ನಾಳೆ ನಾಮಪತ್ರ ಸಲ್ಲಿಸುವ ಬಿಜೆಪಿಯ ಅಭ್ಯರ್ಥಿ ಯಾರು ಗೊತ್ತಾ?

ಕೊಪ್ಪಳ : ಬಿಜೆಪಿಯ ಕೊಪ್ಪಳ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವದು ಇಡೀ ರಾಜ್ಯದ ಕುತೂಹಲಕಾರಿ ಪ್ರಶ್ನೆಯಾಗಿದೆ. ಈಗಾಗಲೇ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ರನ್ನು ಬಿಜೆಪಿಯ ಅಭ್ಯರ್ಥಿ ಎಂದು ಘೋಷಿಸಿದ್ದರೂ ನಂತರ ನಡೆದ ಬೆಳವಣಿಗೆಗಳು ಬಿ ಪಾರಂ ಯಾರಿಗೆ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿವೆ. ಕಳೆದ ಮೂರು ನಾಲ್ಕು ದಿನಗಳಿಂದ ಕೊಪ್ಪಳ ಕ್ಷೇತ್ರದ ರಾಜಕಾರಣ ರಾಜ್ಯದ ರಾಜಧಾನಿಗೆ ಶಿಪ್ಟ್ ಆಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ಅಭ್ಯರ್ಥಿಯ ಹೆಸರು ಪೈನಲ್ ಅಗುತ್ತೆ ಎಂದು ನಾಯಕರು ಹೇಳುತ್ತಲೇ ಬಂದಿದ್ದಾರೆ ಆದರೆ ಇದುವರೆಗೂ ಹೆಸರು ಘೋಷಣೆಯಾಗಿಲ್ಲ. ನಾಮಪತ್ರ ಸಲ್ಲಿಸಲು ನಾಳೆ ಮತ್ತು ನಾಡಿದ್ದು ಎರಡೇ ದಿನಗಳು ಉಳಿದಿವೆ.ಹೀಗಾಗಿ ನಾಳೆ ಬೆಂಗಳೂರಿನಿಂದ ವಾಪಸ್ ಬಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ನಾಳೆ ಸಿ.ವಿ.ಚಂದ್ರಶೇಖರ್ ಮತ್ತು ಅಮರೇಶ ಕರಡಿ ಇಬ್ಬರೂ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಕೊನೆ ಕ್ಷಣದಲ್ಲಿ ನಾಯಕರು ಬಿ ಪಾರಂ ಯಾರಿಗೆ ಕೊಡುತ್ತಾರೋ ಎನ್ನುವ ಕುತೂಹಲ ಇನ್ನೂ ಹಾಗೇ ಉಳಿಯಲಿದೆ.ನಾಳೆ ನಾಮಪತ್ರ ಸಲ್ಲಿಸಿ ಮತ್ತೆ ಬೆಂಗಳೂರಿಗೆ ಮರಳಿ ಬಿ ಪಾರಂ ತರಲಿದ್ದಾರೆ ಎಂದು ಹೇಳಲಾಗಿದ್ದು ಬಿ ಪಾರಂ ಯಾರ ಕೈ ಸೇರಲಿದೆ ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ