ನಿತ್ಯ ಜೀವನದಲ್ಲಿ ಸಂಸ್ಕಾರಗಳು ಮತ್ತು ಚಿತ್ತ ಚಿತ್ತಾರ ಪುಸ್ತಕಗಳ ಬಿಡುಗಡೆ

ಸಮಾರಂಭ

ಕೊಪ್ಪಳ : ಇಂದು ಬೆಳಿಗ್ಗೆ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಸಿರಿ ಗನ್ನಡ ವೇದಿಕೆ ಜಿಲ್ಲಾ ಮತ್ತು ತಾಲೂಕ ಘಟಕ ಕೊಪ್ಪಳ ಹಾಗೂ ವಿಶಾಲ ಪ್ರಕಾಶನ, ಸಂತೋಷ ಪ್ರಕಾಶನ ಕೊಪ್ಪಳ, ಶ್ರೀ ವರಸಿದ್ದಿ ವಿನಾಯಕ ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಸಂಸ್ಥೆ ಮಾದಿನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಲೇಖಕ ಜಿ.ಎಸ್. ಗೋನಾಳ ರಚಿತ ನಿತ್ಯ ಜೀವನದಲ್ಲಿ ಸಂಸ್ಕಾರಗಳು ಹಾಗೂ ಲೇಖಕ ಮಹೇಶ ಮನ್ನಾಪೂರ ರಚಿತ ಚಿತ್ತ ಚಿತ್ತಾರ ಎಂಬ ಪುಸ್ತಕಗಳ ಬಿಡುಗಡೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೂಕನೂರಿನ ಅನ್ನದಾನೇಶ್ವರ ಮಠದ ಶ್ರೀಗಳಾದ ಮಾಹಾದೇವ ದೇವರು ದಿವ್ಯಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತಾ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕøತಿಕ ಪರಂಪರೆಗಳು ನಿರಂತರವಾಗಿ ನಡೆಯಬೇಕೆಂದರೆ ಸಾಹಿತ್ಯ ಪರಿಷತ್‍ಗೆ ಮುಂಬರುವ ದಿನಗಳಲ್ಲಿ ಕ್ರೀಯಾಶೀಲ ವ್ಯಕ್ತಿಗಳಿಗೆ ಅವಕಾಶ ಸಿಗುವಲ್ಲಿ ಹಿರಿಯ ಸಾಹಿತಿಗಳು, ಚಿಂತನ ಮಂತನಗಳಲ್ಲಿ ತೊಡಗಿಕೊಳ್ಳಬೇಕು ಜಿ.ಎಸ್. ಗೋನಾಳರಿಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಸ್ಥಾನ ಸಿಕ್ಕಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ಧಿಯು ಹೆಮ್ಮರವಾಗಿ ಬೆಳೆಯಲು ಸಾದ್ಯವಿದೆ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಡಾ. ವಿ.ಬಿ. ರಡ್ಡೇರ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕವಿಗಳು, ಬರಹಗಾರರು, ಚಿಂತಕರು ನಾಡಿನ ಸಮಗ್ರ ಪ್ರಗತಿಯನ್ನು ಬಯಸಿ ತಮ್ಮ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಅವಶ್ಯಕತೆ ಇದೆ ಎಂದರು.
ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಡಾ. ಫಕೀರಪ್ಪ ವಜ್ರಬಂಡಿ ಕವಿಗಳಿಗೆ ತಮ್ಮ ಸಾಹಿತ್ಯವನ್ನು ಜನಪರವಾಗಿಸುವ ನಿಟ್ಟಿನಲ್ಲಿ ಸಮಗ್ರ ದೃಷ್ಠಿಕೊನವನ್ನು ಇಟ್ಟುಕೊಂಡು ಕವಿತೆಯನ್ನು ರಚನೆ ಮಾಡಬೇಕೆಂದು ಕರೆ ನೀಡಿದರು.

ಮಹೇಶ ಬಾಬು ಸುರ್ವೆರವರು ನಿತ್ಯಜೀವನದಲ್ಲಿ ಸಂಸ್ಕಾರಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಈ ಕೃತಿಯಲ್ಲಿ ನಾಡಿನ ಯುವಕರು ಮತ್ತು ಪ್ರಗತಿಪರ ವಿಚಾರ ವಾದಿಗಳಿಗೆ ಅತ್ಯಮುಲ್ಯವಾದ ನೈಜ ಸಂಗತಿಗಳಿದ್ದು ಇವುಗಳ ಅಧ್ಯಾಯನದಿಂದ ಒಬ್ಬ ಆದರ್ಶ ವ್ಯಕ್ತಿ ಕೂಡಾ ನಿರ್ಮಾಣವಾಗಲು ಸಾಧ್ಯವಿದೆ. ಜಿ.ಎಸ್. ಗೋನಾಳರವರ ಬರಹಗಳಲ್ಲಿ ಅತ್ಯಂತ ಸರಳ ಮತ್ತು ಓದುಗರ ಮನವನ್ನು ತಲುಪುವಂತಿವೆ ಎಂದು ನುಡಿದರು.
ನಂತರ ಚಿತ್ತ ಚಿತ್ತಾರದ ಕವನ ಸಂಕಲನವನ್ನು ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲರವರು ಲೋಕಾರ್ಪಣೆ ಮಾಡಿ ಕವಿ ಮಹೇಶ ಮನ್ನಾಪೂರವರು ಕವಿತೆಗಳಲ್ಲಿ ಬಹಳಷ್ಟು ವೈವಿದ್ಯಯಮಯವಾದ ಕವಿತೆಗಳಿದ್ದು, ಅವರು ರಚಿಸಿದ ಬಹಳಷ್ಟು ಸಾಹಿತ್ಯ ಸಿನಿಮಾ ರಂಗದಲ್ಲಿ ಬಳಕೆಯಾಗಿದ್ದು ಈ ಸಂಕಲನದ ಸಾಹಿತ್ಯವು ಕೂಡಾ ರಾಜ್ಯ ರಾಷ್ಟ್ರಮಟ್ಟದಲ್ಲಿ ಬಳಕೆಯಾಗಲಿ ಎಂದು ಆಶಿಸಿ ಶುಭಕೋರಿದರು.

ನಂತರ ಸಮಾರಂಭದ ಮುಖ್ಯಅತಿಥಿಗಳಾಗಿ ಡಾ. ಸಿ.ಬಿ. ಚಿಲಕರಾಗಿ, ಸಿದ್ದನಗೌಡ ಪಾಟೀಲ, ವೀರಣ್ಣ ನಿಂಗೋಜಿ, ಎನ್.ಎಂ ದೊಡ್ಡಮನಿ, ರಮೇಶ ಸುರ್ವೆ, ಎಸ್.ಎಂ ಕಂಬಾಳಿಮಠ, ಮಹೇಶ ಮನ್ನಾಪೂರ, ವೀರಣ್ಣ ವಾಲಿ, ಅಮರೇಶ ಉಪಲಾಪೂರ, ಡಾ. ಭಾಗ್ಯಜ್ಯೋತಿ, ಶಿ.ಕಾ.ಬಡಿಗೇರ, ಮೈಲಾರಪ್ಪ ಉಂಕಿ ಮೊದಲಾದ ಗಣ್ಯರು ಭಾಗವಹಿಸಿದ್ದರು, ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ 35 ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಮಹಾದೇವ ದೇವರಿಗೆ ಸಿರಿಗನ್ನಡ ವೇದಿಕೆಯ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲರವರ ಶಿಷ್ಯ ಮಹೇಶ ಮನ್ನಾಪೂರವರು ಮತ್ತು, ಅನ್ನಪೂರ್ಣಮ್ಮ ಮನ್ನಾಪೂರ ಗುವಂದನೆ ಸಲ್ಲಿಸಿ ಸನ್ಮಾನಿಸಿದರು.
ಪ್ರಾಸ್ತಾವಿಕವಾಗಿ ಜಿ.ಎಸ್. ಗೋನಾಳ ಮಾತನಾಡಿದರು, ಪ್ರಾರ್ಥನೆಯನ್ನು ಸ್ವಾಗತವನ್ನು ಮೈಲಾರಪ್ಪ ಉಂಕಿ ಕೊರಿದರು, ಕಾರ್ಯಕ್ರಮದ ನಿರೂಪಣೆಯನ್ನು ಗವಿಸಿದ್ದಪ್ಪ ಬಾರಕೇರ ಕೋರಿದರೆ ವಂದನಾರ್ಪಣೆಯನ್ನು ಶಿಲ್ಪಾ ವಿ. ಮ್ಯಾಗೇರಿ ನೆರವೇರಿಸಿದರು.

Please follow and like us:
error