ನಕಲಿ ಬಂಗಾರ : ಮೋಸಗಾರನ ಬಂಧನ

Koppal ಸಾರ್ವಜನಿಕರಿಗೆ ನಕಲಿ ಬಂಗಾರ ಕೊಟ್ಟು ಮೋಸ ಮಾಡುವವರ ಬಂಧನ. ನಿನ್ನೆ ದಿನಾಂಕ : 11 – 05 – 2019 ರಂದು ಮದ್ಯಾಹ್ನ 12 – 45 ಗಂಟೆಗೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದಾಗ ಆರೋಪಿತರಾದ  ಬಸವರಾಜ ತಂದೆ ನಾಗಪ್ಪ ಕೊರಚರ ವಯಾ 30 ವರ್ಷ ಸಾ : ಬತ್ತಳಹಳ್ಳಿ ತಾ : ಕೂಡ್ಲಿಗಿ  ಪ್ರಶಾಂತ ತಂದೆ ಕೊಡಿಪೆಲ್ಲಪ್ಪ ಕೊರಚರ ವಯಾ 32 ವರ್ಷ 15 :

image

ಕುಂಚಿಕೋರವರ ಸಾ : ಗಜಾಪೂರ s : ಕೂಡ್ಲಿಗಿ ,  ಸುರೇಶ  ಸೂರ್ಯ ತಂದೆ ಸುಂಕಪ್ಪ ಕೊರಚರ ವಯಾ 30 ವರ್ಷ  : ಕುಂಚಿಕೊರವರ್ : ಗುಮ್ಮನಹಳ್ಳಿ ತಾ : ಕೂಡ್ಲಿಗಿ ರವರು ಓಡಿ ಹೊಗುತ್ತಿದ್ದಾಗ  ಎ – 1 ಆರೋಪಿ ಬಸವರಾಜ ಕೊರಚರ ಈತನನ್ನು ಹಿಡಿದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ  ಈ ಮೂರು ಜನ ಆರೋಪಿತರು ಕೂಡಿಕೊಂಡು  ಸಾರ್ವಜನಿಕರ ಮೊಬೈಲ್ ಗಳಿಗೆ ಕರೆ ಮಾಡಿ ನಮಗೆ ಹೊಲದಲ್ಲಿ ಬಂಗಾರದ ನಿಧಿ ಸಿಕ್ಕಿರುತ್ತದೆ , ಇಲಾಖೆಯವರಿಗೆ ಗೊತ್ತಾದಲ್ಲಿ ವಶಕ್ಕೆ ಪಡೆಯುತ್ತಾರೆ ಅದಕ್ಕಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತೇವೆಂದು ತಿಳಿಸಿ ಮೊದಲಿಗೆ 1 ಗ್ರಾಂನಷ್ಟು ಅಸಲಿ ಬಂಗಾರವನ್ನು ತೋರಿಸಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಸಾರ್ವಜನಿಕರು ಕಡಿಮೆ ಬೆಲೆಯಲ್ಲಿ ಬಂಗಾರ ಸಿಗುತ್ತದೆಂಬ ಆಸೆಯಿಂದ ಆರೋಪಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡಿ , ನಂತರ ಸಾರ್ವಜನಿಕರನ್ನು ಬೇರೆ ಸ್ಥಳಕ್ಕೆ ಕರೆಸಿ ಹಣ ಪಡೆದುಕೊಂಡು ಅವರಿಗೆ ನಕಲಿ ಬಂಗಾರದ ಗಟ್ಟಿಯನ್ನು ಕೊಟ್ಟು ಮೋಸ ಮಾಡುತ್ತಿದ್ದರು.
ಅದೇ ರೀತಿ ಆರೋಪಿತರು ಆಂಧ್ರಪ್ರದೇಶದ ವ್ಯಕ್ತಿಯೊಬ್ಬರಿಗೆ ಬಂಗಾರದ ಆಸೆಯನ್ನು ತೋರಿಸಿ ಅವರಿಗೆ ಕುಷ್ಟಗಿಗೆ ಬರಲು ತಿಳಿಸಿ ಅವರಿಗಾಗಿ ಕಾಯುತ್ತಿದ್ದಾಗ ಪೋಲಿಸರ ಬಲೆಗೆ ಬಿದ್ದಿದ್ದಾರೆ.

ಆರೋಪಿ ಬಸವರಾಜ ಕೊರಚರ ಇತನನ್ನು ವಿಚಾರಣೆಗೊಳಪಡಿಸಿದಾಗ 03 ಜನ ಆರೋಪಿತರು ರಾತ್ರಿ ವೇಳೆ ಯಲ್ಲಿ ಕುಷ್ಟಗಿ ಪಟ್ಟಣದ ವಡ್ಡರ ಓಣಿಯಲ್ಲಿ ಬಸವರಾಜ ಭೋವಿ ಅವರ ಮನೆ ಹಾಗೂ ತಾವರಗೇರಾದ ಮುದೇನೂರ ರಸ್ತೆಯಲ್ಲಿರುವ  ಎರಡು ಮನೆಗಳನ್ನು ಹಗಲು ವೇಳೆಯಲ್ಲಿ ಕಳ್ಳತನ ಮಾಡಿದ್ದು , ಆರೋಪಿ ಬಸವರಾಜ ಈತನು ತೋರಿಸಿ ಹಾಜರಪಡಿಸಿದ ಮೇರೆಗೆ ಒಟ್ಟು 50 ಗ್ರಾಂ ಬಂಗಾರದ ಆಭರಣ ಅಂ . ಕಿ . ರೂ ; 3 ಲಕ್ಷ ಬೆಲೆ ಬಾಳುವುದನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಪರಾರಿಯಾಗಿರುವರ ಪತ್ತೆಗಾಗಿ ಬಿ . ಪಿ , ಚಂದ್ರಶೇಖರ ಡಿ . ಎಸ್ . ಪಿ , ಗಂಗಾವತಿ ರವರ ನೇತೃತ್ವದಲ್ಲಿ  ಸುರೇಶ ಹೆಚ , ತಳವಾರ ಸಿಪಿಐ ಕುಷ್ಟಗಿ ವೃತ್ತ , ವಿಶ್ವನಾಥ  ಹಿರೇಗೌಡರ , ಪಿ . ಎಸ್ . ಐ . ಕುಷ್ಟಗಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರಾದ ಶ್ರೀಧರ ಪಿಸಿ 117 , ಅಮರೇಶ ಪಿಸಿ – 109 , ಶಿವರಾಜ ಪಿಸಿ 458 , ರವರನ್ನೊಳಗೊಂಡ ಒಂದು ತಂಡವನ್ನು ರಚನೆ ಮಾಡಿರುತ್ತಾರೆ .
ಸದರಿ ಆರೋಪಿತನನ್ನು ದಸ್ತಗಿರಿ ಮಾಡಿ ಕಳುವಾದ ಮಾಲನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಎಸ್ . ಪಿ . ಶ್ರೀಮತಿ ರೇಣುಕಾ ಕೆ ಸುಕುಮಾರ್  ಅಭಿನಂದಿಸಿದ್ದಾರೆ.

Please follow and like us:
error