ನವ ಕರ್ನಾಟಕಕ್ಕಾಗಿ ಪರಿವರ್ತಾನಾ ಯಾತ್ರೆ ಯಶಸ್ವಿಗೊಳಿಸಲು ಸಂಸದ ಸಂಗಣ್ಣ ಕರಡಿ ಕರೆ

ಕೊಪ್ಪಳ: ಬಿಜೆಪಿಯು ರಾಜ್ಯದಲ್ಲಿ ಬದಲಾವಣೆ ತರಲು ನವಕರ್ನಾಟಕ್ಕಾಗಿ ಪರಿವರ್ತನಾ ರ‍್ಯಾಲಿ ಹಮ್ಮಿಕೊಂಡಿದೆ. ಈಗಾಗಲೆ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ಸುತ್ತಿದ್ದು, ಡಿ.೧೬ಕ್ಕೆ ಕೊಪ್ಪಳಕ್ಕೆ ರ‍್ಯಾಲಿ ಆಗಮಿಸಲಿದೆ. ಕರ್ಯಕರ್ತರು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಸಂಸದ ಸಂಗಣ್ಣ ಕರಡಿ ಕರೆ ನೀಡಿದರು.
ತಾಲೂಕಿನ ಹುಲಗಿ ಗ್ರಾಮದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ‍್ಯಾಲಿಯ ಪೂರ್ವಬಾವಿ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ಅಧಿಕಾರಕ್ಕೆ ಬಂದನಂತರ ಜನಪರ ಯೋನೆಗಳನ್ನು ಜಾರಿ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಲ್ಲಿಯೇ ಭಾರತದ ಕೀರ್ತಿ ಬೆಳಗಿಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ದೇಶವನ್ನೇ ಮಾರಲು ಹೊಟ್ಟಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಹಾಗಾಗಿ ಬಿಜೆಪಿ ಕರ್ನಾಟಕದ ಮೂಲೆ ಮೂಲೆಗೆ ನವ ಕರ್ನಾಟಕ ಪರಿವರ್ತನೆ ಯಾತ್ರೆ ಮೂಲಕ ರಾಜ್ಯದ ಜನರ ಮನ ಪರಿವರ್ತನೆ ಕಾರ್ಯದಲ್ಲಿ ತೊಡಗಿದೆ. ನಾವು ನೀವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಸಿ.ವಿ ಚಂದ್ರಶೇಖರ, ಪಾಲಾಕ್ಷಪ್ಪ ಗುಂಗಾಡಿ, ಡಿ. ಮಲ್ಲಣ್ಣ, ತೋಟಪ್ಪ ಕಾಮನೂರ, ಚಂದ್ರಶೇಖರ, ಕೊಟ್ರಯ್ಯಸ್ವಾಮಿ ಹಿರೇಮಠ, ಕುಟ್ಟಿ ಮುನಿರಾಬಾದ್, ಜಗನ್ನಾಥ, ಸುಬ್ಬರಡ್ಡಿ, ಚನ್ನನಗೌಡ್ರ ಸೇರಿದಂತೆ ಇತರರು ಇದ್ದರು.

Related posts