ನೀನೆ ರಾಜಕುಮಾರ್ ಮೇಕಿಂಗ್ ಸಾಂಗ್ ರೀಲೀಸ್.

ಕೊಪ್ಪಳ –  , ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ವೇಳೆ ನೀನೆ ರಾಜಕುಮಾರ್ ಮೇಕಿಂಗ್ ಸಾಂಗ್ ರಿಲೀಸ್ ಆಗಿದ್ದು, ಗುಡ್ ರೆಸ್ಪಾನ್ಸ್ ಸಿಗುತ್ತಿದೆ. ಜಿಲ್ಲೆಯ ಹೊಸಬರ ಅಬ್ಬರ ಬಲು ಜೊರಾಗಿದ್ದು ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಇದರ ನಡುವಲ್ಲಿ ಹೊಸಬರ ಚಿತ್ರತಂಡ ಸಮಾಜದ ಮೇಲೆ ಅದರಲ್ಲು ಎಳೆ ಮನಸ್ಸುಗಳ ಮಾನವೀಯತೆ ಬಗ್ಗೆ ಕಥಾವಸ್ತು ಇಟ್ಟುಕೊಂಡು ಚಿತ್ರ ಮಾಡಿದೆ ಈ ಯುವಕರ ತಂಡ. ಬಹು ನಿರೀಕ್ಷಿತ ನೀನೆ ರಾಜಕುಮಾರ ಎನ್ನುವ ಕಿರು ಚಿತ್ರದ ಮೇಕಿಂಗ್ ಸಾಂಗ್ ಅನ್ನು ಖ್ಯಾತ ಕಥೆಗಾರರಾದ ಡಾ.ಅಮರೇಶ ನುಗಡೋಣಿ ಅವರು ಬಿಡುಗಡೆಗೊಳಿಸಿದರು. ಬಸವರಾಜ ಮರದೂರ ಅವರು ಸಾಹಿತ್ಯ ಬರೆದಿರುವ ನೀನೆ ನೀನೇ ರಾಜಕುಮಾರ್ ಎಂಬ ಹಾಡಿಗೆ ಅರುಣ್ ಹೊಸಪೇಟೆ ಸಂಗೀತ ನೀಡಿದ್ದು, ಹುಸೇನ್ ಬಾಷಾ ಹಿನ್ನೆಲೆ ಗಾಯನ ನೀಡಿದ್ದಾರೆ. ಮಾನವೀಯತೆ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ ನೀನೆ ರಾಜಕುಮಾರ್ ಕಿರು ಚಿತ್ರದ ಈ ಹಾಡು ರಾಯಲ್ ಫೇಮ್ ಕ್ರಿಯೇಷನ್ಸ್ ರವರ ನಿರ್ಮಾಣದ ಎರಡನೇ ಕಿರುಚಿತ್ರ “ನೀನೆ ರಾಜಕುಮಾರ” ಮಕ್ಕಳಾಧಾರಿತ ಕಿರು ಚಿತ್ರದ ಸಾಂಗ್ ಮಾನವೀಯತೆ ಬಗ್ಗೆ ಮಕ್ಕಳ ಮನಸ್ಸಿನ ಆಲೋಚನೆಗಳು, ಪುಟ್ಟ ಮಕ್ಕಳನಲ್ಲಿ ಇರುವ ಮಾನವೀಯತೆ, ಮರೆಯಲಾಗದ ಕಲ್ಪನೆ ಪ್ರೀತಿ, ಬರೆಯಲಾಗದ ಭಾವನೆ ನಗು, ಅಳಿಸಲಾಗದ ಚಿತ್ರ ನೆನಪು, ಮಾನವೀಯತೆಯಲ್ಲಿ ಸಂಪತ್ತಿಗಿಂತ ದೊಡ್ಡದು ಅನುವ ನಮ್ಮ ಜೀವನ ಕುರಿತು ಈ ಚಿತ್ರದಲ್ಲಿ \ತೋರಿಸಲಾಗುತ್ತಿದ್ದು, ಕಥೆ, ಚಿತ್ರಕಥೆ ನಿರ್ದೇಶನ, ಸಂಭಾಷಣೆಯನ್ನು ಸ್ವತಃ ಮರದೂರವರೇ ನಿರ್ವಹಿಸುತ್ತಿದ್ದಾರೆ. ವಿಶೇಷ ಚಿತ್ರದಲ್ಲಿ ಹುಚ್ಚುನ ಪಾತ್ರ ನಿರ್ವಹಿಸುವ ಮೂಲಕ ವಿಶೇಷ ಗಮನ ಪತ್ರಕರ್ತ ಬಸವರಾಜ ಮರದೂರ ಸೆಳೆಯಲಿದ್ದಾರೆ, ಬಾಲ ಕಲಾವಿದ ಮಾಸ್ಟರ್ ವೈಭವ ಅಳವಂಡಿ ವಿದ್ಯಾರ್ಥಿ ಪಾತ್ರಕ್ಕೆ ಜೀವ ತುಂಬಿದ್ದು, ಅವನ ಅಭಿನಯ ಟ್ರೇಲರ್ ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸಬರು ಮತ್ತು ಹಿರಿಯ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಇನ್ನು ತಂತ್ರಜ್ಞಾನದ ಬಗ್ಗೆ ಹೇಳಬೇಕೆಂದರೆ ಹೊಸಬರು ಮತ್ತು ಯುವಕರೇ ಚಿತ್ರತಂಡ ಒಳಗೊಂಡಿದೆ. ಸಿನಿಮಾದಲ್ಲಿ ಕ್ಯಾಮೆರಾ ಕರಮಾತ್ತು ಮಾಡಿದ್ದಾರೆ. ಕಲಾವಿದ ನಾಗರಾಜ್ ಡಿ ಎಮ್ ಪೋಲಿಸ್ ಪಾತ್ರದಲ್ಲಿ ಕ್ಯಾಮೇರಾ ಎದುರಿಸಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕ್ಯಾಮರಾಮನ್ ಆಗಿ ದಸ್ತಗಿರಿ, ಗುರುರಾಜ್, ವಿಕ್ರಮ್, ಕಾರ್ಯನಿರ್ವಹಿಸಿದ್ದಾರೆ. ಇನ್ನುಳಿದಂತೆ ಕಲಾವಿದರಾದ ಪ್ರೀತಮ್ ಬಿಜಾಪುರ, ರೇಖಾ, ಕೀರ್ತಿ ಪಾಟೀಲ್, ಸನ್ನಮತಿ ಶ್ರಾವಣಿ, ನಾಗೇಶ್ ಬಿನ್ನಾಳ, ಡಾ ಬಸವರಾಜ ಸಜ್ಜನ್ ಮೊದಲಾದವರು ಅಭಿನಯಿಸಿದ್ದಾರೆ.
ಈ ಸಂಧರ್ಭದಲ್ಲಿ ಖ್ಯಾತ ಬರಹಗಾರರು ಡಾ.ಅಮರೇಶ ನುಗಡೋಣಿ, ಸಂಸದರಾದ ಸಂಗಣ್ಣ ಕರಡಿ, ಸುರೇಶ್ ಕಂಬಳಿ, ಹನುಮಂತಪ್ಪ ಅಂಡಿಗಿ, ರಮೇಶ್ ಸುರ್ವೇ, ಪತ್ರಕರ್ತ / ನಿರ್ದೇಶಕ ಬಸವರಾಜ ಮರದೂರ, ನಾಗರಾಜ್ ಡಿ ಎಮ್, ಸಂತೋಷ ಕುಮಾರ್, ವೀರೇಂದ್ರ, ದಸ್ತಗಿರಿ, ಯಮನೂರ ನಾಯಕ ಹಾಗೂ ಗಣ್ಯರು ನೀನೆ ರಾಜಕುಮಾರ್ ಮೇಕಿಂಗ್ ಸಾಂಗ್ ಬಿಡುಗಡೆಗೊಳಿಸಿದರು.

Please follow and like us:
error