ನಗರ ಸ್ಥಳೀಯ ಸಂಸ್ಥೆ ಚುನಾವಣೆ : ೧೦೫ ನಾಮಪತ್ರಗಳ ತಿರಸ್ಕೃತ, ೪೯೩ ಕ್ರಮಬದ್ಧ

ಕೊಪ್ಪಳ ಆ.  :  ಪ್ರಸಕ್ತ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಚುನಾವಣೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಎರಡು ನಗರಸಭೆ, ಒಂದು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯತಿ ಸೇರಿದಂದೆ ೧೦೪ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರಗಳನ್ನು ಸಲ್ಲಿಸದ ಪೈಕಿ ೫೯ ಅಭ್ಯರ್ಥಿಗಳು ಹಾಗೂ ೧೦೫ ನಾಮಪತ್ರಗಳು ತಿರಸ್ಕೃತಗೊಂಡು ಒಟ್ಟು ೪೯೩ ಅಭ್ಯರ್ಥಿಗಳ ನಾಮಪತ್ರವು ಕ್ರಮಬದ್ಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
ಕೊಪ್ಪಳ ನಗರಸಭೆಯ ೩೧ ವಾರ್ಡ್‌ಗಳ ಪೈಕಿ ೩೧ ಅಭ್ಯರ್ಥಿಗಳು ಹಾಗೂ ೨೯ ನಾಮಪತ್ರಗಳು ತಿರಸ್ಕೃತಗೊಂಡು ೧೬೯ ಕ್ರಮಬದ್ಧವಾಗಿವೆ.

ಗಂಗಾವತಿ ನಗರಸಭೆ ೩೫ ವಾರ್ಡ್‌ಗಳ ಪೈಕಿ ೧೫ ನಾಮಪತ್ರಗಳು ತಿರಸ್ಕೃತ, ೧೬೯ ಕ್ರಮಬದ್ಧವಾಗಿವೆ.

ಕುಷ್ಟಗಿ ಪುರಸಭೆ ೨೩ ವಾರ್ಡ್‌ಗಳ ಪೈಕಿ ೮ ಅಭ್ಯರ್ಥಿಗಳು ಹಾಗೂ ೪೦ ನಾಮಪತ್ರಗಳು ತಿರಸ್ಕೃತ, ೯೮ ಕ್ರಮಬದ್ಧ.

ಯಲಬುರ್ಗಾ ಪಟ್ಟಣ ಪಂಚಾಯತಿ ೧೫ ವಾರ್ಡ್‌ಗಳ ಪೈಕಿ ೨೦ ಅಭ್ಯರ್ಥಿಗಳು ಹಾಗೂ ೨೧ ನಾಮಪತ್ರಗಳು ತಿರಸ್ಕೃತ, ೫೭ ಕ್ರಮಬದ್ಧ

ಸೇರಿದಂತೆ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ೧೦೪ ವಾರ್ಡ್‌ಗಳ ಪೈಕಿ ೫೯ ಅಭ್ಯರ್ಥಿಗಳು ಹಾಗೂ ೧೦೫ ನಾಮಪತ್ರಗಳು ತಿರಸ್ಕೃತಗೊಂಡು ಒಟ್ಟು ೪೯೩ ಅಭ್ಯರ್ಥಿಗಳು ಹಾಗೂ ನಾಮಪತ್ರವು ಕ್ರಮಬದ್ಧವಾಗಿದೆ .