You are here
Home > Election_2018 > ನೀತಿ ಸಂಹಿತೆ ಉಲ್ಲಂಘನೆ ಮಾಜಿ ಶಾಸಕ ಹಾಗು ನಗರಸಭೆ ಅಧ್ಯಕ್ಷ ವಿರುದ್ಧ ಪ್ರಕರಣ ದಾಖಲು

ನೀತಿ ಸಂಹಿತೆ ಉಲ್ಲಂಘನೆ ಮಾಜಿ ಶಾಸಕ ಹಾಗು ನಗರಸಭೆ ಅಧ್ಯಕ್ಷ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಗಂಗಾವತಿ  ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಕೊಪ್ಪಳ ನಗರಸಭೆ ಮಾಜಿ ಅದ್ಯಕ್ಷ ಮಹೇಂದ್ರ ಚೋಪ್ರಾ ವಿರುದ್ದ ಪ್ರಕರಣ ದಾಖಲಾಗಿದೆ.ಮತದಾರರಿಗೆ ಹಣದ ಆಮೀಷ ಹಿನ್ನೆಲೆ.ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ದ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಭಾಷಣದಲ್ಲಿ ಮತದಾರರಿಗೆ ಹಣ ಹಂಚಿಕೆ ಬಗ್ಗೆ ವಿವಾದ ಭಾಷಣ ಮಾಡಿದ್ರು. ಚುನಾವಣೆಯಲ್ಲಿ ಖೋಟಾ ನೋಟು ಚಲಾವಣೆ ಆಗುತ್ತಿದೆ. 500 ರೂ. ಖೋಟಾ ನೋಟು ಕೊಟ್ಟು ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಒರಿಜನಲ್ 100 ರೂ ನೋಟು ಬೇಕಾ? ಅಥವಾ 500 ರೂ ಖೋಟಾ ನೋಟು ಬೇಕಾ  ಹೇಳಿದ   ವಿಡಿಯೋ ವೈರಲ್ ಆಗಿತ್ತು. ಗಂಗಾವತಿ ನಗರಸಭೆ ಸ್ಥಳೀಯ ಚುನಾವಣೆ ಸಂಸ್ಥೆಗಳ ಹಿನ್ನೆಲೆ ತಮ್ಮ ಕ್ರಾಂಗ್ರೆಸ್ ಅಭ್ಯರ್ಥಿ ಖಾಸಿಂ ಸಾಬ್ ಗದ್ವಾಲ್ ಪರ ಪ್ರಚಾರ ಮಾಡುವಾಗ ಈ ರೀತಿ ಹೇಳಿಕೆ ನೀಡಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ , ಗಂಗಾವತಿ ನಗರ ಠಾಣೆಯಲ್ಲಿ  ಕಲಂ 171(ಇ) ಪ್ರಕರಣ ದಾಖಲಿಸಲಾಗಿದ್ದು,.

ಅದೇ ರೀತಿ ಕೊಪ್ಪಳ ನಗರಸಭೆ ಮಾಜಿ ಅದ್ಯಕ್ಷ ಮಹೇಂದ್ರ ಚೋಪ್ರಾ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ..

Top