ನಾಳೆ ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

ಸಹಿ ಸಂಗ್ರಹ ಅಭಿಯಾನ : ಚುನಾವಣೆಗೆ ಮೊದಲು 10 ಲಕ್ಷಉದ್ಯೋಗ ಸೃಷ್ಟಿಸಲು ಕೇಂದ್ರ ಮತ್ತುರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಬಹಿರಂಗ ಪ್ರಚಾರಾಂದೋಲನ ಕೊಪ್ಪಳದಲ್ಲಿ ಯುವಕರು ಮತ್ತು ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ! ಅಕ್ಟೋಬರ್ 23, 2017ರ ಸೋಮವಾರ, ಬೆಳಿಗ್ಗೆ 10 ಗಂಟೆಗೆ, ಕೊಪ್ಪಳದ ಸರಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗದಲ್ಲಿರುವ ಸಾರ್ವಜನಿಕ ಮೈದಾನ ‘ಉದ್ಯೋಗಕ್ಕಾಗಿಯುವಜನರು-ಕರ್ನಾಟಕ’ವು ಸುಭದ್ರ ಮತ್ತುಘನತೆಯ ಉದ್ಯೋಗಾವ ಕಾಶಗಳಿಗಾಗಿ ಪ್ರಯತ್ನಶೀಲರಾಗಿರುವ ಯುವಜನರ ಒಂದು ಆಂದೋಲನ. ಭಾರತದ ಈಗಿನ ಅಂಕಿ ಸಂಖ್ಯೆಗಳ ಪ್ರಕಾರ ಪ್ರತೀ ವರ್ಷ 1.1 ಕೋಟಿಯುವಜನರು ಶಿಕ್ಷಣ ಮುಗಿಸಿ / ಶಿಕ್ಷಣ ನಿಲ್ಲಿಸಿ ಉದ್ಯೋಗಾಕಾಂಕ್ಷಿಗಳಾಗಿ ಉದ್ಯೋಗದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ.ಇವರಲ್ಲಿ ಬಹುಪಾಲು ಮಂದಿ ನಿರುದ್ಯೋಗಿಗಳ ಪಡೆಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ.ಹೀಗೆ ನಿರುದ್ಯೋಗಿಗಳ/ಅರೆ ಉದ್ಯೋಗಿಗಳ ಸಂಖ್ಯೆ ನಮ್ಮದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.ಒಂದುಅಂದಾಜಿನ ಪ್ರಕಾರ 2025ರ ಹೊತ್ತಿಗೆದೇಶದ ಸರಾಸರಿ ವಯೋಮಾನ 18 ವರ್ಷಕ್ಕೆ ಇಳಿಯಲಿದೆ. ಅಂದರೆ ಆ ಪ್ರಮಾಣದಲ್ಲಿಯುವಜನತೆ ನಮ್ಮಲ್ಲಿಇರುತ್ತಾರೆ. ಈಗಿನ ಉದ್ಯೋಗಾವಕಾಶಗಳ ಪರಿಸ್ಥಿತಿಯೇ ಹೀಗಾದರೆ, ಮುಂದಿನ ದಿನಗಳನ್ನು ಊಹಿಸುವುದೂ ಕಷ್ಟ! ಬೃಹತ್ ನಿರುದ್ಯೋಗದ ಟೈಂಬಾಂಬಿನ ಮೇಲೆ ಕೂತಿರುವ ಈ ದೇಶದ ಸರ್ಕಾರಗಳಾಗಲೀ, ಅಧಿಕಾರಕ್ಕಾಗಿ ಗುದ್ದಾಡುವ ರಾಜಕೀಯ ಪಕ್ಷಗಳಾಗಲೀ ಯಾವುವೂ ಈ ಸಮಸ್ಯೆಯ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಏನೂ ಮಾಡುತ್ತಿಲ್ಲ. ಆದ್ದರಿಂದ, ಇದಕ್ಕಾಗಿಯುವಜನರಾದ ನಾವುಗಳೇ ಕ್ರಿಯಾಶೀಲರಾಗಿ ಏನಾದರೂ ಮಾಡಬೇಕಾದ ಸಂದರ್ಭ ಈಗ ಬಂದಿದೆ. ಅದಕ್ಕಾಗಿ ಪಕ್ಷಾತೀತವಾದಒಂದುಆಂದೋಲನವನ್ನುಆರಂಭಿಸುತ್ತಿದ್ದೇವೆ. ಇದು ನಿರುದ್ಯೋಗದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬಯಸುವಎಲ್ಲರಿಗೂ ಮುಕ್ತವಾದಒಂದು ವೇದಿಕೆ. ‘ಉದ್ಯೋಗಕ್ಕಾಗಿ ಯುವಜನರು-ಕರ್ನಾಟಕ’ ದ ವತಿಯಿಂದ ಈಗಾಗಲೇ ಬೆಂಗಳೂರು ಮತ್ತು ಶಿಕಾರಿಪುರ, ಮೈಸೂರು, ರಾಮನಗರ, ತುಮಕೂರು, ದಾವಣಗೆರೆ ಮತ್ತು ಹಾಸನದಲ್ಲಿ ಬಹಿರಂಗ ಸಹಿಸಂಗ್ರಹಅಭಿಯಾನವನ್ನು ನಡೆಸಲಾಗಿದೆ.ಈ ಅಭಿಯಾನಕ್ಕೆಯುವಜನರು ಮತ್ತು ಸಾರ್ವಜನಿಕರಿಂದ ಪ್ರಶಂಸೆಯ ಜತೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈಗ ಅಕ್ಟೋಬರ್23 ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿರುವ ಸಾರ್ವಜನಿಕ ಮೈದಾನದಲ್ಲಿಸಹಿಸಂಗ್ರಹಅಭಿಯಾನ ನಡೆಯುವುದು. ಸಹಿ ಸಂಗ್ರಹ ಅಭಿಯಾನಕ್ಕೆ ಉದ್ಯೋಗಕ್ಕಾಗಿ ಯುವಜನರು ವೇದಿಕೆಯರಾಜ್ಯ ಸಂಚಾಲಕ ಮುತ್ತುರಾಜ್ ಅವರು ಚಾಲನೆ ನೀಡಲಿದ್ದಾರೆ.ಸಹಿ ಸಂಗ್ರಹಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂತೋಷ (8970127675) ಇವರನ್ನು ಸಂಪರ್ಕಿಸಬಹುದು.

Please follow and like us:
error