ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ ಅ. :  ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಬೆಂಗಳೂರು ಇವರು ೨೦೧೬-೧೭ ನೇ ಸಾಲಿಗೆ ಧನಶ್ರೀ ಯೋಜನೆಯಡಿ (ಹೆಚ್.ಐ.ವಿ ಸೋಂಕಿತ ಮತ್ತು ಬಾಧಿತ ಮಹಿಳೆಯರಿಗೆ) ಒಬ್ಬ ಫಲಾನುಭವಿಗೆ ರೂ. ೨೫೦೦೦/- ನೇರ ಸಾಲ ಹಾಗೂ ರೂ. ೨೫೦೦೦/- ಸಹಾಯಧನದಂತೆ ಕೊಪ್ಪಳ ಜಿಲ್ಲೆಗೆ ೩೬ ಗುರಿ ನಿಗದಿ ಪಡಿಸಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ೧೮ ರಿಂದ ೫೦ ವರ್ಷ ವಯೋಮಿತಿಯಲ್ಲಿರಬೇಕು. ಯಾವುದೇ ಆರ್ಥಿಕ ಸಂಸ್ಥೆ/ ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು. ಗಂಡ, ಹೆಂಡತಿ ಎರಡು ಮಕ್ಕಳು ಹೊಂದಿರುವ ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಸೌಲಭ್ಯ ಹೊಂದಲು ಅರ್ಹರು. ಅರ್ಜಿದಾರಳ ಕುಟುಂಬದಲ್ಲಿ (೫:೧) ಮಹಿಳೆ ಹೆಚ್.ಐ.ವಿ ಸೋಂಕಿತಳಾಗಿದ್ದರೆ, (೫:೨) ಮಹಿಳೆ ಹೆಚ್.ಐ.ವಿ ಯಿಂದ ಬಾಧಿತಳಾಗಿದ್ದರೆ (ಹೆಂಡತಿ ಅಥವಾ ೧೮ ವರ್ಷ ಮೀರಿದ ಅವಿವಾಹಿತ ಮಗಳು) ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿರುತ್ತದೆ. ಈ ಕುರಿತಾಗಿ ಹತ್ತಿರದ ಆರೋಗ್ಯ ಕೇಂದ್ರದಲ್ಲಿನ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ವೈದ್ಯಕೀಯ ವರದಿಯನ್ನು ಪಡೆಯಬೇಕು. ಅರ್ಜಿದಾರಳು ಮತ್ತು ನಿಗಮದೊಂದಿಗೆ ಸಾಲದ ಕುರಿತಾಗಿ ಮಾಡಿಕೊಳ್ಳುವ ಒಪ್ಪಂದದ (ಎಂ.ಓ.ಯು) ರೂ. ೨೦ ಛಾಪಾಕಾಗದ, ಸಾಲ ಪಡೆಯಲು ಉದ್ದೇಶಿಸಿದ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ ವರದಿ, ಬೇರೆ ಯಾವುದೇ ಆರ್ಥಿಕ ಸಂಸ್ಥೆ/ ಬ್ಯಾಂಕ್‌ಗಳಿಂದ ಸಾಲ ಪಡೆದಿಲ್ಲ ಎಂಬ ಬಗ್ಗೆ ದೃಢೀಕರಣವನ್ನು ಅರ್ಜಿದಾರಳು ಖಾತೆ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದು ಅರ್ಜಿಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಚುಣಾವಣಾ ಗುರುತಿನ ಚೀಟಿ/ ಆಧಾರ ಗುರುತಿನ ಚೀಟಿ/ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಬಿ.ಪಿ.ಎಲ್ ಕಾರ್ಡ ಝರಾಕ್ಸ್, ಐ.ಸಿ.ಟಿ.ಸಿ/ ಪಿ.ಪಿ.ಸಿ.ಟಿ.ಸಿ ಕೇಂದ್ರಗಳಲ್ಲಿ ಪಡೆದ ಹೆಚ್.ಐ.ವಿ ಸೋಂಕು ಇರುವ ಸಂಬಂಧ ವೈದ್ಯಕೀಯ ವರದಿಯ ನಕಲು ಪ್ರತಿ, ಇತ್ತೀಚಿನ ನಾಲ್ಕು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಮೂರು ಪ್ರತಿಯಲ್ಲಿ ಸಲ್ಲಿಸಬೇಕು.
ಫಲಾನುಭವಿಗಳು ಅರ್ಜಿಯು ಉಪನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಉಚಿತವಾಗಿ ದೊರೆಯುತ್ತವೆ. ಅರ್ಜಿ ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಕಛೇರಿಗೆ ಸಲ್ಲಿಸಲು ಅ. ೨೦ ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು   ತಿಳಿಸಿದ್ದಾರೆ.

Please follow and like us:
error