ನನಗೆ ಯಾರೂ ಆಫರ್ ಕೊಟ್ಟಿಲ್ಲ- ಆರ್.ಶಂಕರ್

ಕೊಪ್ಪಳ : ಐದು ವರ್ಷ ಸುಭದ್ರ ಸರ್ಕಾರ ನಡೆಯುತ್ತದೆ ಯಾವುದೇ ಅನುಮಾನವಿಲ್ಲ ಈಗಿರುವ ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ್ ಹೇಳಿದರು ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ರಾಜೀನಾಮೆ ನೀಡುತ್ತೇನೆ ಎಂಬ ವಿಷಯ ಸುಳ್ಳು. ಸರ್ಕಾರ ಬೀಳುತ್ತದೆ ಅಂತ ಮಾಧ್ಯಮ ಗಳಲ್ಲಿ ಹೇಳಲಾಗುತ್ತಿದೆ. ನಾನು ಯಾರ ಜೊತೆಯೂ ಸಂಪರ್ಕದಲ್ಲಿ. ನನಗೆ ಯಾರೂ ಸಂಪರ್ಕ ಮಾಡಿಲ್ಲ ಯಾವುದೇ ಆಫರ್ ಬಂದಿಲ್ಲ. ಟಿವಿಗಳಲ್ಲಿ ಎನು ಬರುತ್ತಿದೆ ಎನ್ನುವುದು ಗೊತ್ತಿಲ್ಲ.

ನಾನು ಟಿವಿ ನೋಡಲ್ಲ ಪತ್ರಿಕೆ ಓದಲ್ಲ. ನಾನು ನನ್ನ ಕ್ಷೇತ್ರ ಹಾಗು ಉಸ್ತುವಾರಿ ಕ್ಷೇತ್ರದ ಕೆಲಸದಲ್ಲಿ ಬ್ಯೂಸಿ ಆಗಿದ್ದೇನೆ. ಪದೇ ಪದೇ ಅದನ್ನ ಕೇಳಿದರೆ ನಾನೇನು ಮಾಡೋಕೆ ಸಾಧ್ಯ. ನನ್ನನ್ನು ಯಾರು ಸಂಪರ್ಕ ಮಾಡಿಲ್ಲ.

ಯಾರು ಎಷ್ಟು ಕೊಡ್ತಾರೋ..? ಎಷ್ಟು ತೆಗೆದುಕೊಳ್ತಾರೋ ನನಗೆ ಸಂಬಂಧವಿಲ್ಲ.ನಾನು ಪಕ್ಷೇತರ ಶಾಸಕನಾಗಿದ್ದೇನೆ.ರಾಜಿನಾಮೆ ಕೊಡುವ ಪ್ರಶ್ನೆ ಇಲ್ಲ.ಯಾವ ಕಿಂಗ್ ಪಿನ್ ಗೋತ್ತಿಲ್ಲ, ಪಿನ್ ಗೊತ್ತಿಲ್ಲ.ನಾನು ಗೊಂದಲದ ಬಗ್ಗೆ ಗಮನ ಹರಿಸ್ತಾ ಇಲ್ಲ. ನಾನು ರೆಸ್ಟ್ ಲೆಸ್ ಕೆಲಸ ಮಾಡ್ತಾ ಇದ್ದಾನೆ.ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ಪಕ್ಕಾ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ್ ಹೇಳಿದರು.

Related posts