ನರೆಗಾ ಅವ್ಯವಹಾರ: ಎಸಿಬಿ, ಲೋಕಾಯುಕ್ತಕ್ಕೆಸಂಸದ  ಪತ್ರ

ಲೇನ್ ಡಿಪಾರ್ಟ್ಮೆಂಟ್ನಲ್ಲಾದ ಅವ್ಯವಹಾರ |ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಸಂಸದ ಸಂಗಣ್ಣ ಮನವಿ |

ರವಿರವಿಪ್ರಸಾದ್ಮಳಗಿ ವಿರುದ್ಧ ಅವ್ಯವಹಾರಆರೋಪ

 

ಕೊಪ್ಪಳ:

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯ ಕಾಮಗಾರಿಯಲ್ಲಿ ಜಿಲ್ಲೆಯ ಗಂಗಾವತಿ ಮತ್ತುಕುಷ್ಟಗಿ ತಾಲೂಕಿನಲ್ಲಿ ಅವ್ಯವಹಾರಗಳಾಗಿದ್ದುಸುಮಾರು15ಕೋಟಿ ಅವ್ಯವಹಾರದಲ್ಲಿ ತೊಡಗಿದ ಅಧಿಕಾರಿಗಳವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಜರುಗಿಸಬೇಕು ಎಂದು ಒತ್ತಾಯಿಸಿ ಸಂಸದರಾದ ಸಂಗಣ್ಣ ಕರಡಿ ಅವರು ಕರ್ನಾಟಕ ಲೋಕಾಯುಕ್ತರಿಗೆಎಸಿಬಿಎಡಿಜಿಪಿ ಹಾಗೂ ಆರ್ಡಿಪಿಆರ್ ಸರ್ಕಾರದ ಪ್ರಧಾನಕಾರ್ಯದರ್ಶಿ ಹಾಗೂ ಆರ್ಡಿಪಿಆರ್ ಆಯುಕ್ತರಿಗೆ ಪತ್ರಬರೆದಿದ್ದಾರೆ.

 

 ಯೋಜನೆಯಲ್ಲಿ ಗಂಗಾವತಿ ತಾಲೂಕಿಗೆ 2018-19ನೇಸಾಲಿನಲ್ಲಿ ಒಟ್ಟು 6.90 ಕೋಟಿ ಅನುದಾನಬಿಡುಗಡೆಯಾಗಿದೆಖರ್ಚು ವೆಚ್ಚಕ್ಕೆ ಸಂಬಂಧಿಸಿದ ಪ್ರಮುಖಅಧಿಕಾರಿಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ಉಪವಿಭಾಗದ ಎಇಇ ರವಿಪ್ರಸಾದ್(ಈಗಾಗಲೇ ಜೂನ್.6, 2019ರಂದು ನಿವೃತ್ತಿಯಾಗಿದ್ದಾರೆತಮ್ಮ ಸೇವಾಅವಧಿಯಲ್ಲಿ ಹಾಗೂ ಇದೇ ಉಪವಿಭಾಗದ ಶಾಖಾವ್ಯವಸ್ಥಾಪಕರಾದ ಡಿ.ಎಂರವಿ ಇವರ ಸೇವಾ ಅಧಿಯಲ್ಲಿಮತ್ತು ಕುಷ್ಟಗಿ ತಾಲೂಕಿಗೆ ಸುಮಾರು 6.85 ಕೋಟಿಅನುದಾನ ಬಿಡುಗಡೆಯಾಗಿದೆ.

 

ಕುಷ್ಟಗಿ ಪಂಚಾಯತ್ ಇಂಜಿನಿಯರಿಂಗ್ ಎಇಇ ಶಂಕರ್ಮಳಗಿ ಇವರು 30.04.2019ರಂದು ಸದರಿ ಕಚೇರಿಗೆಹಾಜರಾಗಿದ್ದಾರೆಅಂದಿನಿಂದ ಜುಲೈ 62019ರ ವರೆಗೆ ಅವಧಿಯಲ್ಲಿ ಅತಿಹೆಚ್ಚಿನ 2018-19ನೇ ಸಾಲಿನ ಉದ್ಯೋಗಖಾತ್ರಿ ಯೋಜನೆ(ಲೇನ್ ಡಿಪಾರ್ಟ್ಮೆಂಟ್)ಯಲ್ಲಿ ತಾವೇಸ್ವತಃ ಕಾಮಗಾರಿಗಳನ್ನು ನಿರ್ವಹಣೆ ಮಾಡದೇ ಇವರಅಧೀನದಲ್ಲಿ ಬರುವ ಎಲ್ಲಾ ಸಂಬಧಿಸಿದ ಗುತ್ತಿಗೆದಾರರುಖಾಸಗಿ ಏಜನ್ಸಿಗಳೊಂದಿಗೆ ಸೇರಿಕೊಂಡು ಕಂಪ್ಯೂಟರ್ನಲ್ಲಿ ಅಧಿಕಾರಿಗಳು ಹೆಬ್ಬೆರಳು ಗುರುತನ್ನು ಕೊಟ್ಟು ಹಣಪಾವತಿ ಮಾಡಿಕೊಂಡಿದ್ದಾರೆ.

 

ಇದಲ್ಲದೆ ಕೂಲಿಕಾರರಿಗೆ ಸೇರಬೇಕಾದ ಕೋಟ್ಯಂತರಹಣವನ್ನು ಪಾವತಿ ಮಾಡದೇ ಸಾಮಗ್ರಿಯಲ್ಲಿ ಅನುದಾನವನ್ನು ಹಾಕಿಕೊಂಡು ಸರ್ಕಾರದ ಹಣವನ್ನುದೋಚಿದ್ದಾರೆಶಂಕರ್ ಮಳಗಿ  ಅವರು  ಹಿಂದೆ 14-112018 ರಂದು ಇದೇ ಯೋಜನೆಗೆ ಸಂಬಂಧಿಸಿದಂತೆಕ್ರಿಯಾಯೋಜನೆ ಅನುಮೋದನೆಗಾಗಿ 10 ಸಾವಿರರೂಪಾಯಿ ಲಂಚ ಪಡೆಯುವ ವೇಳೆ ಕೊಪ್ಪಳ ಎಸಿಬಿಅಧಿಕಾರಿಗಳು ದಾಳಿ ಮಾಡಿ ಪ್ರಕರಣವನ್ನು ದಾಖಲಿಸಿದ್ದರು.

 

ಲಂಚ ಪಡೆದ ವಿಷಯದಲ್ಲಿ ಶಂಕರ್ ಮಳಗಿಯವರುಸೇವೆಯಿಂದ ಅಮಾನತು ಆದ ವಿಷಯ ಮಾಧ್ಯಮಗಳಲ್ಲಿಪ್ರಕಟವಾಗಿತ್ತುಹೀಗೆ ಇರುವಾಗಲೇ ಇದೀಗ ಶಂಕರ್ಮಳಗಿ ಅವರು ಸೇರಿದಂತೆ  ಮೂವರು ಅಧಿಕಾರಿಗಳುಸೇರಿಕೊಂಡು ಉದ್ಯೋಗ ಖಾತ್ರಿ ಯೋಜನೆಯ(ಲೇನ್ಡಿಪಾರ್ಟ್ಮೆಂಟ್ಒಟ್ಟು 15 ಕೋಟಿ ಅನುದಾನದಲ್ಲಿಅಕ್ರಮ ಎಸಗಿ ಅವ್ಯವಹಾರ ಮಾಡಿರುವುದು ನಮಗೆದಾಖಲೆ ಸಮೇತ ದೊರೆತಿದೆ.

 

 ಹಿನ್ನೆಲೆಯಲ್ಲಿ  ಮೂವರು ಅಧಿಕಾರಿಗಳ ವಿರುದ್ಧಕ್ರಮಿನಲ್ ದಾಖಲಿಸಿ 7 ದಿನಗಳ ಒಳಗಾಗಿ ಇವರನ್ನುಸೇವೆಯಿಂದ ಅಮಾನತು ಮಾಡಬೇಕುಅಲ್ಲದೆ ಸರ್ಕಾರಕ್ಕೆಆದ ನಷ್ಟವನ್ನು ಇವರ ಸ್ವಂತ ಆಸ್ತಿಯನ್ನು ಮುಟ್ಟುಗೋಲುಹಾಕಿಕೊಳ್ಳಬೇಕುಒಂದುವೇಳೆ ಇವರ ವಿರುದ್ಧ ಕಾನೂನುಕ್ರಮ ಕೈಗೊಳ್ಳದಿದ್ದರೆ ದಾಖಲೆ ಸಮೇತ ಪತ್ರಿಕಾಗೋಷ್ಠಿನಡೆಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆನೀದ್ದಾರೆ.

 

 ಪತ್ರವನ್ನು ಸಂಸದರು ಬೆಂಗಳೂರಿನ ಕರ್ನಾಟಕಲೋಕಾಯುಕ್ತಕ್ಕೆಆರ್ಡಿಪಿಆರ್ ಇಲಾಖೆಯ ಸರ್ಕಾರದಪ್ರಧಾನ ಕಾರ್ಯದರ್ಶಿಆರ್ಡಿಪಿಆರ್ ಕಮುಷನರ್,ಎಸಿಬಿ ಎಡಿಜಿಪಿ ಹಾಗೂ ಕೊಪ್ಪಳ ಜಿಪಂ ಸಿಇಒಗೆಬರೆದಿದ್ದಾರೆ.

=

ನಿವೃತ್ತ ಅಧಿಕಾರಿಗಳಿಗೆ ಎನ್ಒಸಿ ನೀಡಬೇಡಿ..

ಉದ್ಯೋಗ ಖಾತ್ರಿ ಯೋಜನೆಯ(ಲೇನ್ಡಿಪಾರ್ಟ್ಮೆಂಟ್ಕಾಮಗಾರಿಗಳಿಗೆ ಸಂಬಂಧಿಸಿಗಂಗಾವತಿ ತಾಲೂಕುಗಳಲ್ಲಿ ನಡೆದ ಕಾಮಗಾರಿಗಳುಬೋಗಸ್ ಇದ್ದುಸೇವೆಯಿಂದ ನಿವೃತ್ತಿಯಾದ ಪಂಚಾಯತ್ರಾಜ್ ಇಂಜಿನಿಯರಿಂಗ್ ಗಂಗಾವತಿ ವಿಭಾಗದ ಎಇಇರವಿಪ್ರಸಾದ್ ಇವರ ಅವಧಿಯಲ್ಲಿ ಅತಿಹೆಚ್ಚು ಬೋಗಸ್ಬಿಲ್ ಮಾಡಿದ್ದು ಅಲ್ಲದೆ ಸದರಿ ಯೋಜನೆಗೆ ಸಂಬಂಧಿಸಿದಕಾಮಗಾರಿಗಳನ್ನು ನಿರ್ವಹಿಸಿದೇ ಇವರ ಅಧಿನದಲ್ಲಿ ಬರುವಸಂಬಂಧಪಟ್ಟ ಗುತ್ತಿಗೆದಾರರುಖಾಸಗಿ ಏಜೆನ್ಸಿಗಳೊಂದಿಗೆಸೇರಿಕೊಂಡು ಕಂಪ್ಯೂಟರ್ನಲ್ಲಿ ಅಧಿಕಾರಿಗಳು ಹೆಬ್ಬೆರಳುಗುರುತನ್ನು ಕೊಟ್ಟು ಹಣ ಪಾವತಿ ಮಾಡಿಕೊಂಡಿದ್ದಾರೆ.

 

ಕೂಲಿಕಾರರಿಗೆ ಸೇರಿದ ಹಣ ಪಾವತಿ ಮಾಡದೇಸಾಮಗ್ರಿಯಲ್ಲಿ  ಅನುದಾನ ಹಾಕಿಕೊಂಡು ಹಣ ದೋಚಿಇದೀಗ ನಿವೃತ್ತಿಯಾಗಿದ್ದಾರೆಅವ್ಯವಹಾರ ಮಾಡಿದ ಇವರುನಿವೃತ್ತಿಯಾದ ಕಾರಣ ಸರ್ಕಾರದಿಂದ ಸಿಗುವ ಡಿಸಿಆರ್ಜಿ,ಸಿವಿವಿಪಿಮನಿವೃತ್ತಿ ಉಪದಾನ ಸೇರಿದಂತೆ ಸರ್ಕಾರದಇತರೆ ಸೌಕರ್ಯಗಳನ್ನು ತಡೆದು  ಹಣದಲ್ಲಿಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಹಣವನ್ನುತುಂಬಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಫೋಟೋ1,2

ಕೊಪ್ಪಳ ಸಂಸದರಾದ ಸಂಗಣ್ಣ ಕರಡಿಯವರು ನರೆಗಾಯೋಜನೆಯಲ್ಲಿ ಆದ ಅವ್ಯವಹಾರದ ತನಿಖೆ ನಡೆಸಿಕ್ರಮಿನಲ್ ಮೊಕದ್ದಮೆ ದಾಖಲಿಸಲು ಲೋಕಾಯುಕ್ತ,ಆರ್ಡಿಪಿಆರ್ ಪಿಎಸ್ ಹಾಗೂ ಎಸಿಬಿ ಬೆಂಗಳೂರಿಗೆ ಪತ್ರಬರೆದಿರುವುದು.

Please follow and like us:
error