You are here
Home > Koppal News > ನಾಯಕತ್ವ ಸ್ಥಾನಕ್ಕೆ ಧೋನಿ ನಿವೃತ್ತಿ

ನಾಯಕತ್ವ ಸ್ಥಾನಕ್ಕೆ ಧೋನಿ ನಿವೃತ್ತಿ

 ಭಾರತದ ಏಕದಿನ ಹಾಗೂ ಟಿ 20 ನಾಯಕತ್ವ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಉಳಿಯಲು ಧೋನಿ ನಿರ್ಧರಿಸಿದ್ದಾರೆ. 26 ಡಿಸೆಂಬರ್  2014 ರಂದು ಟೆಸ್ಟ್’ ನಾಯಕತ್ವ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದರು. 2004 ಡಿಸೆಂಬರ್ 23 ರಂದು ಬಾಂಗ್ಲಾದೇಶದ ವಿರುದ್ಧದ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಗೊಂಡಿದ್ದ ಅವರನ್ನು 2007 ರಲ್ಲಿ ನಾಯಕರಾಗಿ ನೇಮಕಗೊಂಡಿದ್ದರು. 2016ರ ಅಕ್ಟೋಬರ್ 23ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದ ಪಂದ್ಯವೇ ಕೊನೆಯದಾಗಿದೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ 2011 ರ ಏಕದಿನ ವಿಶ್ವ ಕಪ್, 2007ರ ಟಿ20 ವಿಶ್ವಕಪ್ ‘ಮುಡಿಗೇರಿ ಸಿಕೊಂಡಿತ್ತು.  2007 ರಿಂದ 2016ರ ಅವಧಿಯಲ್ಲಿ  ಧೋನಿ ನಾಯಕರಾಗಿ ಆಡಿದ 191 ಪಂದ್ಯಗಳಲ್ಲಿ ಭಾರತ ತಂಡವು 104 ಪಂದ್ಯಗಳಲ್ಲಿ ಜಯಿಸಿದ್ದು, 72 ಪಂದ್ಯಗಳಲ್ಲಿ ಪರಾಭವಗೊಂಡಿದೆ. 4 ಟೈ ಆಗಿದ್ದು, 11 ರಲ್ಲಿ ಫಲಿತಾಂಶ ಬಂದಿಲ್ಲ. ಅದೇ ರೀತಿ 62 ಟಿ20 ಪಂದ್ಯಗಳಲ್ಲಿ 36 ಗೆಲುವು, 24 ಸೋಲು, ಒಂದು ಟೈ ಹಾಗೂ ಒಂದರಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

Leave a Reply

Top