ನಮ್ಮ ಹಿರಿಯರ ತ್ಯಾಗ ಬಲಿದಾನದ ಪ್ರತೀಕವೇ ಸ್ವಾತಂತ್ರ್ಯ – ಫಕೀರಪ್ಪ ಅಜ್ಜಿ

ಕೊಪ್ಪಳ : ತಾಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಪ್ರಾಥಮಿಕ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಮುಖ್ಯೋಪಾಧ್ಯಾಯ ಫಕೀರಪ್ಪ ಎನ್ ಅಜ್ಜಿ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿ ಮಾತನಾಡುತ್ತಾ ಸ್ವಾತಂತ್ರ್ಯ ನಮ್ಮ ಹಿರಿಯರ ತ್ಯಾಗ ಬಲಿದಾನದ ಪ್ರತೀಕ ದೇಶಕ್ಕಾಗಿ ದುಡಿಯುವ ರೈತ, ಮಡಿಯುವ ಯೋಧ ಇವರಿಬ್ಬರಿಗೂ ಪ್ರಾಶಸ್ಥ್ಯ ಕೊಡಬೇಕು. ಭಯೋತ್ಪಾಧನೆ ಭ್ರಷ್ಟಾಚಾರ, ಕೊಲೆ ಸುಲಿಗೆ, ಅತ್ಯಾಚಾರ ಇಂತಹ ಅನೈತಿಕ ಚಟುವಟಿಕೆಗಳು ನಿಲ್ಲಬೇಕು ಅಂದಾಗ ಈ ಆಚರಣೆ ಸಾರ್ಥಕ ಎಂದರು.
ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೊಂಪೂರ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮವನ್ನು ಉದ್ದೇಶಿಸಿ ಕೊಟ್ರಯ್ಯ ಗುಡ್ಲಾನೂರ, ರಮೇಶ ಡಂಬ್ರಳ್ಳಿ, ಕೊಟ್ರೇಶ ಸೊಂಪೂರ, ಶಿವಕುಮಾರ ಏಣಿಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವೀರಮ್ಮ ಸೊಂಪೂರ, ಉಮೇಶ ಗಣಪ, ಮಲ್ಲೇಶಪ್ಪ ಸೊಂಪೂರ, ಹಿರಿಯರಾದ ಹನುಮಪ್ಪ ಭೋವಿ, ಮಲ್ಲಪ್ಪ ಚೌದ್ರಿ, ಎಲ್.ಕೆ. ಶಂಕರ್ ನಾಯಕ, ರಾಮನಗೌಡ ಮಾಲಿ ಪಾಟೀಲ, ರಮೇಶ ಬಳ್ಳೊಳ್ಳಿ, ಲಕ್ಷ್ಮಣ ಬಡಗಿ, ಪತ್ರೇಶ ಹಿರೇಮಠ, ಮಂಜಪ್ಪ ಮಾಲಿ ಪಾಟೀಲ, ಫಕೀರಮ್ಮ ತಳವಾರ, ನಾಗರತ್ನ ಮಾಲಿ ಪಾಟೀಲ ಇತರರು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಮರಿಯಮ್ಮ ಹೆಚ್, ಸ್ವಾಗತಿಸಿದರು, ಶೋಭಾ ಕುಷ್ಟಗಿ ನಿರೂಪಿಸಿದರು, ಮಂಜುಳಾ ಬಿ ವಂದಿಸಿದರು

Please follow and like us:

Related posts