ನವ ವೃಂದಾವನ ಗಡ್ಡಿ ಪ್ರಕರಣ : ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದಿರಿ

ಕೊಪ್ಪಳ ಜು.  ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣಾ ವ್ಯಾಪ್ತಿಯಲ್ಲಿ ಬರುವ ಆನೆಗುಂದಿ ಸಿಮಾದ ನವ ವೃಂದಾವನ ಗಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ. 
ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣಾ ವ್ಯಾಪ್ತಿಯಲ್ಲಿ ಬರುವ ಆನೆಗುಂದಿ ಸಿಮಾದ ನವ ವೃಂದಾವನ ಗಡ್ಡಿಯಲ್ಲಿ ಪೂಜ್ಯರ ವೃಂದಾವನವನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಈ ಮಾಹಿತಿ ಮೇರೆಗೆ ಕೂಡಲೇ ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ತಳವಾರ, ಪಿಎಸ್‌ಐ ಪ್ರಕಾಶ ಮಾಳಿ ಹಾಗೂ ಜಿಲ್ಲೆಯ ವೈಜ್ಞಾನಿಕ ತಂಡದವರು (ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸೇರಿದಂತೆ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆರೋಪಿತರ ಪತ್ತೆಗೆ ಸಿಪಿಐ ಸುರೇಶ ತಳವಾರು ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ವೈಜ್ಞಾನಿಕ ತಳಹದಿಯ ಮೇಲೆ ತನಿಖೆಯನ್ನು ಕೈಗೊಂಡಿದ್ದು, ಶ್ರಿÃಘ್ರವಾಗಿ ಆರೋಪಿತರನ್ನು ಪತ್ತೆಮಾಡಿ ಪ್ರಕರಣವನ್ನು ಬೇಧಿಸಲಾಗುವುದು.  ಈ ವಿಷಯವಾಗಿ ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೇ ಶಾಂತತೆ ಕಾಪಾಡಲು ಪ್ರಕಟಣೆ ಮನವಿ ಮಾಡಿದೆ. 

Please follow and like us:
error