ನಾಳೆ ರೋಟರಿಯಿಂದ ಉಚಿತ ಕಣ್ಣು ತಪಾಸಣಾ ಶಿಬಿರ


ಕೊಪ್ಪಳ, ಆ.೦೧: ಕೊಪ್ಪಳ ರೋಟರಿ ಕ್ಲಬ್, ವಾಸನ್ ನೇತ್ರ ಆಸ್ಪತ್ರೆ ಹುಬ್ಬಳ್ಳಿ ನೇತೃತ್ವದಲ್ಲಿ ಆಗಸ್ಟ್ ೩ ರಂದು ನಗರದ ಬಾಲಕರ ಸರಕಾರಿ ಪ.ಪೂ. ಕಾಲೇಜು, ಪ್ರೌಢ ಶಾಲೆ ಮತ್ತು ಉರ್ಧು ಪ್ರೌಢ ಶಾಲೆಗಳ ಮಕ್ಕಳಿಗೆ ಉಚಿತ ಕಣ್ಣು ತಪಾಸಣ ಶಿಬಿರ ನಡೆಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.
ವಿನೂತನ ಶಿಕ್ಷಣ ಸೇವಾ ಸಂಸ್ಥೆ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಅಧ್ಯಕ್ಷ ಸಿದ್ದಲಿಂಗಯ್ಯ ಎಸ್. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಉದ್ಘಾಟನೆ ಮಾಡುವರು.
ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಆಗಷ್ಟ್ ೩ ಮತ್ತು ೪ ಎರಡು ದಿನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರೋಟರಿ ಕಾರ್ಯದರ್ಶಿ ವೆಂಕಪ್ಪ ಅತ್ತಾರ, ಲಕ್ಷ್ಮೀ ಚಂದ್ರಶೇಖರ್, ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts