ನವೋದಯ ವಿದ್ಯಾಲಯ ೬ನೇ ತರಗತಿಗೆ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ

ಕೊಪ್ಪಳ ನ.  ಕೊಪ್ಪಳ ಜಿಲ್ಲೆಯ ಕುಕನೂರು ಜವಾಹರ ನವೋದಯ ವಿದ್ಯಾಲಯದ ೬ನೇ ತರಗತಿಗಾಗಿ ೨೦೧೯-೨೦ರ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರತಿ ಪರ್ಷದಂತೆ ಈ ವರ್ಷವೂ ಜವಾಹರ ನವೋದಯ ವಿದ್ಯಾಲಯ ೬ ನೇ ತರಗತಿಗಾ ಈ ವರ್ಷವೂ ಸಹ ಆನ್‌ಲೈನ್ ವೆಬ್‌ಸೈಟ್ www.navodaya.gov.in ನಲ್ಲಿ ಅರ್ಜಿಗಳನ್ನು ನೀಡಲಾಗಿದೆ. ಸುಲಭ ಮತ್ತು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಸಹಾಯವಾಗುವಂತೆ ಅರ್ಜಿಯನ್ನು ಭರ್ತಿ ಮಾಡಬಹುದು. ವಿದ್ಯಾಲಯವು ಗ್ರಾಮೀಣ, ನಗರ ಪ್ರದೇಶದ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಯು ೫ನೇ ತರಗತಿಯಲ್ಲಿ ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿಯ ವಿವರಗಳೊಂದಿಗೆ ಪ್ರಮಾಣಪತ್ರವನ್ನು ಪಡೆದು, ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್‌ನಲ್ಲಿ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು. ವಿದ್ಯಾರ್ಥಿಯು ಆಯ್ಕೆಯಾದರೆ, ಅದೇ ಪ್ರಮಾಣ ಪತ್ರವನ್ನು ದಾಖಲಾತಿಯ (ಅಡ್ಮಿಷನ್) ಸಮಯದಲ್ಲಿ ಪ್ರಸ್ತುತ ಪಡಿಸಬೇಕಾಗುತ್ತದೆ. ವಿದ್ಯಾಲಯದಲ್ಲಿ ಪಾಲಕ-ಪೋಷಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯ ವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ನ. ೩೦ ಕೊನೆಯ ದಿನವಾಗಿದ್ದು, ೨೦೧೯ರ ಎಪ್ರಿಲ್. ೦೬ ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಜವಾಹರ ನವೋದಯ ವಿದ್ಯಾಲಯ, ಕುಕನೂರು ಕೊಪ್ಪಳ ಜಿಲ್ಲೆ, ದೂರವಾಣಿ ಸಂಖ್ಯೆ ೦೮೫೩೪-೨೩೦೪೪೪, ಹೆಲ್ಪ್ ಡೆಸ್ಕ್ ನಂ. ೯೪೮೦೭೯೪೦೭೩, ಹಾಗೂ ವಿದ್ಯಾಲಯದ ವೆಬ್‌ಸೈಟ್ www.navodaya.gov.in ನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯರಾದ ರಾಯ್.ಪಿ. ಜಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error