ನಾನು ಕೂಡಾ ರಂಗಭೂಮಿಯನ್ನು ಕೊಂಡಾಡುತ್ತೇನೆ – ವಿಠ್ಠಪ್ಪ ಗೋರಂಟ್ಲಿ


ಕೊಪ್ಪಳ : ನಾನು ಕೂಡಾ ರಂಗಭೂಮಿಯನ್ನು ಕೊಂಡಾಡುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೊರಂಟ್ಲಿ ಹೇಳಿದರು.
ಅವರು ಭಾಗ್ಯನಗರದ ಶ್ರೀ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಸಹಜಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ವಿಶ್ವ ರಂಗಭೂಮಿ ದಿನಚಾರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಂಗಭೂಮಿ ವಿಶಾಲ ಜಗತ್ತು ಇಲ್ಲಿ ಮಾನವೀಯತೆಗೆ ಪ್ರಥಮ ಸ್ಥಾನ ಇಂತಹ ಕಲೆಗಳನ್ನು ಉಳಿಸಿ ಬೆಳಸಿಕೊಳ್ಳಬೇಕು ಜೊತೆಗೆ ಈ ಕಲೆಯನ್ನು ಗ್ರಾಮೀಣ ಮತ್ತು ನಗರಗಳಡೆಯಲ್ಲಿಯೂ ಅನುಷ್ಠಾನಗೊಳಿಸಬೇಕು ಆಗ ಮಾತ್ರ ಸಮುದಾಯದಲ್ಲಿ ಸಹಬಾಳ್ವೆ ಸಮಾನತೆಯನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.
ನಂತರ ಅಧ್ಯಕ್ಷ ವಹಿಸಿ ದಾನಪ್ಪ ಕವಲೂರ ಮಾತನಾಡಿ ಸಹಜ್ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಶಾಲಾ ಶಿಕ್ಷಣದ ಜೊತೆ ಗೊತೆಗೆ ರಂಗ ಶಿಕ್ಷಣವು ಪ್ರತಿಯೊಬ್ಬರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಹೋರಾಟ ಗಾರ್ತಿ ದಿವ್ಯ ಜೋಗಿ, ಸಾಹಿತಿ ಈರಣ್ಣ ಹುರಕಡ್ಲಿ, ನಾಗಪ್ಪ ಬಗನಾಳ, ಮಂದಾಕಿನಿ ಕಲಬುರ್ಗಿ, ಸಹಜ್ ಟ್ರಸ್ಟ್‌ನ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ ಇತರರು ಇದ್ದರು.
ನಂತರ ಶೀಲಾ ಹಾಲ್ಕುರಿಕೆ ನಿರ್ದೇಶನದ ಬಾಜನಾ ನಾಟಕ ಹಾಗೂ ಸತ್ಯಪ್ಪ ವಾಯ್ ನಿರ್ದೇಶನದ ರಾವಣ ಸಂಹಾರ ಸಂಗೀತ ನೃತ್ಯ ನಾಟಕ ಸಂಸ್ಥೆಗಳಿಂದ ನಾಟಕವನ್ನು ಪ್ರದರ್ಶಿಸಲಾಯಿತು.ಕೊನೆಯಲ್ಲಿ ವೆಣ್ಣಿಲಾ ಹಾಲ್ಕುರಿಕೆ ನಿರೂಪಿಸಿ ವಂದಿಸಿದರು.

Please follow and like us:
error

Related posts