ಕೊಪಳ: ತಾಲೂಕಿನ ಕಾತರಕಿ ಗುಡ್ಲಾನೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಮಾರುತೇಶ್ವರ ಕ್ರಿಕೇಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮುಕ್ತ ಕ್ರಿಕೇಟ್ ಪಂಧ್ಯಾವಳಿಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕೆ.ಎಮ್ ಎಫ್ ನಿರ್ದೇಶಕ ವೆಂಕನಗೌಡರ ಹಿರೇಗೌಡರ ಮಾತನಾಡುತ್ತಾ, ಕ್ರೀಡಾ ಕೂಟದಲ್ಲಿ ಭಾಗವಹಸುವುದರಿಂದ ಮನಸ್ಸು ಉಲ್ಲಾಸಬರಿತವಾಗಿ ಸದಾ ಚೈತನ್ಯ ಶೀಲರಾಗಿಸಲು ಮತ್ತು ಮಾನಸಿಕ, ದೈಹಿಕ ಸದೃಡತೆಗೆ ಕ್ರೀಡೆ ಸಹಕಾರಿ ಎಂದರು. ನಂತರ ತಾ.ಪಂ ಮಾಜಿ ಅಧ್ಯಕ್ಷ ಕ್ರಿಕೇಟ್ ಪಂದ್ಯಾವಳಿಯ ರಿಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ನಾಯಕಪ್ಪ ತಳವಾರ, ಮಲ್ಲಿಕಾರ್ಜುನ್ ಹಡಪದ, ಮುದಿಯಪ್ಪ ಬೇಳೂರ, ಲಕ್ಷ್ಮಣ್ಣ ಕೂಚಿ, ನಾಗರಾಜ ಹುರಕಡ್ಲಿ, ಹಿರಿಯರಾದ ರಾಮಣ್ಣ ಗುಡ್ಲಾನೂರ, ಮಲ್ಲಪ್ಪ ಗುಡ್ಲಾನೂರ, ಶಿವಪ್ಪ ಉಳ್ಳಾಗಡ್ಡಿ, ಶಿದ್ರಾಮಪ್ಪ ನಾಗಗೌಡ್ರ, ಶಂಕರಗೌಡ ನಾಗನಗೌಡ್ರ, ಪಕಿರೇಶ ಕಮ್ಮಾರ, ಮಲ್ಲಯ್ಯ ಸಾಲಿಮಠ, ಯಂಕಪ್ಪ ಕೊರಗಲ್, ವೆಂಕಟೇಶ ನಾಗನಗೌಡ್ರ ಸೇರಿದಂತೆ ಇತರರು ಇದ್ದರು. ಮಲ್ಲಪ್ಪ ಮಾಂತಪ್ಪನವರ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಜಗದಯ್ಯ ಸಾಲಿಮಠ ಸ್ವಾಗತಿಸಿದರು. ವಿಶ್ವನಾಥ ನಾಗನಗೌಡ್ರ ವಂದಿಸಿದರು
ದೈಹಿಕ ಸದೃಡತೆಗಾಗಿ ಕ್ರೀಡೆ ಅವಶ್ಯ – ವೆಂಕನಗೌಡ ಹಿರೇಗೌಡರ
Please follow and like us: