ನಾರಾಯಣಗೌಡರ ಜನ್ಮದಿನದ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ

। ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾದುದು॥ ಬಸನಗೌಡ ಪೋಲೀಸ್ ಪಾಟೀಲ.

ಕೊಪ್ಪಳ,ಜೂ.10: ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾದುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋಲಿಸ ಪಾಟೀಲ ಹೇಳಿದರು.
ಅವರು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ ಅವರ 54ನೇ ಜನ್ಮ ದಿನದ ಅಂಗವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಸೀರೆ ವಿತರಿಸಿ ಮಾತನಾಡಿದರು. ಕರೋನಾ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರ ಹುಟ್ಟಿದ ಹಬ್ಬವನ್ನು ಸರಳ ರೀತಿಯಾಗಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಸಲುವಾಗಿ ಸಮುದಾಯದಲ್ಲಿ ಸಂಘಟಕರಾಗಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಿಸುವುದಾಗಿದೆ. ಅವರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಸಮೀಕ್ಷೆಯನ್ನು ಮಾಡಿ ನಿಸ್ವಾರ್ಥದಿಂದ ದೇಶ ಸೇವೆಯನ್ನು ಮಾಡುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಅವರ ಸೇವೆಗೆ ಸ್ಪಂದಿಸಿ ಸನ್ಮಾನಿಸಿ ಸೀರೆ ವಿತರಿಸಿ ಅವರು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿ ಎಂದು ಪ್ರೋತ್ಸಾಹಿಸಲಾಗಿದೆ ಎಂದರು.

ಕರವೇ ಜಿಲ್ಲಾ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೋಟಗಿ, ಕೊಪ್ಪಳ ತಾಲ್ಲೂಕ ಅಧ್ಯಕ್ಷ ಸಂಜಯ ಖಟವಟೆ, ನಗರ ಅಧ್ಯಕ್ಷ ಮಂಜುನಾಥ ಟಿ, ಕರವೇ ಕಾರ್ಯಕರ್ತರಾದ ಗೋವಿಂದರಾಜ ಈಳಗೇರ, ಗವಿಸಿದ್ದಪ್ಪ, ಅಮರೇಶ ನಿಟ್ಟಾಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕರು ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error