ನೀನೆ ರಾಜಕುಮಾರ ಕಿರು ಚಿತ್ರ ಮೂಹರ್ತ


ಕೊಪ್ಪಳ : ಜ. ೧೮ ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ನೀನೆ ರಾಜಕುಮಾರ ಕಿರು ಚಿತ್ರದ ಮೂಹರ್ತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಸೇವೆ ಹಾಗೂ ಸಾಹಿತ್ಯದ ಮೂಲಕ ವಿಶಿಷ್ಟವಾದ ತಮ್ಮದೆ ಚಾಪು ಮೂಡಿಸುತ್ತಿರುವ ಕೊಪ್ಪಳ ಕಲಾವಿದರಿಂದ ಮತ್ತೊಂದು ಕಿರುಚಿತ್ರವಾದ ನೀನೆ ರಾಜಕುಮಾರ ನಿರ್ಮಾಣವಾಗುತ್ತಿದ್ದು ಪೊಲಿಸ್ ಅಧಿಕಾರಿ ಗಣೇಶ ಎಸ್.ಎಸ್ ಕ್ಲಾಪ್ ಮಾಡಿದರು ಇದೇ ಸಂದರ್ಭದಲ್ಲಿ ಪುಟ್ಟಣ ಕಣಗಾಲ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಿರು ಚಿತ್ರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು
ಈ ಸಂದರ್ಭದಲ್ಲಿ ಸಾಹಿತಿ ನಿರ್ದೆಶಕ ಬಿ.ಎನ್. ಹೊರಪೇಟಿ, ಬಸವರಾಜ ಮರದೂರ, ಸೋಮರಡ್ಡಿ ಅಳವಂಡಿ, ಶಿವಕುಮಾರ ಹಿರೇಮಠ, ಉಮೇಶ ಪೂಜಾರ, ಸಂತೋಷ ಕುಮಾರ, ವಿರೇಂದ್ರ, ದಸ್ತಗೀರ, ವೈಭವ ಹಾಗೂ ಚಿತ್ರಬಳಗ ಸೇರಿದಂತೆ ಇತರರು ಉಪಸ್ಥಿತರಿದ್ದರು.