ನವಲಿ ಗ್ರಾಮಕ್ಕೆ ಸಂಸದ ಸಂಗಣ್ಣ ಭೇಟಿ, ಮೃತರ ಕುಟುಂಬಕ್ಕೆ ಸಾಂತ್ವನ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಬಳಿ ಕಾಲುವೆಗೆ ಟ್ರ್ಯಾಕ್ಟರ್  ಉರುಳಿ ಬಿದ್ದು ಐವರು ಮೃತಪಟ್ಟಿದ್ದ ಕುಟುಂಬದ ಸದಸ್ಯರನ್ನು ಸಂಸದ ಸಂಗಣ್ಣ ಕರಡಿಂ ಭೇಟಿ ಮಾಡಿ ಸಾಂತ್ವನ ಹೇಳಿದರು.
ನವಲಿ ಗ್ರಾಮದ ಐವರು ಕೃಷಿ ಕೂಲಿ ಕಾರ್ಮಿಕರು ಭತ್ತದ ಗದ್ದೆ ಕೆಲಸಕ್ಕೆ ಹೋಗಿ ಮರಳಿ ಬರುವಾಗ ಈ ಘಟನೆ ಜರುಗಿತ್ತು. ಇದರ ಪರಿಣಾಮ ಐವರು ಕೃಷಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ಮಧ್ಯಾಹ್ನ ವಿವಿಧ ಮುಖಂಡರೊಂದಿಗೆ ತೆರಳಿದ ಸಂಸದರು, ಮೃತರ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿ, ಸಾಂತ್ವನ ತಿಳಿಸಿದರು.
ರೈತರು, ಮಕ್ಕಳು, ಮಹಿಳೆಯರು ಸಂಚರಿಸುತ್ತಿರುತ್ತಾರೆ. ರಾತ್ರಿ ಹೊತ್ತಲ್ಲಿ ರೈತರು ಗದ್ದೆಗಳಿಗೆ ನೀರು ಹರಿಸಲು ಹೋಗುತ್ತಾರೆ. ಈ ವೇಳೆ ಕಾಲುಜಾರಿ ಬೀಳುವುದು, ಕತ್ತಲು ಇದ್ದಾಗ ಸಂಚರಿಸುವಾಗ ಅವಘಡ ಸಂಭವಿಸಿದರೆ ಕಾಪಾಡಲು ಯಾರೂ ಇರುವುದಿಲ್ಲ. ಹೀಗಾಗಿ ಕಾಲುವೆ ದಡದಲ್ಲೆ ಇರುವ ರಸ್ತೆಗುಂಟ ಕಾಲುವೆಗೆ ತಡೆಗೋಡೆ ನಿರ್ಮಿಸಬೇಕು ಅಂತ ಒತ್ತಾಯಿಸಿದ್ದರು.
ಜಿಲ್ಲಾಡಳಿತ ಕೂಡಲೇ ತಡೆಗೋಡೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇದಲ್ಲದೆ ಮೃತ ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು. ಆ ಮೂಲಕ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಂಸದ ಕರಡಿ ಸಂಗಣ್ಣ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದುರ್ಗಾರಾವ್, ಎಪಿಎಂಸಿ ಸದಸ್ಯ ಸಣ್ಯಪ್ಪ ಸಾಹುಕಾರ, ಮರಿರಾಜ, ಸಿದ್ರಾಮಗೌಡ ಬೊಮ್ಮನಾಳ, ವೀರಯ್ಯಸ್ವಾಮಿ, ಪಂಚಯ್ಯಸ್ವಾಮಿ, ಮಲ್ಲಿಕಾರ್ಜುನ ಬಳಗಾನೂರ, ಈರಣ್ಣ ಗಾಣಿಗೇರಾ, ಭೀಮನಗೌಡ, ಈರನಗೌಡ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇತರರು ಉಪಸ್ಥಿತರಿದ್ದರು
Please follow and like us:
error