ನಗರದ ಅಭಿವೃದ್ದಿಗೆ ರೂ. ೭೫ ಕೋಟಿ ಅನುದಾನ ಬಿಡುಗಡೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ: ೧೯ ನಗರದ ವಿವಿಧ ವಾರ್ಡಗಳಲ್ಲಿ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ೨೦೧೭-೧೮ನೇ ಸಾಲಿನ ತಾಂಡಾ ಅಭಿವೃದ್ದಿ ನಿಗಮದ ಯೋಜನೆ ಅಡಿಯಲ್ಲಿ ಬಹದ್ದೂರಬಂಡಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ೧೪ನೇ ಹಣಕಾಸು, ನಗರೊತ್ತಾನದ ೩ನೇ ಯೋಜನೆ ಹಾಗೂ ಎಸ್.ಎಫ್.ಸಿ ಅನುದಾನದ ಅಡಿಯಲ್ಲಿ ಕೊಪ್ಪಳ ನಗರದ ಸರ್ವಾಂಗೀಣ ಅಭಿವೃದ್ದಿಗೆ ಅಂದಾಜು ಮೊತ್ತ ರೂ. ೭೫ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ನಗರದ ಪ್ರಮುಖ ರಸ್ತೆಗಳ ಜೊತೆಗೆ ಎಲ್ಲಾ ೩೧ ವಾರ್ಡಗಳಲ್ಲಿ ಗುಣಮಟ್ಟದ ಸಿ.ಸಿ.ರಸ್ತೆ, ಡಾಂಬರ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತುಂಗಭದ್ರ ನದಿಯ ಹಿನ್ನಿರಿನಿಂದ ಹುಲಿಕೇರಿ ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ೨೪*೭ ಕುಡಿಯುವ ನೀರಿನ ಕಾಮಗಾರಿಯು ಸಂಪೂರ್ಣಗೊಂಡಿದ್ದು ನಗರದಲ್ಲಿ ಕೂಡಲೇ ಸಬ್‌ಲೈನಗಳ ಕಾಮಗಾರಿಗೆ ರೂ. ೪.೫ ಕೋಟಿಯ ಅನುದಾನದಿಂದ ಕಾಮಗಾರಿಯು ಪೂರ್ಣಗೊಂಡು ಪ್ರತಿನಿತ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ನಗರದ ಜನತೆ ಸ್ವಚ್ಛತೆ ಕಡೆ ಹೆಚ್ಚು ಗಮನ ಕೊಡಬೇಕು ತೀರ್ವಗತಿಯಲ್ಲಿ ಬೆಳೆಯುತ್ತಿರುವ ನಗರದ ಅಭಿವೃದ್ದಿಗೆ ಪ್ರತಿಯೊಬ್ಬ ನಾಗರಿಕರು ಕೈಜೊಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷರುಗಳಾದ ಸುರೇಶ ಬೂಮರೆಡ್ಡಿ, ಕಾಟನ ಪಾಷಾ, ಎ.ಪಿ.ಎಂ.ಸಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ, ನಗರಸಭಾ ಸದಸ್ಯರುಗಳಾದ ಅಮ್ಜದ ಪಟೇಲ್, ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ, ಪ್ರಾಣೇಶ ಮಾದಿನೂರ, ಮುಖಂಡರುಗಳಾದ ಪ್ರಸನ್ನ ಗಡಾದ, ಯಮನೂರಪ್ಪ ನಾಯಕ, ಭಾಷುಸಾಬ ಕತೀಬ, ಅಪ್ಸರ ಸಾಬ ಅತ್ತಾರ, ಚಾಂದಪಾಷಾ ಕಿಲ್ಲೆದಾರ, ಕುರುಗೋಡ ರವಿ, ನಜೀರ ಸಾಬ ಮುದಗಲ್, ಗುರುರಾಜ ಹಲಗೇರಿ, ಶರಣಪ್ಪ ಕುರಿ, ವೀರಣ್ಣ ಸಂಡೂರು, ಇಕ್ಬಾಲ ಸಿದ್ದಿಕಿ, ಅಜ್ಜಪ್ಪ ಸ್ವಾಮಿ, ಕಲ್ಲಾಕ್ಷಪ್ಪ ಪೂಜಾರ, ಶಿವಾನಂದ ಹೊದ್ಲುರ, ಬಾಬಾ ಅರಗಂಜಿ, ಉಮಾ ಜನಾದ್ರಿ, ನಗರಸಭೆ ಪೌರಾಯುಕ್ತ ಪರಮೇಶ್ವರ, ಅಭಿಯಂತರರು ಮಂಜುನಾಥ, ಗುತ್ತಿಗೆದಾರ ನಾಗರಾಜ ಕಂದಾರಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Related posts