ನಗರಸಭೆ ಬಜೆಟ್ ನಿರುಪಯುಕ್ತ- ಸಿ.ವಿ.ಚಂದ್ರಶೇಖರ್

ಕೊಪ್ಪಳ: 2018-19 ನೇ ಸಾಲಿನ ನಗರಸಭೆಯ ಬಜೆಟ್ ಮಂಡಿಸಿರುವ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ತಮ್ಮನ್ನು ತಾವು ಏನೆಂದು ತಿಳಿದಿದ್ದಾರೋ ಅಥರ್Àವಾಗುತ್ತುಲ್ಲ. ಬಜೆಟ್ ಮಂಡನೆ ಎಂದರೆ ಜನರ ಮೂಗಿಗೆ ತುಪ್ಪÀ ಸವರುವುದು ಎಂದುಕೋಂಡಿದ್ದಾರೆನೋ ಎನಿಸುತ್ತಿದೆ.
ಬಜೆಟ್ ಮಂಡನೆಯ ಪರಿಕಲ್ಪನೆ ಅವರಿಗಿದೆಯೇ? ಎನ್ನುವ ಸಂಶಯ ಮೂಡುತ್ತಿದೆ. ಕಳೆದಬಾರಿ ಬಜೆಟ್ ಮಂಡಿಸಿ ಅಂದು ಘೋಷಣೆ ಮಾಡುತ್ತಾರೆ. ನಿರಂತರ (24*7) ಕುಡಿಯುವ ನೀರಿನ ಸೌಲಭ್ಯ, ವಸತಿ ಯೋಜನೆ ಹೀಗೆ ಒಟ್ಟು 24 ಯೋಜನೆಗಳ ಮಂಡನೆ ಮಾಡಿದ್ದೀರಾ? ಆದರೆ, ಈ ಹಿಂದಿನ ಬಜೆಟ್ ನ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿವೆಯೇ? ಕೊಪ್ಪಳ ಜನತೆಗೆ 24*7 ಕುಡಿಯುವ ನೀರಿನ ಸೌಲಭ್ಯ ದೊರೆತಿದಿಯಾ? ರಸ್ತೆ, ವಿವಿದ ಕಾಮಗಾರಿಗಳು ಪೂರ್ಣ ಗೊಂಡಿವೆಯಾ? ಪ್ರಸ್ತುತ ನಗರದ ಉದ್ಯಾನವನಗಳ ಪರಸ್ಥಿತಿ ಹೇಗಿವೆ? ಇದ್ಯಾವುದು ಸರಿಯಾಗಿಲ್ಲ. ಹಾಗೇಯೇ ಗಂಜ್ ವೃತ್ತದಿಂದ ಗಡಿಯಾರ ಕಂಬದ ಮಾರ್ಗವಾಗಿ ಸಿಂದೋಗಿ ರಸ್ತೆಯು ನಾಲ್ಕು ಬಾರಿ ಭೂಮಿ ಪೂಜಾಯಾದರೂ ಕಾಮಗಾರಿ ಆರಂಭವಾಗಿಲ್ಲ. ಯುಜಿಡಿ ಕೆಲಸ ನಡೆಯುವಲ್ಲಿ ಸಾರ್ವಜನಿಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಗರದಲ್ಲಿ ಎಲ್ಲೇಂದರಲ್ಲಿ ತೆರದ ಗುಂಡಿಗಳು, ಚರಂಡಿಗಳು ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಅದಿಕಾರಿಗಳ ನಿರ್ಲಕ್ಷದಿಂದ ಹಾಗೂ ಶಾಸಕರ ಮತ್ತು ನಗರಸಭೆ ನಿದ್ರಾಸವ್ಥೆಯಲ್ಲಿರುವುದರಿಂದ ನಗರದ ಜನತೆ ಸಮಸ್ಯೆಗಳ ನಡುವೆ ರೋಷಿ ಹೋಗಿದ್ದಾರೆ.
ಇದ್ಯಾವುದನ್ನು ಸರಿಯಾಗಿ ನಿಭಾಯಿಸದೇ, ಕೇಂದ್ರಸರ್ಕಾರದ ಅಮೃತ ಯೋಜನೆಯಲ್ಲಿ ಜಿಲ್ಲೆಯನ್ನು ಸೇರ್ಪಡೆ ಮಾಡುವಂತೆ ಮನವಿ ಸಲ್ಲಿಸುತ್ತೇವೆ ಎನ್ನುವ ಮುಂಚೆ ಕೊಪ್ಪಳವನ್ನು ದೂಳು ಮುಕ್ತ ನಗರವನ್ನಾಗಿ ಮಾಡಿ ಬಡಜನರ ವ್ಯಾಪಾರಿಗಳ ಕುರಿತು ಗಮನ ಹರಿಸಿ. ನಿಮ್ಮ ಸ್ವಾರ್ಥದ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಬಡ ತರಕಾರಿ ವ್ಯಾಪಾರಿಗಳಿಗೆ ಜೆಪಿ ಮಾರುಕಟ್ಟೆಯಲಲಿ ಮಳಿಗೆಗಳನ್ನು ನೀಡುತ್ತೆವೆಂದು ಪೊಳ್ಳು ಬರವಸೆಯನ್ನು ನೀಡಿ ರಾಹುಲ್ ಗಾಂಧಿ ರ್ಯಾಲಿ ಮಾಡಿದಿರೆಲ್ಲ ಇದೂ ವರೆಗೂ ಆವ್ಯಾಪಾರಿಗಳಿಗೆ ಮಳಿಗೆಗನ್ನು ನೀಡಿಲ್ಲ. ಇದೆಲ್ಲವನ್ನು ಬಿಟ್ಟು, ನಿಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಮತ್ತೊಂದು ಬಜೆಟ್ ಮಂಡನೆ ಮಾಡಿರುವುದು ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಿಲ್ಲ ಎಂಬುದನ್ನು ಜನ ಅರಿತಿದ್ದಾರೆ. ನಾಲ್ಕುವರ್ಷಗಳ ಕಾಲ ಏನನ್ನು ಮಾಡದ ನೀವು , ಮುಂದೆ ಏನನ್ನು ಮಾಡಲಾರಿರಿ ಒಟ್ಟಾರೆಯಾಗಿ ಈ ಬಜೆಟ್ ನಿರುಪಯುಕ್ತ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಪ್ರತಿಕ್ರೀಯಿಸಿದ್ದಾರೆ.
—————–

Please follow and like us:
error