ನಿರುದ್ಯೋಗಿಗಳ ಬಾಳಿಗೆ ಆಶಾಕಿರಣವಾಗಿ ಉದ್ಯೋಗ ಮೇಳ – ಬಸವನಗೌಡ ಪಾಟೀಲ್

ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಹಾಗೂ ರಾಜೀವ್ ಗಾಂಧಿ ಚೈತನ್ಯ ಯೋಜನೆ (ಆರ್‌ಜಿಸಿವೈ)ಯಡಿಯಲ್ಲಿ  ಗಂಗಾವತಿ ತಾಲೂಕಿನ ಶ್ರೀ ಕೃಷ್ಣಾದೇವರಾಯ ಕಲಾ ಭವನದಲ್ಲಿ ಅಯೋಜಿಸಿದ್ದ ತಾಲೂಕಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ತಾಲೂಕಾ ಪಂಚಾಯತ್ ಅಧ್ಯಕ್ಷರಾದ  ಬಸವನಗೌಡ ಪಾಟೀಲ್ ರವರು ಗ್ರಾಮೀಣಾ ಪ್ರದೇಶದ ಪ್ರತಿಯೊಬ್ಬರು ವೃತ್ತಿ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸ್ವ ಉದ್ಯೋಗಗಳನ್ನು ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕು ರೂಪಿಸಕೋಳ್ಳಬೇಕೆಂದೂ ತಿಳಿಸಿದರು.

ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ಕಾರ್ಯ ನಿರ್ವಾಹಕ ಆಧಿಕಾರಿಗಳಾದ ಶ್ರೀ ವೆಂಕೋಬಪ್ಪ ಪ್ರಾಸ್ತವಿಕವಾಗಿ ಮಾತಾನಾಡಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಯುವಕ-ಯುವತಿಯರ ಬದುಕಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಎಸ್.ಎಸ್.ಎಲ್.ಸಿ. ಪಾಸಾದ ಗ್ರಾಮೀಣ ಪ್ರದೇಶದ ಯುವಕ-ಯುವತಿಯವರು ವಿವಿಧ ವೃತ್ತಿ ಕೌಶಲ್ಯಗಳನ್ನು ಪಡೆದುಕೊಂಡು ಉದ್ಯೋಗವನ್ನು ಹೊಂದುಲು ಉದ್ಯೋಗ ಮೇಳವು ಸಹಕಾರಿಯಾಗಿದೆ ಎಂದೂ ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರವಿ ಬಸರಿಹಳ್ಳಿ ರವರು ಮಾತನಾಡಿ ಸದರಿ ಕಾರ್ಯಕ್ರಮದಲ್ಲಿ ಯೋಜನಾ ಅನುಷ್ಠಾನ ಸಂಸ್ಥೆಗಳಾದ ರೂರಲ್ ಶೋರ‍್ಸ್ ಸ್ಕಿಲ್ ಅಕ್ಯಾಡೆಮಿ ಪ್ರೈ.ಲಿ., ಬೆಂಗಳೂರು, ಸಾಹಿತಿ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು, ಶ್ರೀ ಅಮರೇಶ್ವರ ಗ್ರಾಮೀಣಾಭಿವೃದ್ದಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ (ರಿ), ಕೊಪ್ಪಳ, ಹಾಗೂ ವಿನೂತನ ಶಿಕ್ಷಣ ಸೇವಾ ಸಂಸ್ಥೆ (ರಿ), ಅಳವಂಡಿ, ಕೊಪ್ಪಳ ರವರಲ್ಲಿ ಗ್ರಾಮೀಣ ಪ್ರದೇಶದ ಯುವಕ-ಯುವತಿಯವರು ವೃತ್ತಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡು ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದೂ ತಿಳಿಸಿದರು.
ಈ ಸಂಧರ್ಭದಲ್ಲಿ ವಿವಿಧ ಯೋಜನಾ ಅನುಷ್ಠಾನ ಸಂಸ್ಥೆಗಳಲ್ಲಿ ೪೩೭ ಗ್ರಾಮೀಣ ಪ್ರದೇಶದ ಯುವಕ-ಯುವತಿಯವರು ಉದ್ಯೋಗ ಮೇಳದಲ್ಲಿ ಭಾಗವಹಿಸಿ ವೃತ್ತಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತ ರಮೇಶ್ ನಯಕ, ತಾಲೂಕಾ ಪಂಚಾಯತ್ ಉಪಾಧ್ಯಕ್ಷರಾದ ಗವಿಸಿದ್ದಪ್ಪ ವೀರೇಶಪ್ಪ, ತಾಲೂಕಾ ಪಂಚಾಯತ್‌ನ ಸರ್ವ ಸದಸ್ಯರು, ಲೆಕ್ಕಿಗರಾದ ಮಲ್ಲೇಶಪ್ಪ, ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ಕೊಪ್ಪಳ ತಾಲೂಕಾ ಪಂಚಾಯತ್ ನ ಸಿಬ್ಬಂದಿಗಳು, ಹಾಗೂ ಗಂಗಾವತಿ ತಾಲೂಕಾ ಪಂಚಾಯತ್‌ನ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಭಿವೃದ್ದಿ ಆಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು,
ಈ ಕಾರ್ಯಕ್ರಮವನ್ನು ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ನಟರಾಜು ಸ್ವಾಗತಿಸಿ, ಹನುಮಂತಪ್ಪ ಗಡ್ಡಿ ರವರು ನಿರೂಪಿಸಿ, ಸಂಜೀವಿನಿ ಯೋಜನೆಯ ಪ್ರಸನ್ನ ಕುಮಾರ್ ಮಧುಗಿರಿಯವರು ವಂದಿಸಿದರು.

Leave a Reply