ನೀರನ್ನು ಮಿತವಾಗಿ ಬಳಸಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

ಕೊಪ್ಪಳ-೧೯  : ಮನುಷ್ಯ ಜೀವಕ್ಕೆ ಅತ್ಯವಶ್ಯkoppal_mla_raghavendra_hitnalವಿರುವ ಜೀವ ಜಲದ ಸದ್ಬಳಕೆಯಾಗಬೇಕು. ನದಿಯ ತೀರದಲ್ಲಿರು ಗ್ರಾಮಗಳಿಗೂ ಸತತ ಬರದಿಂದ ಕುಡಿಯುವ ನೀರಿಗೂ ಸಹ ತೊಂದರೆ ಉಂಟಾಗಿದೆ. ಆದ ಕಾರಣ ಪ್ರತಿಯೊಬ್ಬರು ನೀರಿನ ಸರಿಯಾದ ಉಪಯೋಗ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ ಉಂಟಾಗದಂತೆ ಕೊಳವೆ ಬಾವಿಗಳನ್ನು ಕೊರಿಸಲಾಗಿದ್ದು, ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದು ಖಾಸಗಿ ಬೋರ್‌ವೇಲ್‌ಗಳಿಂದಲು ನೀರು ಪಡೆಯಲು ಸೂಚಿಸಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹೇಳಿದರು. ಕಾತರಕಿ-ಗುಡ್ಲಾನೂರ್ ಗ್ರಾಮದಲ್ಲಿ ರೂ.೭.೫ ಲಕ್ಷ ವೆಚ್ಚದ ಕೆ.ಆರ್.ಡಿ.ಎಲ್ ವತಿಯಿಂದ ನಿರ್ಮಾಣಗಿಂಡ ಶುದ್ಧಕುಡಿಯುವ ನೀರಿನ ಘಟಕ ಉದ್ಗಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಬೋಮರೆಡ್ಡಿ, ಮುಖಂಡರುಗಳಾದ ವೆಂಕನಗೌಡ್ರ ಹೀರೆಗೌಡ್ರ, ಪ್ರಸನ್ನ ಗಡಾದ, ಸೋಮಣ್ಣ ಬಾರಕೇರ, ಬಾಳಪ್ಪ ಬಾರಕೇರ, ಶಂಕರಗೌಡ್ರ ಹಿರೆಗೌಡ್ರ, ಯಲ್ಲನಗೌಡ್ರ ಮಾಲಿಪಾಟೀಲ್, ಗ್ರಾ.ಪಂ ಅಧ್ಯಕ್ಷರು ಮಲ್ಲಮ್ಮ ಮಾಹಾತಪ್ಪನವರು, ತಾ.ಪಂ ಗುರುದೇವಮ್ಮ, ನಾಗರಾಜ ಹುರಕಡ್ಲಿ, ಬಸವರಾಜ ಅಂಗಡಿ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply