ನಾನು ಯಾವುದೇ ರೀತಿಯ ಪ್ರೋಟೊಕಾಲ್ ಉಲ್ಲಂಘನೆ ಮಾಡುತ್ತಿಲ್ಲ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Koppal  ನೀರಲಗಿ ಏತನೀರಾವರಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ನಾನು ಯಾವುದೇ ರೀತಿಯ ಪ್ರೋಟೊಕಾಲ್ ಉಲ್ಲಂಘನೆ ಮಾಡುತ್ತಿಲ್ಲ.  ಇವೆಲ್ಲಾ ಸಣ್ಣ ಪುಟ್ಟ ಕಾರ್ಯಕ್ರಮಗಳು ಇಂತಹ ಕಾರ್ಯಕ್ರಮಗಳಿಗೆ ಮಂತ್ರಿಗಳೇನೂ ಬರುವುದಿಲ್ಲ. ಅಲ್ಲದೆ ಇವುಗಳನ್ನು ಗ್ರಾಮಸ್ಥರೇ ಮಾಡುತ್ತಿದ್ಧಾರೆ. ಅಧಿಕಾರಿಗಳು ಮಾಡಿದರೆ ಪ್ರೋಟೊಕಾಲ್ ಬರುತ್ತೆ.  ಈ ಏತನೀರಾವರಿ ಯೋಜನೆಯಿಂದ ಸಾವಿರಾರು ಏಕರೆ ಭೂಮಿ ನೀರಾವರಿಯಾಗುತ್ತೆ. ಇಷ್ಟರಲ್ಲಿಯೇ 40 ಕೋಟಿ ವೆಚ್ಚದಲ್ಲಿ ನಾಲ್ಕು ಬ್ರಿಡ್ಜ ಕಂ ಬ್ಯಾರೆಜ್ ಗಳ ನಿರ್ಮಾಣ ಮಾಡಲಾಗುವುದು. ಗವಿಶ್ರೀಗಳ ನೇತೃತ್ವದಲ್ಲಿ ಹಿರೇಹಳ್ಳ ಸ್ವಚ್ಛತಾ ಕಾರ್ಯ ನಡೆದಿರುವುದರಿಂದ ಹಳ್ಳದಲ್ಲಿ ಈಗ ಸಮೃದ್ದಿಯಾಗಿ ನೀರು ಹರಿಯುತ್ತಿದೆ.

ಭಾರತ ರತ್ನವನ್ನು ಗೋಡ್ಸೆಗೆ ಕೊಡುವುದು ಒಂದೇ ಸಾವರ್ಕರ್ ಗೆ ಕೊಡುವುದೂ ಒಂದೇ ಇತಿಹಾಸವನ್ನು ಸರಿಯಾಗಿ ಓದಿದರೆ ಗೊತ್ತಾಗುತ್ತೆ ಸಾವರ್ಕರ್ ಯಾರು ಅಂತಾ ತಮ್ಮ ಜೀವನವನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟ ಶ್ರೀ ಸಿದ್ಧಗಂಗಾ ದೇವರಿಗೆ ಕೊಡಬೇಕು ಕೊಪ್ಪಳದ ನೀರಲಗಿ ಗ್ರಾಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿಕೆ ಗೋಡ್ಸೆ ಹಾಗೂ ಸಾವರ್ಕರ್ ಈ ದೇಶದಲ್ಲಿ ಏನ್ ಮಾಡಿದರು ಅವರ ಜೀವನ ಚರಿತ್ರೆ ಎಂಬುದು ತಿಳಿದು ಕೊಳ್ಳಲಿ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾದ ನಡೆದಾಡುವ ದೇವರಿಗೆ ಕೊಡದೆ ಇದ್ರೆ ಇದ್ಯಾವ ನ್ಯಾಯ ಸಾವರ್ಕರ್ ಗೆ ಕೊಡುವದರ ಬಗ್ಗೆ ನಮ್ಮ ಹಿರಿಯ ನಾಯಕರೂ ಈಗಾಗಲೇ ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ವೆಂಕನಗೌಡ ಹಿರೇಗೌಡ್ರು ,S B ನಾಗರಳ್ಳಿ ವಕೀಲರು ,ಜುಲ್ಲುಸಾಬ ಖಾದ್ರಿ    ವಕ್ತಾರ ಕುರಗೋಡ ರವಿ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ,ಕೃಷ್ಣ ಇಟ್ಟಂಗಿ, ಹನುಮರೆಡ್ಡಿ ಹಂಗನಕಟ್ಟಿ ,  ನಗರಸಭೆ ಸದಸ್ಯರಾದ  ,ಅಕ್ಬರ್ ಪಲ್ಟನ್,ಜಡಿಯಪ್ಪ ಬಂಗಾಳಿ ಅಧ್ಯಕ್ಷರು APMC, ಪ್ರಸನ್ನಾ ಗಡಾದ  ಹಾಗೂ ಇನ್ನಿತರರು ಉಪಸ್ಥಿತರಿದ್ದರು

Please follow and like us:
error