ಶನಿವಾರದಂದು ಜಿ.ಪಂ. ಜೆ.ಹೆಚ್. ಪಟೀಲ್ ಸಂಭಾಗಣದಲ್ಲಿ ಆಯೋಜಿಸಲಾಗಿತ್ತು.  
ಮೊದಲನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನರೇಂದ್ರನಾಥ ತೊರವಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ, ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಶುಚಿತ್ವ ಹಾಗೂ ವೈಯಕ್ತಿಕ ಶೌಚಾಲಯಗಳ ಬಳಕೆ ಮತ್ತು ಸುಸ್ಥಿರತೆ ಕುರಿತು ಅರಿವು ಮೂಡಿಸಲು ಈ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಯೂನಿಸೆಫ್‌ನ ರಾಜ್ಯ ಸಮಾಲೋಚಕರಾದ ದಿನೇಶ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರಾಜ್ಯ ಸಮಾಲೋಚಕರಾದ ಮಣಿಕಂಠ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಜ್ಯೂನಿಯರ್ ಪ್ರೋಗ್ರಾಮ್ ಆಫಿಸರ್‌ರಾದ ಮಹಾದೇವಮ್ಮ, ಸ್ನೇಹಾ ಎನ್.ಜಿ.ಒ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಮಸ್ವಾಮಿ ಕೃಷ್ಣನ್ ಹಾಗೂ ಹಿರಿಯ ಆರೋಗ್ಯ ತಜ್ಞರಾದ ಡಾ. ಬಸವರಾಜ ಸಜ್ಜನ್‌ರವರಿಂದ ತರಬೇತಿ ಕಾರ್ಯಕ್ರಮಕ್ಕೆ ಹಾಜಾರದ ಸಿಬ್ಬಂದಿಗಳಿಗೆ ನೀರು, ನೈರ್ಮಲ್ಯ, ಸ್ವಚ್ಛತೆ, ಋತುಚಕ್ರ ನಿರ್ವಹಣೆ ಹಾಗೂ ವೈಯಕ್ತಿಕ ಶೌಚಾಲಯಗಳ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು.
ಪಂಚಾಯತ್‌ರಾಜ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಒಟ್ಟು ೧೫೦ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಇನ್ನುಳಿದಂತೆ, ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಜಿಲ್ಲಾ ಸಮಾಲೋಚಕರು, ಯೂನಿಸೆಫ್‌ನ ಜಿಲ್ಲಾ ಹಾಗೂ ತಾಲೂಕು ಸಮಾಲೋಚಕರು ಪಾಲ್ಗೊಂಡಿದ್ದರು.

Please follow and like us:
error