fbpx

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಕಿತ್ತುಕೊಂಡ ಸರ್ಕಾರ

ಕೊಪ್ಪಳ : ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಹಾಗೂ ಗಂಗಾವತಿ ‌ಶಾಸಕ ಪರಣ್ಣ ಮುನವಳ್ಳಿಗೆ ನೀಡಿದ್ದ ಅಧ್ಯಕ್ಷ ಸ್ಥಾನವನ್ನು ಸರ್ಕಾರ ರದ್ದು ಮಾಡಿದೆ. ಒಟ್ಟು 24 ನಿಗಮ/ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದ  ಸರ್ಕಾರ ಕೊಪ್ಪಳಕ್ಕೆ 2ಸ್ಥಾನ ನೀಡಿ, ಕಿತ್ತುಕೊಂಡಿದೆ.ಕನಕಗಿರಿ ಶಾಸಕ ಬಸವರಾಜ ದಡೆಸುಗೂರರಿಗೆ ಸಮಾಜ ಕಲ್ಯಾಣ ಮಂಡಳಿ, ಪರಣ್ಣ ಮುನವಳ್ಳಿ ಅವರಿಗೆ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಆದೇಶ ಮಾಡಿದ ಕೆಲ‌ಗಂಟೆಯಲ್ಲೇ ರದ್ದು ಮಾಡಲಾಗಿದೆ.

 

ಈ ಮೂಲಕ ಇಡೀ ಕೊಪ್ಪಳ ಜಿಲ್ಲೆಯ ಜನರಿಗೆ ರಾಜ್ಯಸರ್ಕಾರ ಅಪಮಾನಿಸಿದೆ ಎಂಬ ಮಾತು ಕೇಳಿ ಬಂದಿದೆ. ಇದರ ಜೊತೆಗೆ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಅವರಿಗೆ ನೀಡಿದ್ದ ಡಿ.ದೇವರಾಜ ಅರಸು ಒಬಿಸಿ ಅಭಿವೃದ್ಧಿ ನಿಗಮ ಹಾಗೂ ಕಾಪು ಶಾಸಕ ಲಾಲಾಜಿ ಾರ್ ಮೆಂಡ್ ನಿಗೆ  ನೀಡಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಗೋಗದ ಅಧ್ಯಕ್ಷ ಸ್ಥಾನಗಳನ್ನೂ ರದ್ದುಮಾಡಲಾಗಿದೆ.

Please follow and like us:
error
error: Content is protected !!