ನಗರಾಭಿವೃದ್ದಿ ಪ್ರಾದಿಕಾರದ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್

ಸರ್ಕಾರದಿಂದ ಆಯ್ಕೆ, ಪ್ರಕಟ | ಮಧುರಾ, ಬಸವರಾಜ್, ನಾಗಭೂಷಣ್, ಶಹನಜಾಬೇಗಂ ಸದಸ್ಯರು
ಕೊಪ್ಪಳ:ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಮಹಾಂತೇಶ್ ಪಾಟೀಲ್ ಮೈನಳ್ಳಿ ಅವರನ್ನು ಆಯ್ಕೆ ಮಾಡಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಎಸ್. ಶಿವಕುಮಾರಸ್ವಾಮಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಜನವರಿ ೨ರಂದು ಆದೇಶ ಹೊರಡಿಸಿರುವ ಅವರು, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-೧೯೮೭ರ ಕಲಂ೩(೩ಎ) ಮತ್ತು (ಎಂ) ಅನ್ವಯ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಮುಂದಿನ ಮೂರು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಮಹಾಂತೇಶ್ ಪಾಟೀಲ್, ಸದಸ್ಯರಾಗಿ ಸಾಮಾನ್ಯ ವರ್ಗದ ನಾಗಭೂಷಣ್ ಸಾಲಿಮಠ್, ಹಿಂದುಳಿದ ವರ್ಗದಿಂದ ಸೈಯದ್ ಶಹನಜಾಬೇಗಂ ನಾಸಿರುದ್ಧಿನ್ ಹುಸೇನಿ, ಪರಿಶಿಷ್ಟ ಜಾತಿಯಿಂದ ಬಸವರಾಜ ವಡ್ಡರ್(ಭೋವಿ) ಹಾಗೂ ಮಹಿಳಾ ಕೋಟಾದಡಿ ಮಧುರಾ ಕರಣಂ ಅವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.

ನಗಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡಿದ್ದಕ್ಕಾಗಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ್ ಕರಡಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ  ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಯ್ಕೆಯಾಗಿದ್ದರಿಂದ ನಗರದ ಅಭಿವೃದ್ಧಿ, ನಗರವಾಸಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಮರೇಶ್ ಕರಡಿ ಅವರು ತಿಳಿಸಿದ್ದಾರೆ.

ದಿನಾಂಕ 02 . 01 . 2020 . . ಅಧಿಸೂಚನೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ನಿಯಮ 3 ( 4 ) ರಡಿಯ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನಾ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3 ( 3 ) ( ಎ ) ಮತ್ತು ( ಎಂ ) ರನ್ವಯ ಹಾಗೂ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ಕೊಪ್ಪಳ ನಗರಾಭಿವೃದ್ಧಿ  ಅದ್ಯಕ್ಷರು ಹಾಗೂ ಸದಸ್ಯರುಗಳನ್ನಾಗಿ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಅದೇಶದವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನೇಮಕ ಮಾಡಿ ಆದೇಶಿಸಲಾಗಿದೆ . 

ಅಧ್ಯಕ್ಷರಾಗಿ  ಮಹಾಂತೇಶ ತಂದಿ ಶಂಕರಗೌಡ ಪಾಟೀಲ್ , ಪಾಟೀಲ್  ಕೊಪ್ಪಳ ,

ಸದಸ್ಯರಾಗಿ : 2 ನಾಗಭೂಷಣ ತಂದೆ ರಾಜಶೇಖರಯ್ಯ ಸಾಲೀಮಠ ,  ಶ್ರೀಮತಿ ಸೈಯದ್ ಶಹನಜಾಬೇಗಂ ಗಂಡ ಸೈಯದ್ | ನಾಸೀರುದ್ದಿನ್ ಹುಸೇನಿ ತೇಗ್ಗಿನಕೇರಿ , ಕೊಪ್ಪಳ , , ಬಸವರಾಜ ತಂದೆ ಯಮನಪ್ಪ ವಡ್ಡರ್ ( ಭೂವಿ ) | , ಶ್ರೀಮತಿ ಮದುರಾ ಕರ್ಣಂ ನೇಮಕಗೊಂಡಿದ್ದಾರೆ.

Please follow and like us:
error