ನಾನು ಯಾವ ಧರ್ಮದ ವಿರೋಧಿಯೂ ಅಲ್ಲ- ಪ್ರಕಾಶ್ ರೈ.

ಕೊಪ್ಪಳ : ಯಾವುದೇ ಪಕ್ಷಕ್ಕೆ ಸೇರಿಲ್ಲ, ಯಾವುದೇ ಪಕ್ಷದವನಲ್ಲ . ಪ್ರಜಾಪ್ರಭುತ್ವದ ನಾವೆಲ್ಲರು ಬಹುಸಂಖ್ಯಾತರು. ರಾಜಕೀಯ ನಾಯಕರೆಲ್ಲ ಅಲ್ಪಸಂಖ್ಯಾತರು

ಭಾರತದ ಪ್ರತಿಯೊಬ್ಬ ಪ್ರಜೆ ಪ್ರಶ್ನೆ ಕೇಳುವಂತವರಾಗಬೇಕು ಎಂದು ಕೊಪ್ಪಳದ ಗಂಗಾವತಿಯಲ್ಲಿ ಚಲನಚಿತ್ರ ನಟ ಪ್ರಕಾಶ ರೈ ಹೇಳಿದರು.ಸಂವಿಧಾನ ಉಳಿಸಿ ಆಂದೋಲ ಮತ್ತು ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ರೆಡ್ ಅಲರ್ಟ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು.

ನಾವು ಯಾವುದೇ ವ್ಯಕ್ತಿಯ ಚಾರಿತ್ರ್ಯಹರಣ ಮಾಡಲು ಬಂದಿಲ್ಲ. ದೇವೇಗೌಡರು ಕಾವೇರಿ ಬಗ್ಗೆ ಎಷ್ಟೋ ಪತ್ರಗಳನ್ನು ಬರೆದರು ನನಗೆ ಪ್ರತಿಕ್ರಿಯೆ ನೀಡಿಲ್ಲ ಅಂದ್ರು. ಆದ್ರೆ ಮೋದಿ ಅವರನ್ನು ಇವಾಗ ಗೌಡ್ರು ಹೊಗಳುತ್ತಿದ್ದಾರೆನಾನು ಕಾಂಗ್ರೆಸ್ ನ್ನು ಹೊಗುಳುತ್ತಿಲ್ಲ. ಮೋದಿಯವರನ್ನು ಬೈಯುತ್ತಿಲ್ಲ

ಸಂವಿಧಾನ ಬದ್ದವಾಗಿ ಮೋದಿ ಅವರನ್ನು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ

ಅವರು ನೀಡಿರುವ ಭರವಸೆಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇನೆ

ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನರು ತತ್ತರಿಸಿದ್ದಾರೆ. ಇಂದು ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಬ್ಯಾಂಕಗಳ ಮುಂದೆ ಜನರು ಸಾಲಾಗಿ ನಿಲ್ಲುವಂತ್ತಾಗಿದೆ. ೨ ಕೋಟಿ ಉದ್ಯೋಗಿ ನೀಡುತ್ತೇನೆ ಅಂದ್ರು ಎಲ್ಲಿ ನೀಡಿದ್ದಾರೆ

ಕಪ್ಪು ಹಣ ತಂದು ಭಾರತದ ಪ್ರತಿಯೊಬ್ಬ ಪ್ರಜೆಯ ಅಕೌಂಟನಲ್ಲಿ ಜಮೆ ಮಾಡುತ್ತೇನೆ ಅಂದ್ರು

ಯಾರ ಅಕೌಂಟನಲ್ಲಿ ಹಾಕಿದ್ದಾರೆ ಎಷ್ಟು ಹಣ ಬಂದಿದೆ ಹೇಳಿ? . ನನಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೂ ಕೇಳಲು ಹಲವಾರು ಪ್ರಶ್ನೆಗಳಿವೆ. ಅದರೆ ಈ ದೇಶದ ಅಭಿವೃದ್ಧಿ ಮಾಡುತ್ತೇನೆ ಅಂತ ಹೇಳಿ ಜಾತಿ, ಧರ್ಮ ಮತ್ತು ಕೋಮು ಗಲಭೆ ಸೃಷ್ಟಿಸುತ್ತಿರುವ ಬಿಜೆಪಿ ಪ್ರಶ್ನೆ ಮಾಡಬೇಕಾಗಿದೆ

ಬಿಜೆಪಿ ಕೇವಲ ಅಭಿವೃದ್ಧಿ ಪ್ರಶ್ನೆ ಮಾಡುತ್ತಿಲ್ಲ. ಕೋಮು, ಜಾತಿ, ಗಲಭೆ ಸೃಷ್ಟಿಸುತ್ತಿರುವುದಕ್ಕೆ ಪ್ರಶ್ನೆ ಕೇಳುತ್ತಿದ್ದೇನೆ.ಅವುದು ಕಾಂಗ್ರೆಸ್ ೭೦ ವರ್ಷ ಏನು ಮಾಡಿಲ್ಲ ,ಆದ್ರೆ ಬಿಜೆಪಿ ಏನು ಮಾಡುತ್ತಿದೇ ನೀವೆ ಹೇಳಿ?

ಪ್ರಕಾಶ ರೈ ಯಾವುದೇ ಧರ್ಮದ ವಿರುದ್ಧವಲ್ಲ ಎಲ್ಲ ಧರ್ಮದ ಪರವಾಗಿ ಮಾತಾಡುತ್ತಿದೇನೆ.

ನನಗೆ ವಿದೇಶ ಹಣ ಬರುತ್ತಿದೆ ಮೋದಿ ವಿರುದ್ಧ ಮಾತನಾಡೋದಕ್ಕೆ ಅಂತ ಹೇಳ್ತಾರೆ . ಹೇಳಿದವರು ಸಾಕ್ಷಿ, ದಾಖಲೆಗಳು ನೀಡಲಿ. ಯಾವುದೇ ಪಕ್ಷಕ್ಕೆ ನೀವು ಮತ ನೀಡುವ ಮುನ್ನ ನೂರು ಸಲ ಯೋಚಿಸಿ. ಪ್ರಧಾನಿಯವರನ್ನು‌ ನಾವು ನಂಬಿದೇವು. ಇದರ ಬಗ್ಗೆ ಪ್ರಶ್ನೆ ಮಾಡಬಾರದಾ?

ನಾವು ಬಿಜೆಪಿಯವರನ್ನು ಆಧಾರದ ಜೊತೆಗೆ ಎದುರಿಸುತ್ತಿದ್ದೇನೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಹದಗೆಟ್ಟಿದೆ. ನಾನು ಹಿಂದೂ ಧರ್ಮದ ವಿರೋಧಿ ಎಂದು ನನ್ನನ್ನು ಬಿಂಬಿಸುತ್ತಿದ್ದಾರೆ

ಧರ್ಮ ದೀಪ ಬೆಳಗಬೇಕು, ಅದು ಸುಡಬಾರದು

ನಮಗೆ ವಿನಯ ಕಲಿಸಲು ಧರ್ಮ ಇರಬೇಕು,ನಾನು ಯಾವ ಧರ್ಮದ ವಿರೋಧಿಯೂ ಅಲ್ಲ

ನನಗೆ ಬೆರೆಯವರು ಬಿಜೆಪಿಯವರಷ್ಟು ಡೆಂಜರ್ಸ್ ಅಂತಾ ಕಾಣ್ತಾ ಇಲ್ಲ

ಮಹಾತ್ಮಗಾಂಧಿಯವರ ಸ್ವರಾಜ್ಯ ಬಗ್ಗೆ ಮಾತನಾಡಿದೇವು

ಆದ್ರೆ ಗ್ರಾಮೀಣ ಗುಡಿಕೈಗಾರಿಗಳ ಮೇಲೆ ಜಿ ಎಸ್ ಟಿ ಹಾಕಿದರೆ ಹೇಗೆ?

ಜಿಎಸ್ಟಿ ಹೇಗೆ ತಂದೀರಿ? ಎಲ್ಲರನ್ನೂ ಪ್ರಶ್ನೆ ಮಾಡ್ತೀನಿ

ನಾವು ಯಾರ ಪರವಾಗಿ ವಾದಿಸಬೇಕಿಲ್ಲ, ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಕೇಳುತ್ತೇನೆ ಎಂದು ಹೇಳಿದರು.