ನಾಳೆ ಶ್ರೀ ಮೌನೇಶ್ವರರ ೨೬ನೇ ವರ್ಷದ ಜಯಂತಿ ಆಚರಣೆ


ಕೊಪ್ಪಳ ೨೧: ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಇದೇ ಡಿ.೨೨ ರಂದು ಜಗದ್ಗುರು ಶ್ರೀ ಮೌನೇಶ್ವರರ ೨೬ನೇ ವರ್ಷದ ಜಯಂತಿ ಉತ್ಸವ ಮತ್ತು ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ೬ನೇ ವರ್ಷದ ಜಯಂತಿ ಉತ್ಸವದ ಅಂಗವಾಗಿ ಸಾಮೂಹಿಕ ಮದುವೆ, ಉಪನಯನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೧೦೮ ಕುಂಬ ಹಾಗೂ ಆನೆಯ ಮೇಲೆ ಅಂಬಾರಿಯೊಂದಿಗೆ ಶ್ರೀ ಮೌನೇಶ್ವರರ ಬೆಳ್ಳಿಮೂರ್ತಿ ಹಾಗೂ ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ಭಾವಚಿತ್ರದ ಹಾಗೂ ವಿಶ್ವಕರ್ಮ ಪ್ರಭುವಿನ ಪಂಚ ಕಸಬುಗಳ ಋಷಿ ಪುಂಗವರ ಸ್ಥಬ್ದ ಚಿತ್ರದ ಮೆರವಣಿಗೆ ಜರುಗಲಿದೆ.
ದಿವ್ಯ ಸಾನಿಧ್ಯವನ್ನು ಕೊಪ್ಪಳ ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು, ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಅಳ್ಳಳ್ಳಿ ಅಯ್ಯಪಯ್ಯಸ್ವಾಮಿ ಮಠದ ನಾಗೇಂದ್ರ ಸ್ವಾಮಿ, ಕೊಪ್ಪಳ ಶಾಖಾಮಠ ಲೆಕ್ಕಿಹಾಳದ ಸಿರಸಪ್ಪಯ್ಯ ಸ್ವಾಮಿ, ಹಿರೇಹಾಳಮಠದ ಶಿವಶಂಕರ ಸ್ವಾಮಿ, ಗಿಣಿಗೇರಿಯ ದೇವೀಂದ್ರ ಸ್ವಾಮಿ, ಮುದ್ದಾಬಳ್ಳಿಯ ಗುರುನಾಥ ಸ್ವಾಮಿ, ಶಾಡ್ಲಗೇರಿಯ ವಿರುಪಾಕ್ಷಯ್ಯ ಸ್ವಾಮಿ, ಲೇಬಗೇರಿಯ ನಾಗಮೂರ್ತಿ ಸ್ವಾಮಿ, ಸದ್ಯೋಜಾತ ಸ್ವಾಮಿ, ಗಿಣಿಗೇರಿಯ ನರಸಿಂಹಸ್ವಾಮಿ ದಿವಾಕರ, ಶ್ರೀಕಂಠ ಸ್ವಾಮಿಗಳು, ಸುಬ್ಬಣ್ಣಾಚಾರ ವಿದ್ಯಾನಗರ, ಲೇಬಗೇರಿಯ ವೀರಬ್ರಹ್ಮೇಂದ್ರ ಸ್ವಾಮಿ, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿ, ಹರ್ಲಾಪುರದ ಶ್ರೀ ಗುರು ಮೌನ ಚಿದಾನಂದಜ್ಜನವರ ಮಠದ ಮುತ್ತಪ್ಪಜ್ಜ ಸ್ವಾಮಿಗಳು ವಹಿಸುವರು.
ಶ್ರೀ ಅಮರಶಿಲ್ಪಿ ಜಕಣಾಚಾರ್ ವೇದಿಕೆಯಲ್ಲಿ ಅಂದು ಮಧ್ಯಾಹ್ನ ೧೨ ಗಂಟೆಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಉದ್ಘಾಟನೆಯನ್ನು ಸಂಸದ ಕರಡಿ ಸಂಗಣ್ಣ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳದ ರಾಜ್ಯಾಧ್ಯಕ್ಷ ಎಲ್.ನಾಗರಾಜ ಆಚಾರ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ, ಬಸವರಾಜ ದಡೆಸಗೂರು, ಎಪಿಎಂಸಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ, ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ನಗರಸಭೆ ಮಾಜಿ ಅಧ್ಯಕ್ಷರಾದ ಮಹೇಂದ್ರ ಛೋಫ್ರಾ, ವೀರಣ್ಣ ಸಂಡೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಗಂಟಿ, ಹಿರಿಯ ನ್ಯಾಯವಾದಿ ಐ.ವಿ.ಪತ್ತಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವೀರಣ್ಣ ಪಂಚಾಳ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈಶಪ್ಪ ಬಡಿಗೇರ, ಮಾಜಿ ಜಿಲ್ಲಾಧ್ಯಕ್ಷ ಅಶೋಕ ವೇದಪಾಠಕ, ವಿಶ್ವಕರ್ಮ ಸಮಾಜದ ನಗರ ಘಟಕದ ಅಧ್ಯಕ್ಷ ಮಂಜುನಾಥ ಬನ್ನಿಕೊಪ್ಪ ಅವರು ಆಗಮಿಸುವರು ಎಂದು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ  ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.

Related posts