ನಾವು-ನಮ್ಮಲ್ಲಿ ಕಾರ್ಯಕ್ರಮಕ್ಕೆ ಗಂಗಾವತಿಗೆ ಬರುವದು ಹೇಗೆ ?

ನಾವುನಮ್ಮಲ್ಲಿ ಇನ್ನು ಎರಡು ದಿನ ಉಳಿದಿದೆ.  ನಾವು-ನಮ್ಮಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದ ಆಯಾ ಭಾಗದವರನ್ನು ಸಹಭಾಗಿಗಳಾಗಿ ಒಳಗೊಳ್ಳುತ್ತಲೇ ರಾಜ್ಯದ ಬೇರೆ ಬೇರೆ ಭಾಗದ ಸಂಗಾತಿಗಳನ್ನು ಸೇರಿಸಿಕೊಂಡು ಮುಖಾಮುಖಿ ಮಾಡುವ ಕಾರ್ಯಕ್ರಮ. ಪ್ರತಿವರ್ಷವೂ ತಪ್ಪದೆ ಸೇರುವ ಸಂಗಾತಿಗಳ ಜೊತೆ ಹೊಸ ಆಸಕ್ತರು ಕಾರ್ಯಕ್ರಮಕ್ಕೆ ಜೊತೆಯಾಗುತ್ತಾರೆ. 

ಕಾರ್ಯಕ್ರಮಕ್ಕೆ ಬರುವ ಆಸಕ್ತರು ರಮೇಶ್ ಗಬ್ಬೂರ್  (9844433128), 

ಜಾಜಿ ದೇವೇಂದ್ರಪ್ಪ 

(9481662735)

ಟಿ.ಎಂ.ಉಷಾರಾಣಿ (9036550365) 

ಅರುಣ್ (9901445702) ಈ ನಂಬರುಗಳಿಗೆ ಸಂದೇಶ ಅಥವಾ ಕಾಲ್ ಮಾಡಿ‌ ತಿಳಿಸಬೇಕಾಗಿ ವಿನಂತಿ. 16 ರ ಶನಿವಾರ ರಾತ್ರಿ ಉಳಿಯುವವರು ವಸತಿ ಕಾರಣಕ್ಕೆ ಮೇಲಿನ ಯಾರಿಗಾದರೂ ತಿಳಿಸಿದರೆ ಆಯೋಜನೆಗೆ ಸಹಕಾರಿಯಾಗುತ್ತದೆ.
ಸರಳವಾದ ವಸತಿ ವ್ಯವಸ್ಥೆ ಇರುತ್ತದೆ. ಮಳೆ ಚಳಿ ಇರುವ ಕಾರಣ ಲಘು ಹೊದಿಕೆ ತಂದರೆ ಒಳ್ಳೆಯದು. 
ನೋಂದಣಿ, ನೋದಣಿ ಫೀಜು ಯಾವುದು ಇರುವುದಿಲ್ಲ. ನಾವು-ನಮ್ಮಲ್ಲಿ ಬಳಗ ಯಾವುದೇ ಸರಕಾರಿ/ಖಾಸಗಿ ಫಂಡಿನ ಮೂಲಕ ನಡೆವ ಕಾರ್ಯಕ್ರಮವಲ್ಲ. ಸಮಾನಾಸಕ್ತ ಸ್ನೇಹ ಬಳಗ ಅವರವರೆ ಇಂತಿಷ್ಟು ಹಣ ಹಾಕಿಕೊಂಡು ನಡೆಸುವ ಕಾರ್ಯಕ್ರಮ. ಹಾಗಾಗಿ ಕಾರ್ಯಕ್ರಮಕ್ಕೆ ಬರುವವರು ಮತ್ತು ಅನಿವಾರ್ಯ ಕಾರಣಕ್ಕೆ ಬರಲಾಗದೆಯೂ  ಬಳಗದ ಜೊತೆ ಇರ ಬಯಸುವವರು ನಾವು-ನಮ್ಮಲ್ಲಿ ಬಳಗದ ಭಾಗವಾಗಲು ಇಚ್ಚೆಉಳ್ಳವರು ನಿಮ್ಮ ಸಹಭಾಗಿತ್ವಕ್ಕೆ ಸಾಧ್ಯವಾದಷ್ಟು ಹಣಕಾಸಿನ ನೆರವು ನೀಡಬಹುದು.  ಕಾರ್ಯಕ್ರಮ ಮುಗಿದ 15 ದಿನದ ಒಳಗಾಗಿ ಕಾರ್ಯಕ್ರಮದ ಖರ್ಚು ವೆಚ್ಚವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದು.
*ಗಂಗಾವತಿಗೆ* *ತಲುಪುವುದು*

*ಹೇಗೆ?*
ಬೆಂಗಳೂರಿನಿಂದ ಗಂಗಾವತಿಗೆ ನೇರ ಬಸ್ಸುಗಳಿವೆ. ಬೆಳಗಾವಿ, ಹುಬ್ಬಳ್ಳಿ ಭಾಗದವರು ಹೊಸಪೇಟೆಗೆ ಬಂದು ಗಂಗಾವತಿಗೆ ಬರಬಹುದು. ಬೀದರ್ ಗುಲ್ಬರ್ಗಾ ಭಾಗದವರಿಗೆ ನೇರ ಗಂಗಾವತಿಗೆ ಹಲವು ಬಸ್ಸುಗಳಿವೆ. ಬೆಂಗಳೂರು, ಹುಬ್ಬಳ್ಳಿಯಿಂದ ಹೊಸಪೇಟೆ ತನಕ ರೈಲಿನ ಸೌಲಭ್ಯವಿದೆ. ಹೊಸಪೇಟೆಯಿಂದ ಪ್ರತಿ ಅರ್ಧಗಂಟೆಗೆ ಒಂದರಂತೆ ಗಂಗಾವತಿಗೆ ಹೊಸಪೇಟೆಯಿಂದ KSRTC ಬಸ್ಸುಗಳಿವೆ. ಗಂಗಾವತಿಯ KSRTC ಬಸ್ ಸ್ಟಾಂಡಿನಿಂದ ಕಾರ್ಯಕ್ರಮ ನಡೆವ IMA Hall ಸಮೀಪವೆ ಇದೆ.

*ಬೆಳಗಾಂ,ಹುಬ್ಬಳ್ಳಿ, ಧಾರವಾಡ ಗದಗದಿಂದ ಬರುವವರು ಕೊಪ್ಪಳದಿಂದ ನೇರ ಗಂಗಾವತಿಗೆ ಬರಲು ಬಸ್ಸುಗಳಿವೆ.
*ನಾವುನಮ್ಮಲ್ಲಿ ಬಳಗ*ಬನ್ನಿ,ಎಲ್ಲರಿಗೂ ಆತ್ಮೀಯ ಸ್ವಾಗತ ನಿಮಗಾಗಿ ಕಾಯುವೆವು..*
ಇಂತಿ‌ *ನಾವುನಮ್ಮಲ್ಲಿ‌ ಬಳಗ*

Please follow and like us:
error