ನಮ್ಮ ಜೊತೆಗೆ ಬಂದು ಪೂಜೆಯಲ್ಲಿ ಪಾಲ್ಗೋಳ್ಳಿ- ಮಂತ್ರಾಲಯದ ಶ್ರೀ

ರಾಘವೇಂದ್ರ ಮಠದವರು ಈ ಸಲದ ಪೂಜೆಗೆ ತಮಗೆ ಅವಕಾಶ ದೊರೆತಿದ್ದು ತಾವೇ ಪೂಜೆ ನೆರವೇರಿಸುವುದಾಗಿ ಹೇಳಿ ಇಂದು ಪೂಜಾ ಕೈಂಕರ್ಯ ನೆರವೇರಿಸಿದರು.

????????????????????????????????????

ಮಂತ್ರಾಲಯದ ರಾಘವೇಂದ್ರ ಶೀಗಳು ಇಂದು ಬೆಳಿಗ್ಗೆ ಆಗಮಿಸಿ ಪೂರ್ವಾರಾಧನೆಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಪೂರ್ವಾರಾಧನೆ, ಮದ್ಯಾರಾಧನೆ, ಉತ್ತರಾಧಾನೆ ಶಾಂತಯುತವಾಗಿ ಮೂರು ದಿನಗಳ ಕಾಲ ನಡೆಯುತ್ತದೆ, ಮೂರು ದಿನಗಳ ಕಾಲ ನಾವು ಪೂಜೆಯನ್ನು ಸಲ್ಲಿಸುತ್ತೇವೆ, ಹೈ ಕೋರ್ಟ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸಬೇಕು, ಹೈ ಕೋರ್ಟ ಆದೇಶವನ್ನು ನಾವು ಸಾಂತಯುತವಾಗಿ ಪಾಲಿಸುತ್ತೇವೆ. ನಾವು ಮಾದ್ಯಮಗಳ ಮೂಲಕ ಉತ್ತರಾಧಿಮಠದವರಿಗೂ ಆಹ್ವಾನ ನಿಡಿದ್ದೇವೆ, ಅವರು ಕೂಡಾ ನಮ್ಮ ಜೋತೆಗೆ ಸೇರಿ ಮೂರು ದಿನಗಳ ಕಾಲ ಪದ್ಮನಾಭ ತೀರ್ಥರ ಆರಾದನೆ ಮಾಡಬೇಕು ಎಂಬದು ನಮ್ಮ ಆಶಯ. ನಮ್ಮ ಮದ್ಯೆ ಯಾವುದೇ ಗಲಾಟೆಗಳಿಲ್ಲ ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂಬುದನ್ನು ಸಾಬಿತು ಪಡಿಸಬೇಕಿದೆ ಹೀಗಾಗಿ ಎಲ್ಲರೂ ನಮ್ಮ ಜೋತೆಗೆ ಬಂದು ಪೂಜೆಯಲ್ಲಿ ಪಾಲ್ಗೋಳ್ಳಿ ಎಂದು ವಿನಂತಿಸಿದರು…