ನನಗೆ ಮಕ್ಕಳಾಗಿಲ್ಲಾ ಗಿಡಗಳನ್ನು ನೆಟ್ಟು ತಾಯಿಯಾಗಿದ್ದೇನೆ- ತಿಮ್ಮಕ್ಕ

ರಾಮನಗರ :ನಾನು ಬದುಕಿರುವವರೆಗೂ ನನ್ನ ಕೈಲಾದ ಮಟ್ಟಿಗೆ ಪರಿಸರವನ್ನು ಸಂರಕ್ಷಣೆ ಮಾಡುವುದೇ ನನ್ನ ಗುರಿ ಎಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ರಾಜ್ಯೋತ್ಸವ-ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದ,

ನಾನು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಕಡುಬಡತನದಲ್ಲಿ ಜನಿಸಿ ಶಾಲೆಯ ಮೆಟ್ಟಿಲು ತುಳಿಯದ ನಾನು ಮದುವೆಯಾಗಿ ಬಂದಿದ್ದು ಮಾಗಡಿ ತಾಲೂಕಿಗೆ. ನನಗೆ ಮಕ್ಕಳಾಗಿಲ್ಲ ಎಂದು ನನ್ನನ್ನು ಹಿಯಾಳಿಸಿದ ನನ್ನ ಗ್ರಾಮದ ಜನರ ಮುಂದೆ ನಾನಿಂದು ಸಾಧಕಿಯಾಗಿ ನಿಂತಿದ್ದೇನೆ. ನಿಜ ನನಗೆ ಮಕ್ಕಳಾಗಿಲ್ಲ. ಆದರೆ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ ತಾಯಿಯಾಗಿದ್ದೇನೆ ಎಂದು ತಿಳಿಸಿದರು.

ನನ್ನ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತವರು ನನ್ನ ಕೈಹಿಡಿದ ಗಂಡ ಚಿಕ್ಕಯ್ಯ. ಇಡೀ ಗ್ರಾಮವೇ ನನ್ನ ಬಂಜೆ ಎಂದು ಅಣುಕಿಸಿದರೂ ನನ್ನ ಪತಿ ಚಿಕ್ಕಯ್ಯ ಗಿಡವನ್ನು ಪೋಷಿಸುವ ನನ್ನ ಕೆಲಸಕ್ಕೆ ಕೈಜೋಡಿಸಿದರು. ಮಕ್ಕಳಿಲ್ಲವೆಂಬ ಚಿಂತೆ ಕಾಡುತ್ತಿದ್ದಾಗ ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಆದರೆ ಆ ಮಧ್ಯೆ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ನಮ್ಮಿಬ್ಬರಿಗೂ ಪರಿಸರವನ್ನು ಉಳಿಸುವ ಯೋಚನೆ ಬಂದಿತು ಎಂದು ಹೇಳಿದರು. ನನ್ನ ಗಂಡನ ಸಹಾಯದಿಂದ ಈಗ ಬರೋಬ್ಬರಿ 8,000 ಮರಗಳನ್ನು ನೆಟ್ಟು ಪೋಷಿಸಿ ಅದರಲ್ಲೇ ತೃಪ್ತಿ ಕಂಡಿದ್ದೇವೆ. ಅದರಂತೆ ಇಲ್ಲಿ ನೆರೆದಿರುವ ವಿದ್ಯಾರ್ಥಿಗಳೂ ಕೂಡ ಗಿಡವನ್ನು ಬೆಳೆಸಿ ಪರಿಸರವನ್ನು ಉಳಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರು ಇತರರು ಇದ್ದರು.

Please follow and like us:
error