fbpx

ನಮ್ಮಲ್ಲಿ ರಾಜಕೀಯ ಪ್ರಜ್ಞೆಗಿಂತ ಜಾತಿ ಪ್ರಜ್ಞೆ ಹೆಚ್ಚಾಗಿದೆ- ಡಾ.ಮುಜಾಫರ್ ಅಸ್ಸಾದಿ

ಕೊಪ್ಪಳ : ಸುಳ್ಳುಗಳು ರಾಜಕೀಯ ಭಾಷೆಗಳಾಗಿವೆ ಅವನ್ನು ಪ್ರಶ್ನಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ದಲ್ಲಿ ರಾಜಕೀಯ ಪಕ್ಷಗಳು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿವೆ. ತಮ್ಮ ಅಧಿಕಾರಕ್ಕಾಗಿ ಸುಳ್ಳು ಹೇಳುವುದೇ ಒಂದು ಕಾಯಕವಾಗಿದೆ, ನಮ್ಮ ಜನರಲ್ಲಿ ರಾಜಕೀಯ ಪ್ರಜ್ಞೆಗಿಂತ ಜಾತಿ ಪ್ರಜ್ಞೆಯೇ ಹೆಚ್ಚಾಗಿದೆ ಎಂದು ಹಿರಿಯ ರಾಜಕೀಯ ವಿಶ್ಲೇಷಕ, ಬರಹಗಾರ ಹಾಗು ರಾಯಚೂರು ವಿಶ್ವವಿದ್ಯಾಲಯ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ ಹೇಳಿದರು.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಜರುಗಿದ ಕರ್ನಾಟಕ ವಿಧಾನಸಭಾ ಚುನಾವಣೆ: ಒಳ ಹೊರಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಾರತ ಚುನಾವಣೆಗಳ ಉತ್ಸವ ಹಬ್ಬದ ದೇಶ. ಭಾರತದಲ್ಲಿ ನಡೆಯುವಷ್ಟು ಚುನಾವಣೆಗಳು ಎಲ್ಲಿಯೂ ನಡೆಯುವುದಿಲ್ಲ. ವರ್ಷವಿಡಿ ಇಲ್ಲಿ ಸ್ಥಳೀಯ ಸಂಸ್ಥೆಗಳಿಂದಿಡಿದು ಕೇಂದ್ರ ಮಟ್ಟದವರೆಗೂ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕಾಗಿ ನಾವು ನಮ್ಮ ದೇಶವನ್ನು ಚುನಾವಣೆಗಳ ಉತ್ಸವದ ಹಬ್ಬದ ದೇಶ ಅಂತ ಕರೆದರೆ ತಪ್ಪಾಗಲಾರದೂ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಎಲ್ಲಿಯೂ ಜಾತಿ, ಧರ್ಮಭಾಗಿಯಾಗಲಿಲ್ಲ. ಆದ್ರೆ ಸದ್ಯ ಜಾತಿ ಧರ್ಮ ಸಮುದಾಯಗಳು ಭಾಗಿ ಆಗುತ್ತವೆ. ಇಲ್ಲಿ ಜಾತಿ ಮತ್ತು ಸಮುದಾಯದ ಆಧಾರದ ಮೇಲೆ ಚುನಾವಣೆಗಳು ಆಗುತ್ತಿವೆ. ಕೋಮು, ಜಾತಿ, ಧರ್ಮ ಬಿಟ್ಟರೆ ಬೇರೆ ಯಾವ ದೃಷ್ಟಿಕೋನದಿಂದಲೂ ಇಂದು ಚುನಾವಣೆಗಳು ನಡೆಯುತ್ತಿಲ್ಲ. ಭ್ರಷ್ಟಾಚಾರ ವ್ಯಾಪಕವಾಗಿದೆ. ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಯೋಚನೆ ಮಾಡಲಾಗುತ್ತೆ. ಆದರೆ ಅದು ದೇಶದ ಫೆಡರಲ್ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು . ಏಕ ಸಂಸ್ಕೃತಿಯನ್ನು ಹೇರುವಂತದ್ದು. ಮಹಾತ್ಮಗಾಂಧಿ, ನೆಹರೂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಇವರು ರಾಷ್ಟ್ರವನ್ನು ಕಟ್ಟುವುದಕ್ಕೆ ಪ್ರಯತ್ನಿಸಿದವರು. ಮಹಾತ್ಮಗಾಂಧಿ ಅವರು ಸಮುದಾಯಗಳನ್ನು ಒಗ್ಗೂಡಿಸಿ ರಾಷ್ಟ್ರವನ್ನು ಬಲಪಡಿಸಲು ಮುಂದಾದವರು. ಸಮಾನತೆಯನ್ನು ಸರಿದೂಗಿಸಲು ಯೋಚಿಸಿದವರು. ಮಹಿಳೆಯರನ್ನು ಮತ್ತು ದಲಿತರನ್ನು ಸಮನಾಗಿ ಕಾಣುವಂತೆ ಧ್ವನಿಯೆತ್ತಿದವರು. ಅದರಂತೆ ನೆಹರೂ ಕೂಡ ಈ ರಾಷ್ಟ್ರವನ್ನು ಬಲಿಷ್ಠ ಪಡಿಸಲು ಯೋಚಿಸಿದವರು. ಹೊಸ ಚಿಂತನೆಗಳನ್ನು ತಮ್ಮದೇ ಆದ ಸಂಪ್ರದಾಯ ಬದ್ಧವಾಗಿ ಯೋಚನೆಗಳನ್ನು ಮಾಡಿ ದೇಶದ ಅಭಿವೃದ್ಧಿ ಬಗ್ಗೆ ಚರ್ಚಿಸಿದ ವ್ಯಕ್ತಿ. ಈ ಇಬ್ಬರಿಗಿಂತ ಭಿನ್ನವಾಗಿ ಬಾಬಾ ಸಾಹೇಬರು ಕಾಣುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೆ ಸಮಾನತೆ ಸಿಗಬೇಕು. ದಲಿತ ಬಲಿತ, ಉಚ್ಚ ನೀಚ ಎಂಬ ಕಲ್ಪನೆ ದೂರವಾಗಬೇಕು ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು ಶಿಕ್ಷಿತರಾಗಬೇಕು. ದಲಿತರಿಗೆ ನ್ಯಾಯ ಸಿಗಬೇಕು ಅಂತ ಯೋಚಿಸಿದವರು. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಸಂವಿಧಾನವನ್ನು ರಚಿಸಿ ಮಹಿಳೆಗೆ ಆಸ್ತಿಹಕ್ಕು, ಪ್ರತಿಯೊಬ್ಬರಿಗೂ ಮತದಾನ ಹಕ್ಕು, ಮಹಿಳೆ ಮತ್ತು ದಲಿತರಿಗೆ ಮೀಸಲಾತಿ ಹಕ್ಕುನ್ನು ನೀಡಿದ್ದಾರೆ. ಕಾರಣ ಸಮಾನತೆ ಬರಬೇಕು ಅಂತ. ಅದಕ್ಕಾಗಿ ಇವರನ್ನು ನಾವು ಭಿನ್ನವಾಗಿ ಕಾಣುತ್ತೇವೆ. ಚುನಾವಣೆಗಳಲ್ಲಿಯೂ ದಲಿತರು ಗೆಲ್ಲುವುದು ಮೀಸಲು ಕ್ಷೇತ್ರಗಳಲ್ಲಿ ಮಾತ್ರ . ಅದರಲ್ಲೂ ಗಮನಿಸಬೇಕಾದ ಒಂದು ಅಂಶವೆಂದರೆ ನೋಟಾ ಚಲಾವಣೆ ಅತೀ ಹೆಚ್ಚಾಗಿರುತ್ತೆ. ಮೀಸಲು ಕ್ಷೇತ್ರಗಳಲ್ಲಿ ಜಾತಿ ಪ್ರಜ್ಞೆ ಅತೀ ಹೆಚ್ಚು ಕೆಲಸ ಮಾಡುತ್ತೆ.
ಮಹಿಳೆಗೆ ಪ್ರಜಾಪ್ರಭುತ್ವದಲ್ಲಿ ಮೀಸಲಾತಿ ಇದ್ದರೂ ಅದು ಸ್ವಾತಂತ್ರ್ಯ ಪೂರ್ವದಲ್ಲಿರುವ ಚೌಕಟ್ಟಿನಂತೆ ಮುಂದುವರೆದಿದೆ. ಕೇವಲ ಗ್ರಾಮ ಪಂಚಾಯತಿ, ತಾಲೂಕ ಹಾಗೂ ಜಿಲ್ಲಾ ಪಂಚಾಯತ್ ವಲಯಗಳಲ್ಲಿ ಮಾತ್ರ ಮೀಸಲಾತಿ ಸಿಕ್ಕಿದೆ ವಿನಾಃ ಇನ್ನು ವಿಧಾನಸಭಾ ಮತ್ತು ಲೋಕಸಭೆಯಲ್ಲಿ ಸಂಪೂರ್ಣವಾಗಿ ಮೀಸಲಾತಿಯನ್ನು ನಾವು ಕಾಣುತ್ತಿಲ್ಲ. ಮಹಿಳೆ ಕೇವಲ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸುವಂತ್ತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಬೆರಳಣಿಕೆಯಷ್ಟು ಮಹಿಳೆಯರನ್ನು ನಾವು ಕಾಣುತ್ತಿದ್ದೇವೆ. ಅದರಲ್ಲಿ ನಾವು ಬಹುಮುಖ್ಯವಾಗಿ ಇಂದಿರಾ ಗಾಂಧಿ ಅವರನ್ನು ಕಾಣುತ್ತೇವೆ. ತುರ್ತುಪರಿಸ್ಥಿತಿ ಮತ್ತು ಬಾಂಗ್ಲಾ ಸ್ವಾತಂತ್ರ್ಯ ದೇಶವಾಗಲು ಕಾರಣಾಗಿದ್ದಕ್ಕೆ. ಅದಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ದುರ್ಗೆಗೆ ಹೊಲಿಸಿದ್ದರು. ಉಕ್ಕಿನ ಮಹಿಳೆ ಅಂತ ಹೆಸರುವಾಸಿಯಾಗಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಪುರುಷರಿಗಿಂತ ಅತಿ ಹೆಚ್ಚು ಧ್ವನಿ ಎತ್ತಿದ ಮಹಿಳೆ. ಈ ದೇಶದ ದಲಿತ, ವೃದ್ಧ ಮತ್ತು ಮಹಿಳೆಯರಿಗಾಗಿ ದುಡಿದ ಮಹಿಳಾ ಪ್ರಧಾನಿ ಅಂತ ಹೇಳಿದರು.
ಇಂದು ಅಂತಹ ಸ್ವಾತಂತ್ರ್ಯವನ್ನು ಇಂದಿನ ಪ್ರಜಾಪ್ರಭುತ್ವದಲ್ಲಿ ಕಾಣುತ್ತಿಲ್ಲ. ಮಹಿಳೆಯರು ರಾಜಕೀಯಕ್ಕೆ ಬಂದ್ರೆ ಅವರು ಭ್ರಷ್ಟಾಚಾರದಲ್ಲಿ ತೊಡುಗುತ್ತಾರೆ. ಅವರನ್ನು ರಾಜಕೀಯಕ್ಕೆ ಎಳೆತರುವುದು ಬೇಡ ಅಂತ ಕೆಲವರ ವಾದ. ಇದು ಸರಿಯಲ್ಲ. ಮಹಿಳೆಯರಿಗೂ ಸ್ವಾತಂತ್ರ್ಯ ನೀಡುವ ಅಗತ್ಯವಿದೆ. ಜಾತಿ, ಧರ್ಮದಂತಹ ವಿಷಯಗಳು ಚುನಾವಣಾ ರಾಜಕಾರಣದಿಂದ ದೂರವಿಡಬೇಕು. ಹಣದ ಹೊಳೆಗೆ ಬ್ರೇಕ್ ಬೀಳಬೇಕು. ಜನರಿಗೆ ಚುನಾವಣೆ ಮಹತ್ವಗಳ ಬಗ್ಗೆ ಹೆಚ್ಚು ಹೆಚ್ಚು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಹಿರಿಯ ನ್ಯಾಯವಾದಿ ಸಂದ್ಯಾ ಮಾದಿನೂರ ಮಹಿಳಾ ಮೀಸಲಾತಿಯ ಕುರಿತು ವಿಸ್ತೃತವಾಗಿ ಮಾತನಾಡಿ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಅವರ ಕೌಟುಂಬಿಕ ಹಿನ್ನೆಲೆಯ ಮೇಲೆ ಸಿಗುತ್ತಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಮಹಿಳೆ ಅಧಿಕಾರವನ್ನು ಪಡೆಯುವುದು ಅಸಾಧ್ಯದ ಮಾತಾಗಿದೆ. ಮೀಸಲಾತಿಗೆ ಪಡೆಯಲು ದೊಡ್ಡ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು. ಚುನಾವಣಾ ಮಹಿಳಾ ಅನುಭವದ ಕುರಿತು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್ ಹಾಗೂ ಯಲಬುರ್ಗಾ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷೆ iಹಾದೇವಿ ಕಂಬಳಿ ಮಾತನಾಡಿತ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ವಾಣಿ ಪೆರಿಯೋಡಿ , ನಿರೂಪಣೆಯನ್ನು ವಿಜಯಲಕ್ಷ್ಮಿ ಕೊಟಗಿ ಮಾಡಿದರೆ ಸಂಯೋಜನೆಯನ್ನು ಡಾ.ಎಚ್.ಎಸ್.ಅನುಪಮಾ ಮಾಡಿದರು.

Please follow and like us:
error
error: Content is protected !!