ನಗರಸಭೆ  ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆಹಿಡಿಯಲು ನಗರಸಭಾ ಸದಸ್ಯರ ಮನವಿ

ಕೊಪ್ಪಳ : ತೀವ್ರ ಕುತೂಹಲ ಮೂಡಿಸಿರುವ ಕೊಪ್ಪಳ ನಗರಸಭೆ  ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲು ಮನವಿ ಮಾಡಲಾಗಿದೆ.  ಸಹಾಯಕ ಆಯುಕ್ತೆ ಸಿ.ಡಿ.ಗೀತಾರವರಿಗೆ ನಗರಸಭಾ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಹಾಗೂ ಗುರುರಾಜ್ ಹಲಗೇರಿ ಈ ಕುರಿತು ಮನವಿ ಸಲ್ಲಿಸಿ ದಿ 13/03/2020 ರ ಮುಖ್ಯಮಂತ್ರಿಗಳ ಆದೇಶದಂತೆ ಯಾವುದೇ ಸರಕಾರಿ ಸಭೆ, ಸಮಾರಂಭ, ಮದುವೆ, ನಾಮಕರಣ,ಹುಟ್ಟುಹಬ್ಬ, ಚಿತ್ರಮಂದಿರ ಮಾಲ್ ಗಳು ಇನ್ನಿತರ ಜನಸಂದಣಿ ಕಾರ್ಯಕ್ರಮಗಳನ್ನ ರದ್ದು ಮಾಡಿರುವುದರಿಂದ ಈ ನಗರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಗರಸಭೆಯ ಎಲ್ಲಾ ಸದಸ್ಯರು ಅಧಿಕಾರಿಗಳು ಮಾಧ್ಯಮಗಳು ಅಭಿಮಾನಿಗಳು ಹಿತೈಷಿಗಳು ಹಾಗೂ ಬಂದೋಬಸ್ತ್ ಮಾಡುವ ಪೊಲೀಸರು ಇನ್ನು ಅನೇಕ ಸಾರ್ವಜನಿಕರು ಸುಮಾರು 200 ರಿಂದ 300ಜನ ಸೇರಿವುದರಿಂದ ಮತ್ತು ಆಯ್ಕೆ ಪ್ರಕ್ರಿಯೇ ಮುಗಿದ ಮೇಲೆ ವಿಜಯೋತ್ಸವ ಆಚರಿಸಲು ಪಟಾಕಿಗಳ ಸುಡುವುದರ ಮುಖಾತರ ವಿಜೃಂಭಣೆಯನ್ನ ಆಚರಿಸುವುದು ಸಾಮಾನ್ಯ ಸಂಗತಿ . ಇದರಿಂದ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಜೊತೆಗೆ ಕರೊನಾ ಹರಡಲು ಸಹಕರಿಸಿದಂತೆ ಆಗುತ್ತದೆಯಂದು ಸದ್ಯ ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ಚುನಾವಣೆಯ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ತಡೆಯಿಡಿಯಬೇಕೆಂದು ಮನವಿ ಸಲ್ಲಿಸಿದ್ದಾರೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ  ಮತ್ತೊಮ್ಮೆ ಮುಂದೂಡುವ ಸಾಧ್ಯತೆಗಳಿವೆ. ಇದು ಆಕಾಂಕ್ಷಿಗಳಲ್ಲಿ ಮತ್ತಷ್ಟು ನಿರಾಸೆ ಮೂಡಿಸಿದೆ.

Please follow and like us:
error