ನಾ ಬಯಸುವೆ ಪ್ರತಿ ಜನ್ಮ ನನ್ನಪ್ಪ ನೀನಾಗೆಂದು…… – ಸುಮಾ ಗಾಜರೆ, ದುಬೈ

sharanabasappa-bisaralli

ಅಪ್ಪ” ಕೆಲವೇ ಶಬ್ದಗಳಲ್ಲಿ ಅಪ್ಪನ ಬಗ್ಗೆ ಹೇಳುವದಕ್ಕೆ ಆಗದು. ಆಳವಾದ ಪ್ರೀತಿಯ ಬೇರು ಅಪ್ಪ. ಶಿಕ್ಷಕನಾದ ನನ್ನಪ್ಪ, ತನ್ನ ಮಕ್ಕಳು ವಿದ್ಯಾವಂತರಾಗ ಬೇಕೆಂದು ಅದೆಷ್ಟು ಕಷ್ಟಪಟ್ಟರು. ಅದನ್ನೆಲ್ಲಾ ಹಿಂದೆ ತಿರುಗಿ ನೋಡಿದಾಗ, ನನಗೀಗ ತಂದೆ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತದೆ.
ಚಿಕ್ಕವಳಿದ್ದಾಗ ಅದು ಬೇಕು ಇದು ಬೇಕು ಎಂದು ತುಂಬಾ ಪೀಡಿಸಿದ್ದೇನೆ. ಅಪ್ಪ, ನಿನಗೆ ಹಣದ ಕೊರತೆ ತುಂಬಾ ಇತ್ತು, ಆದರೂ ಏಳು ಮಕ್ಕಳ ಸಂತೋಷಕ್ಕಾಗಿ ನಿನ್ನ ನೋವನ್ನೆಲ್ಲಾ ಮುಚ್ಚಿಟ್ಟು, ಎಲ್ಲಾ ರೀತಿಇಂದ ನನ್ನ ಸುಖವನ್ನು ಬಯಸಿ, ನನ್ನ ರಕ್ಷಕನಾಗಿ ನನ್ನನು ಬೆಳೆಸಿದೆ. ಸಂಬಳದ ಮೊದಲನೇ ದಿನ ನೀ ತರುತಿದ್ದ ಜಿಲೇಬಿಯನ್ನು, ತಪ್ಪು ಮಾಡಿದಾಗ ಒಂದೇಟು ಕೊಟ್ಟು ಸರಿ ಮಾರ್ಗದರ್ಶನ ಮಾಡಿದನ್ನು ನಾ ಹೇಗೆ ಮರೆಯುವದುಂಟು, ನನ್ನಪ್ಪನ ಪ್ರೀತಿಯನ್ನು.
ನೀನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ, ಬಡ ಮಕ್ಕಳಿಗೆ ದಾರಿದೀಪವಾಗಿ, ಸಮಾಜ ಸೇವಕನಾಗಿ, ಭಕ್ತಿ ಭಂಡಾರಿ ಆಗಿ, ಒಬ್ಬ ಲೇಖಕನಾಗಿ ಈ ಇಳಿ ವಯಸ್ಸಿನಲ್ಲೂ ವ್ಯರ್ಥ ಸಮಯಹರಣ ಮಾಡದೇ Ph.D ಮಾಡುತ್ತಿರುವ ನಿನ್ನ ಜೀವನ ಸಾರ್ಥಕವಪ್ಪ.

ನನ್ನಪ್ಪ, ನಿನ್ನ ಜೀವನ ಬಲು ಸಾರ್ಥಕವೆಂದು,
ಹೆಮ್ಮೆ ಅನ್ನಿಸುತ್ತಿದೆ ನಾ ನಿನ್ನ ಮಗಳಾದೆನೆಂದು,
ಬಾಯ್ತುಂಬ ನನ್ನನು ಕರೆಯುತ್ತಿ ಅವ್ವಾ ಎಂದು,
ನಾ ಬಯಸುವೆ ಪ್ರತಿ ಜನ್ಮ ನನ್ನಪ್ಪ ನೀನಾಗೆಂದು……

– ಸುಮಾ ಗಾಜರೆ, ದುಬೈ.

Please follow and like us:

Related posts

Leave a Comment