ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮುಂದೂಡಿಕೆ

ಕೊಪ್ಪಳ : ಕೊಪ್ಪಳ ನಗರಸಭೆಗೆ ನಾಳೆ ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉಚ್ಛ ನ್ಯಾಯಾಲಯದ ಧಾರವಾಡ ಪೀಠವು ಈ ಮೊದಲು ನಿರ್ಧರಿತವಾಗಿದ್ದ ಮೀಸಲಾತಿಗೆ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ೩-೯-೨೦೧೮ ಹಾಗೂ ೬-೯-೨೦೧೮ರಂದು ಮೀಸಲಾತಿಯನ್ನು ನಿಗದಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ೧೦ ರಂದು ಮದ್ಯಂತರ ತೀರ್ಪು ನೀಡಿರುವ ನ್ಯಾಯಾಲಯವು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಅದೇಶ ನೀಡಿದೆ. ಇದರನ್ವಯ ನಗರಾಭಿವೃದ್ದಿ ಇಲಾಖೆ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಹೀಗಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಚುನಾವಣೆಯ ಪ್ರಕ್ರಿಯೆ ೨೦ರ ತನಕ ಮುಂದೂಡಲಾಗಿದೆ. ಅವತ್ತು ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು ಅಂದೇ ತೀರ್ಪು ಬರುವ ಸಂಭವ ಇದೆ.

ನಾಳೆ ಕೊಪ್ಪಳ ನಗರಸಭೆ ಹಾಗೂ ೨೦ ರಂದು ಗಂಗಾವತಿ ನಗರಸಭೆ ಅದ್ಯಕ್ಷ ಉಪಾದ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು.

Please follow and like us:
error